'ಮಿರ್ಜಾಪುರ್ 3' ಚಿತ್ರೀಕರಣ ಪೂರ್ಣಗೊಳಿಸಿದ ಶ್ವೇತಾ ತ್ರಿಪಾಠಿ

ನಟಿ ಶ್ವೇತಾ ತ್ರಿಪಾಠಿಯವರು ಮಿರ್ಜಾಪುರ್ ಸೀಸನ್ 3 ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.
ಶ್ವೇತಾ ತ್ರಿಪಾಠಿ
ಶ್ವೇತಾ ತ್ರಿಪಾಠಿ
Updated on: 

ನಟಿ ಶ್ವೇತಾ ತ್ರಿಪಾಠಿಯವರು ಮಿರ್ಜಾಪುರ್ ಸೀಸನ್ 3 ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಇನ್ಸ್ಟಾಗ್ರಾಮ್'ನಲ್ಲಿ ಬರೆದುಕೊಂಡಿರುವ ಶ್ವೇತಾ ಅವರು, ಮಿರ್ಜಾಪುರ್ ಸೀಸನ್ 3 ಕಥೆ ಕೇಳಿದ ಬಳಿಕ ಚಿತ್ರೀಕರಣ ಯಾವಾಗ ಆರಂಭವಾಗುತ್ತದೆ ಎಂದು ಕಾದು ಕುಳಿತಿದ್ದೆ. ಇದೀಗ ನನ್ನ ಪಾತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ನೀವೆಲ್ಲರೂ ಯಾವಾಗ ವೀಕ್ಷಿಸುತ್ತೀರಿ ಎಂದು ಇದೀಗ ಕಾಯುತ್ತಿದ್ದೇನೆ. ನನ್ನ ಹೃದಯದ ಒಂದು ಭಾಗವಾಗಿರುವ ಚಿತ್ರೀಕರಣ ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ.

ಮಿರ್ಜಾಪುರ್ 3 ಆ್ಯಕ್ಷನ್ ಕ್ರೈಮ್ ಥ್ರಿಲ್ಲರ್ ಹಿಂದಿಯಲ್ಲಿ ಬರುತ್ತಿರುವ ವೆಬ್ ಸರಣಿಯಾಗಿದ್ದು, ಈ ವೆಬ್ ಸರಣಿ ಹಲವರ ಮನಗೆದ್ದಿದೆ. ವೆಬ್ ಸರಣಿಯಲ್ಲಿ ಶ್ವೇತಾ ಅವರು ಗೋಲು ಗುಪ್ತಾ ಪಾತ್ರದಲ್ಲಿ ನಟಿಸಿದ್ದಾರೆ.

ಪ್ರೈಮ್ ವಿಡಿಯೋ ರಚಿಸಿದ ರಣ್ ಅಂಶುಮಾನ್ ಅವರು ಮಾತನಾಡಿ, ನಾನು ಭೇಟಿಯಾದ ಅತ್ಯಂತ ಧೈರ್ಯಶಾಲಿ, ಕಠಿಣ ಮತ್ತು ಪ್ರೀತಿಯ ಹುಡುಗಿಯರಲ್ಲಿ ಶ್ವೇತಾ ಕೂಡ ಒಬ್ಬರಾಗಿದ್ದಾರೆಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com