ಕುಟುಂಬದ ಬೆಂಬಲವಿದ್ದರೆ ಮಹಿಳೆಯರು ಯಾವುದೇ ಸಾಧನೆ ಮಾಡಬಹುದು: 'ಅರಣ್ಯಕ್' ನಟಿ ರವೀನಾ ಟಂಡನ್

‘ಅರಣ್ಯಕ್’ ಧಾರಾವಾಹಿ ಸರಣಿಯಲ್ಲಿ ಪ್ರಾಮಾಣಿಕ ಪೋಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರವೀನಾ, ಮಹಿಳೆಯರು ಸಮವಸ್ತ್ರ ಧರಿಸಿ ಖಡಕ್ ಆಗಿ ಕರ್ತವ್ಯ ನಿರ್ವಹಿಸುವ ಜೊತೆಗೆ ಆದರ್ಶ ಗೃಹಿಣಿಯೂ ಆಗಿರಬಲ್ಲಳು ಎಂಬ ಸಂದೇಶವನ್ನು ಧಾರಾವಾಹಿ ನೀಡುತ್ತದೆ ಎಂದರು. 
‘ಅರಣ್ಯಕ್’ ಧಾರಾವಾಹಿ ಸರಣಿಯಲ್ಲಿ ರವೀನಾ ಟಂಡನ್
‘ಅರಣ್ಯಕ್’ ಧಾರಾವಾಹಿ ಸರಣಿಯಲ್ಲಿ ರವೀನಾ ಟಂಡನ್

ಪಣಜಿ: ಕುಟುಂಬದ ಬೆಂಬಲ ದೊರೆತರೆ ಮಹಿಳೆಯರು ಉನ್ನತ ಮಟ್ಟಕ್ಕೆ ಏರಬಹುದು ಎಂದು ಖ್ಯಾತ ಬಾಲಿವುಡ್ ನಟಿ ರವೀನಾ ಟಂಡನ್ ಹೇಳಿದ್ದಾರೆ. ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೆಟ್‌ಫ್ಲಿಕ್ಸ್ ನ ಕ್ರೈಮ್ ಥ್ರಿಲ್ಲರ್ 'ಆರಣ್ಯಕ್' ಪ್ರೀಮಿಯರ್ ಪ್ರದರ್ಶನಕ್ಕೂ ಮುನ್ನ ಅವರು ಮಾತನಾಡುತ್ತಿದ್ದರು. 

‘ಅರಣ್ಯಕ್’ ಧಾರಾವಾಹಿ ಸರಣಿಯಲ್ಲಿ ಪ್ರಾಮಾಣಿಕ ಪೋಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರವೀನಾ ಮಹಿಳೆಯರು ಸಮವಸ್ತ್ರ ಧರಿಸಿ ಖಡಕ್ ಆಗಿ ಕರ್ತವ್ಯ ನಿರ್ವಹಿಸುವ ಜೊತೆಗೆ ಆದರ್ಶ ಗೃಹಿಣಿಯೂ ಆಗಿರಬಲ್ಲಳು ಎಂಬ ಸಂದೇಶವನ್ನು ಧಾರಾವಾಹಿ ನೀಡುತ್ತದೆ ಎಂದರು. 

ಕಾರ್ಪೊರೇಟ್ ವಲಯದಲ್ಲಿಯೂ ಮಹಿಳೆಯರು ತಮ್ಮ ಕೆಲಸ ಮತ್ತು ಕುಟುಂಬ ಜೀವನವನ್ನು ಸಮತೋಲನಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದವರು ಅಭಿಪ್ರಾಯಪಟ್ಟಿದ್ದಾರೆ. “ಅರಣ್ಯಕ್” ಧಾರಾವಾಹಿ ಸರಣಿ ಡಿಸೆಂಬರ್ 10 ರಿಂದ ನೆಟ್ ಫ್ಲಿಕ್ಸ್ ನಲ್ಲಿ ಪ್ರದರ್ಶನ ಪ್ರಾರಂಭಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com