ಅಮೀರ್ ಖಾನ್ ಬೆಂಬಲಿಸಿದ್ದ ಹೃತಿಕ್ ರೋಷನ್ ಗೆ ಎದುರಾಯ್ತು ಸಂಕಷ್ಟ!

ಬಾಲಿವುಡ್ ನಟ ಅಮೀರ್ ಖಾನ್ ರನ್ನು ಬೆಂಬಲಿಸಿ ಹೇಳಿಕೆ ನೀಡಿದ್ದ ನಟ ಹೃತಿಕ್ ರೋಷನ್ ಗೆ ಇದೀಗ ಸಂಕಷ್ಟ ಎದುರಾಗಿದೆ. 
ಅಮೀರ್ ಖಾನ್-ಹೃತಿಕ್ ರೋಷನ್
ಅಮೀರ್ ಖಾನ್-ಹೃತಿಕ್ ರೋಷನ್

ಬಾಲಿವುಡ್ ನಟ ಅಮೀರ್ ಖಾನ್ ರನ್ನು ಬೆಂಬಲಿಸಿ ಹೇಳಿಕೆ ನೀಡಿದ್ದ ನಟ ಹೃತಿಕ್ ರೋಷನ್ ಗೆ ಇದೀಗ ಸಂಕಷ್ಟ ಎದುರಾಗಿದೆ. 

ದೇಶದಲ್ಲಿ ಅಸಹಿಷ್ಟುತೆ ಇದೆ ಎಂದು ಹೇಳಿ ಸುದ್ದಿಯಾಗಿದ್ದ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಬಹಿಷ್ಕರಿಸುವಂತೆ ಅಭಿಯಾನ ಶುರುವಾಗಿತ್ತು. ಇನ್ನು ಈ ಚಿತ್ರ ಸಹ ಪ್ಲಾಪ್ ಆಗಿದ್ದು ಅಮೀರ್ ಖಾನ್ ಗೆ ದೊಡ್ಡ ಪೆಟ್ಟುಕೊಟ್ಟಿತ್ತು.

ಇದರಿಂದ ಚೇತರಿಸಿಕೊಳ್ಳುವಲ್ಲಿ ಅಮೀರ್ ಖಾನ್ ಗೆ ಸ್ವಲ್ಪ ಸಮಯ ಹಿಡಿಯಲಿದೆ. ಆದರೆ ಇದೀಗ ಬಹಿಷ್ಕಾರದ ಬಿಸಿ ಹೃತಿಕ್ ರೋಷನ್ ಗೆ ತಟ್ಟಿದೆ. ಹೌದು ಹೃತಿಕ್ ಅಭಿನಯದ ವಿಕ್ರಮ್ ವೇದ ಚಿತ್ರವನ್ನು ಬಹಿಷ್ಕರಿಸುವಂತೆ ಟ್ವೀಟರ್ ನಲ್ಲಿ ಅಭಿಯಾನ ಶುರುವಾಗಿದ್ದು ಸಾವಿರಾರೂ ಸಂಖ್ಯೆಯಲ್ಲಿ ನೆಟ್ಟಿಗರು ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ತಮಿಳಿನ ಸೂಪರ್ ಹಿಟ್ ಚಿತ್ರ ವಿಕ್ರಮ್ ವೇದ ಚಿತ್ರದ ರೀಮೆಕ್ ಚಿತ್ರದಲ್ಲಿ ಹೃತಿಕ್ ರೋಷನ್ ಹಾಗೂ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಇನ್ನು ಚಿತ್ರ ಶೀಘ್ರದಲ್ಲೇ ತೆರೆಗಪ್ಪಳಿಸಲಿದ್ದು ಇಂತಹ ಸಮಯದಲ್ಲಿ ಬಾಯ್ಕಾಟ್ ಎಚ್ಚರಿಕೆ ಬಂದಿರುವುದು ಚಿತ್ರತಂಡವನ್ನು ಚಿಂತೆಗೀಡುವಂತೆ ಮಾಡಿದೆ. 

ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ನೋಡಿದ್ದ ಹೃತಿಕ್ ರೋಷನ್, ಚಿತ್ರ ಹೃದಯ ಸ್ಪರ್ಶಿ ಅನುಭವ ನೀಡಿದೆ. ಚಿತ್ರ ಅದ್ಭುತವಾಗಿದ್ದು ರತ್ನದಂತ ಚಿತ್ರವನ್ನು ನೋಡದೆ ಇರಬೇಡಿ ಎಂದು ಟ್ವೀಟ್ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com