'ಸದ್ಯಕ್ಕೆ ಅಸ್ಸಾಂಗೆ ಬರಬೇಡಿ': ಅಮೀರ್ ಖಾನ್ ಗೆ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದೇಕೆ?

ಭಾರೀ ವಿರೋಧ, ಬಹಿಷ್ಕಾರದ ಬಳಿಕ ಬಿಡುಗಡೆಯಾಗಿರುವ ಬಾಲಿವುಡ್ ನಟ ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಸಿನಿಮಾಗಿದ್ದ ಎಲ್ಲಾ ಅಡೆತಡೆ ನಿವಾರಣೆಯಾಗಿದ್ರೂ ಅಮೀರ್ ಖಾನ್ ಅವರಿಗೆ ಹಿನ್ನಡೆಯಾಗುತ್ತಿದೆ. 
ಅಮೀರ್ ಖಾನ್-ಹಿಮಂತ್ ಶರ್ಮಾ
ಅಮೀರ್ ಖಾನ್-ಹಿಮಂತ್ ಶರ್ಮಾ

ಗುವಾಹಟಿ: ಭಾರೀ ವಿರೋಧ, ಬಹಿಷ್ಕಾರದ ಬಳಿಕ ಬಿಡುಗಡೆಯಾಗಿರುವ ಬಾಲಿವುಡ್ ನಟ ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಸಿನಿಮಾಗಿದ್ದ ಎಲ್ಲಾ ಅಡೆತಡೆ ನಿವಾರಣೆಯಾಗಿದ್ರೂ ಅಮೀರ್ ಖಾನ್ ಅವರಿಗೆ ಹಿನ್ನಡೆಯಾಗುತ್ತಿದೆ. 

ಈ ವಾರ ಅಸ್ಸಾಂಗೆ ಭೇಟಿ ನೀಡಲು ಮುಂದಾಗಿದ್ದ ಅಮೀರ್ ಖಾನ್ ಅವರಿಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬರಬೇಡಿ ಎಂದು ಹೇಳಿದ್ದಾರೆ.

ಅಸ್ಸಾಂ ರಾಜ್ಯವು 'ಹರ್ ಘರ್ ತಿರಂಗ' ಆಚರಿಸುತ್ತಿರುವ ಕಾರಣದಿಂದ ಆಗಸ್ಟ್ 13ರಿಂದ 15ರವರೆಗೆ ತಮ್ಮ ಉದ್ದೇಶಿತ ಭೇಟಿಯನ್ನು ನಂತರದ ದಿನಾಂಕಕ್ಕೆ ಮುಂದೂಡುವಂತೆ ಅಮೀರ್ ಖಾನ್ ಬಳಿ ಸಿಎಂ ಹಿಮಂತ ಬಿಸ್ವಾ ಶರ್ಮಾ ಕೇಳಿಕೊಂಡಿದ್ದಾರೆ. ತಮ್ಮ ಚಿತ್ರದ ಪ್ರಚಾರಕ್ಕಾಗಿ ಅಮೀರ್ ಖಾನ್ ಗುವಾಹಟಿಗೆ ಭೇಟಿ ನೀಡಲು ಬಯಸಿದ್ದರು. ಆದರೆ ಈಗ ಅವರು ಆಗಸ್ಟ್ 16ರಂದು ಭೇಟಿ ನೀಡುವ ನಿರೀಕ್ಷೆಯಿದೆ.

'ಅಮೀರ್ ಖಾನ್ ಇಲ್ಲಿಗೆ ಬರಲು ಬಯಸಿದ್ದರು ಮತ್ತು ನನ್ನೊಂದಿಗೆ ಮಾತನಾಡಿದ್ದಾರೆ. ಆದರೆ ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಇಡೀ ತಿರಂಗ ಉಪಕ್ರಮ ಮತ್ತು ಅದರ ಮಹತ್ವವನ್ನು ಕೇಂದ್ರೀಕರಿಸಿರುವುದರಿಂದ ಅದನ್ನು ದುರ್ಬಲಗೊಳಿಸುವುದು ನಮಗೆ ಇಷ್ಟವಿರಲಿಲ್ಲ. ಆದ್ದರಿಂದ ನಾನು ಅವರ ಭೇಟಿಯನ್ನು ಮುಂದೂಡಲು ವಿನಂತಿಸಿದೆ. ಸ್ವಾತಂತ್ರ್ಯ ದಿನಾಚರಣೆಯ ನಂತರ ಬನ್ನಿ ಎಂದು ಹೇಳಿದೆ ಎಂದು ಸಿಎಂ ಶರ್ಮಾ ಗುವಾಹಟಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ನಾವಿಬ್ಬರೂ ಆಗಾಗ್ಗೆ ಫೋನ್‌ನಲ್ಲಿ ಪರಸ್ಪರ ಮಾತನಾಡುತ್ತೇವೆ. ನಾವು ಆಹ್ವಾನಿಸಿದಾಗಲೆಲ್ಲಾ ಅವರು  ಭೇಟಿ ನೀಡುತ್ತಾರೆಂದು ಸಿಎಂ ಹೇಳಿದರು. ಅಮೀರ್ ಖಾನ್ ಅಸ್ಸಾಂಗೆ ಭೇಟಿ ನೀಡಿದಾಗ ತಾವು ಅವರೊಂದಿಗೆ, ಚಿತ್ರದ ಸಂಪೂರ್ಣ ಸಿಬ್ಬಂದಿಯೊಂದಿಗೆ ಚಲನಚಿತ್ರವನ್ನು ವೀಕ್ಷಿಸುವುದಾಗಿಯೂ ಸಿಎಂ ಅಮೀರ್ ಖಾನ್ ಗೆ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.

ಅಮೀರ್ ಖಾನ್ ಇತ್ತೀಚೆಗೆ ಅಸ್ಸಾಂ ರಾಜ್ಯದ ಪ್ರವಾಹ ಪರಿಹಾರಕ್ಕೆ ದೇಣಿಗೆ ನೀಡಿದ್ದರು. ಮುಖ್ಯಮಂತ್ರಿಯಿಂದ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದರು. ಈ ವರ್ಷ ಜೂನ್ 27ರಂದು ಹಿಮಂತ ಬಿಸ್ವಾ ಶರ್ಮಾ ಅವರು ಟ್ವೀಟ್ ಮಾಡಿ, 'ಪ್ರಖ್ಯಾತ ಬಾಲಿವುಡ್ ನಟ ಅಮೀರ್ ಖಾನ್ ಅವರು ಸಿಎಂ ಪರಿಹಾರ ನಿಧಿಗೆ  25 ಲಕ್ಷ ರೂ. ಉದಾರ ಕೊಡುಗೆ ನೀಡುವ ಮೂಲಕ ನಮ್ಮ ರಾಜ್ಯದ ಪ್ರವಾಹ ಪೀಡಿತ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ. ಅವರ ಕಾಳಜಿಗೆ ನನ್ನ ಪ್ರಾಮಾಣಿಕ ಕೃತಜ್ಞತೆಗಳು ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com