ಬಾಲಿವುಡ್ ಗಡಗಡ: ಅಮೀರ್ ಚಿತ್ರದಿಂದಲೂ ಮೇಲೇಳಲಿಲ್ಲ; 3ನೇ ದಿನಕ್ಕೆ ಲಾಲ್ ಸಿಂಗ್ ಚಡ್ಡಾ ಕಲೆಕ್ಷನ್ ಎಷ್ಟು?

ದಕ್ಷಿಣ ಭಾರತದ ಚಿತ್ರಗಳ ಮುಂದೆ ಸೊರಗಿದ್ದ ಬಾಲಿವುಡ್ ಚಿತ್ರರಂಗವನ್ನು ಖಾನ್ ತ್ರಯರಲ್ಲಿ ಒಬ್ಬರಾದ ಬಾಲಿವುಡ್ ನಟ ಅಮೀರ್ ಖಾನ್ ರಿಂದಲೂ ಮೇಲೆತ್ತಲು ಸಾಧ್ಯವಾಗಲಿಲ್ಲ. ಬರೋಬ್ಬರಿ 200 ಕೋಟಿ ಬಜೆಟ್ ನ ಚಿತ್ರ ಲಾಲ್ ಸಿಂಗ್ ಚಡ್ಡಾ ಬಿಡುಗಡೆಯಾದ ಮೂರನೇ ದಿನವೂ ಗಳಿಕೆಯಲ್ಲಿ ತಿಣುಕಾಡುತ್ತಿದೆ. 
ಲಾಲ್ ಸಿಂಗ್ ಚಡ್ಡಾ ಚಿತ್ರದ ಫೋಸ್ಟರ್
ಲಾಲ್ ಸಿಂಗ್ ಚಡ್ಡಾ ಚಿತ್ರದ ಫೋಸ್ಟರ್

ದಕ್ಷಿಣ ಭಾರತದ ಚಿತ್ರಗಳ ಮುಂದೆ ಸೊರಗಿದ್ದ ಬಾಲಿವುಡ್ ಚಿತ್ರರಂಗವನ್ನು ಖಾನ್ ತ್ರಯರಲ್ಲಿ ಒಬ್ಬರಾದ ಬಾಲಿವುಡ್ ನಟ ಅಮೀರ್ ಖಾನ್ ರಿಂದಲೂ ಮೇಲೆತ್ತಲು ಸಾಧ್ಯವಾಗಲಿಲ್ಲ. ಬರೋಬ್ಬರಿ 200 ಕೋಟಿ ಬಜೆಟ್ ನ ಚಿತ್ರ ಲಾಲ್ ಸಿಂಗ್ ಚಡ್ಡಾ ಬಿಡುಗಡೆಯಾದ ಮೂರನೇ ದಿನವೂ ಗಳಿಕೆಯಲ್ಲಿ ತಿಣುಕಾಡುತ್ತಿದೆ. 

ಮಿಸ್ಟರ್ ಪರ್ಫೆಕ್ಟ್ ಎಂದೇ ಖ್ಯಾತರಾಗಿದ್ದ ಅಮೀರ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ಕಳೆದ ಆಗಸ್ಟ್ 11ರಂದು ಬಿಡುಗಡೆಯಾಗಿತ್ತು. ಆದರೆ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಕೇಳಿ ಬಂದಿತ್ತು. ಇನ್ನು ಅಮೀರ್ ಖಾನ್ ರ ಹಳೆಯ ಹೇಳಿಕೆಗಳು ಚಿತ್ರಕ್ಕೆ ಹಿನ್ನಡೆ ಉಂಟು ಮಾಡಿತ್ತು. 

ಅಲ್ಲದೆ ಚಿತ್ರವನ್ನು ಬಹಿಷ್ಕರಿಸುವಂತೆ ಟ್ವೀಟರ್ ನಲ್ಲಿ ಅಭಿಮಾನಗಳು ನಡೆದಿದ್ದು 2 ಲಕ್ಷಕ್ಕೂ ಹೆಚ್ಚು ಮಂದಿ ಈ ಬಗ್ಗೆ ಟ್ವೀಟ್ ಮಾಡಿದ್ದರು. ಬಾಯ್ಕಾಟ್ ಅಭಿಯಾನ ತೀವ್ರತೆ ಅರಿತ ಅಮೀರ್ ಖಾನ್ ಚಿತ್ರವನ್ನು ಬಹಿಷ್ಕರಿಸದಂತೆ ಮನವಿ ಮಾಡಿದ್ದರು. 

ಎಷ್ಟೇ ಮನವಿ ಮಾಡಿದರೂ ಅಭಿಮಾನಿಗಳು ಮಾತ್ರ ಚಿತ್ರಮಂದಿರಗಳ ಕಡೆ ಮುಖ ಮಾಡುತ್ತಿಲ್ಲ. ಹೀಗಾಗಿ ಬಿಡುಗಡೆ ದಿನದಿಂದಲೂ ಸಾವಿರಾರೂ ಶೋಗಳು ಕ್ಯಾನ್ಸೆಲ್ ಆಗಿವೆ. 

ಇನ್ನು ಚಿತ್ರ ಬಿಡುಗಡೆಯಾದ ಮೊದಲ ದಿನ 12 ಕೋಟಿ ಗಳಿಸಿತ್ತು. ಇದು ಅಮೀರ್ ಖಾನ್ ನ ಇತ್ತೀಚಿನ ಚಿತ್ರಗಳ ಮೊದಲ ದಿನದ ಗಳಿಕೆಯಲ್ಲಿ ಅತೀ ಕಡಿಮೆ ಗಳಿಕೆ ಮಾಡಿದ ಚಿತ್ರವಾಗಿದೆ. ಇನ್ನು ಮೊದಲ ಎರಡು ದಿನದ ಒಟ್ಟಾರೆ ಕಲೆಕ್ಷನ್ 19 ಕೋಟಿ ಆಗಿತ್ತು. ಇದೀಗ ಮೂರನೇ ದಿನ ಅಂದಾಜು 9 ಕೋಟಿ ಗಳಿಕೆ ಮಾಡುವ ಸಾಧ್ಯತೆ ಇದೆ. ಇದರೊಂದಿಗೆ ಚಿತ್ರದ ಒಟ್ಟು ಕಲೆಕ್ಷನ್ 27 ಕೋಟಿ ರುಪಾಯಿ ಎಂದು ಅಂದಾಜಿಸಲಾಗಿದೆ. 

ಇನ್ನು ಇದೇ ವರ್ಷದಲ್ಲಿ ಬಿಡುಗಡೆಯಾಗಿದ್ದ ದಕ್ಷಿಣ ಭಾರತದ ಚಿತ್ರಗಳಾದ ಆರ್ ಆರ್ ಆರ್ ಮತ್ತು ಕೆಜಿಎಫ್ ಚಿತ್ರ ಬಾಲಿವುಡ್ ಬಾಕ್ಸಾಫೀಸ್ ನಲ್ಲಿ ದೂಳೆಬ್ಬಿಸಿದ್ದವು. ಆರ್ ಆರ್ ಆರ್ ಚಿತ್ರ ಒಟ್ಟಾರೆ 250 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. 

ಇನ್ನು ಕೆಜಿಎಫ್ 2 ಚಿತ್ರ ಮೊದಲ ದಿನವೇ 53 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಬಾಲಿವುಡ್ ಇತಿಹಾಸದಲ್ಲೇ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ಖ್ಯಾತಿಗೆ ಭಾಜನವಾಗಿತ್ತು. ಇನ್ನು ಇದೇ ಅಮೀರ್ ಖಾನ್ ಅಭಿನಯದ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರ 51 ಕೋಟಿ ರೂಪಾಯಿ ಮೊದಲ ದಿನ ಕಲೆಕ್ಷನ್ ಮಾಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com