ಶಾರೂಕ್ ಖಾನ್-ದೀಪಿಕಾ ಪಡುಕೋಣೆ 'ಪಠಾಣ್' ಚಿತ್ರಕ್ಕೆ ಮುಸ್ಲಿಂ ಸಂಘಟನೆಯಿಂದ ಭಾರೀ ವಿರೋಧ!

ಶಾರೂಕ್ ಖಾನ್-ದೀಪಿಕಾ ಪಡುಕೋಣೆ ಅಭಿನಯದ ಮುಂದಿನ ವರ್ಷ ತೆರೆಗೆ ಬರಲಿರುವ 'ಪಠಾಣ್' ಚಿತ್ರದ ಆರಂಭದಲ್ಲಿಯೇ ಅಪಸ್ವರ ಕೇಳಿಬಂದಿದೆ. ಈ ವಾರದ ಆರಂಭದಲ್ಲಿ ಬಿಡುಗಡೆಯಾದ ಅದರ ಬೇಷರಮ್ ರಂಗ್ ಹಾಡು ಸಾಕಷ್ಟು ಸದ್ದು ಮಾಡುತ್ತಿದ್ದು. ಭಾರೀ ವಿರೋಧ, ಟೀಕೆಗಳು ಕೂಡ ವ್ಯಕ್ತವಾಗುತ್ತಿದೆ. 
ಬೇಷರಮ್ ರಂಗ್ ಹಾಡಿನಲ್ಲಿ ಶಾರೂಕ್ ಖಾನ್-ದೀಪಿಕಾ ಪಡುಕೋಣೆ
ಬೇಷರಮ್ ರಂಗ್ ಹಾಡಿನಲ್ಲಿ ಶಾರೂಕ್ ಖಾನ್-ದೀಪಿಕಾ ಪಡುಕೋಣೆ
Updated on: 

ಭೋಪಾಲ್: ಶಾರೂಕ್ ಖಾನ್-ದೀಪಿಕಾ ಪಡುಕೋಣೆ ಅಭಿನಯದ ಮುಂದಿನ ವರ್ಷ ತೆರೆಗೆ ಬರಲಿರುವ 'ಪಠಾಣ್' ಚಿತ್ರದ(Pathaan) ಆರಂಭದಲ್ಲಿಯೇ ಅಪಸ್ವರ ಕೇಳಿಬಂದಿದೆ. ಈ ವಾರದ ಆರಂಭದಲ್ಲಿ ಬಿಡುಗಡೆಯಾದ ಅದರ ಬೇಷರಮ್ ರಂಗ್ ಹಾಡು ಸಾಕಷ್ಟು ಸದ್ದು ಮಾಡುತ್ತಿದ್ದು. ಭಾರೀ ವಿರೋಧ, ಟೀಕೆಗಳು ಕೂಡ ವ್ಯಕ್ತವಾಗುತ್ತಿದೆ. 

ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರ ಅವರು ದೀಪಿಕಾ ಪಡುಕೋಣೆ(Deepika Padukone) ಹಾಡಿನಲ್ಲಿ ಧರಿಸಿದ್ದ ಕೇಸರಿ ಬಿಕಿನಿಗೆ ಆಕ್ಷೇಪ ವ್ಯಕ್ತಪಡಿಸಿ ಚಿತ್ರವನ್ನು ರಾಜ್ಯದಲ್ಲಿ ನಿಷೇಧಿಸುವುದಾಗಿ ಹೇಳಿದ್ದರು. ಇದೀಗ ಮುಸ್ಲಿಂ ಸಂಘಟನೆಯೊಂದು ಚಿತ್ರವನ್ನು ನಿಷೇಧಿಸಬೇಕೆಂದು ಒತ್ತಾಯ ಮಾಡುತ್ತಿದೆ. 

ದೆಹಲಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಅಖಿಲ ಭಾರತ ಮುಸ್ಲಿಂ ತೆವ್ಹಾರ್ ಸಮಿತಿ(AIMTC) ಚಿತ್ರದ ಶೀರ್ಷಿಕೆ ಮತ್ತು ಅಶ್ಲೀಲ ದೃಶ್ಯಗಳನ್ನು ಬದಲಾಯಿಸಬೇಕು, ಇಲ್ಲದಿದ್ದರೆ ಚಿತ್ರವನ್ನು ನಿಷೇಧಿಸಬೇಕೆಂದು ಒತ್ತಾಯಿಸಿದೆ. ಕಳೆದೆರಡು ದಿನಗಳಿಂದ ದೇಶದ ನಾನಾಭಾಗಗಳಿಂದ ಅಸಂಖ್ಯಾತ ಫೋನ್ ಕರೆಗಳು ನನಗೆ ಬಂದಿವೆ. ಚಿತ್ರದಲ್ಲಿ ಸಾಕಷ್ಟು ಆಕ್ಷೇಪಾರ್ಹ ದೃಶ್ಯಗಳಿದ್ದು ಮುಸ್ಲಿಂ ಸಮುದಾಯವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಹೇಳಿದೆ. 

ಇಂತಹ ಚಿತ್ರಕ್ಕೆ ಪಠಾಣ್ ಎಂದು ಹೆಸರಿಸುವುದು ಪಠಾಣ್ ಕುಲದ ಭಾವನೆಗಳನ್ನು ಅವಮಾನಿಸಿದಂತಿದೆ. ಅದರ ಹೆಸರನ್ನು ಬದಲಾಯಿಸದಿದ್ದರೆ ಚಿತ್ರವನ್ನು ನಿಷೇಧಿಸಬೇಕೆಂದು ಒತ್ತಾಯಿಸುತ್ತೇವೆ ಎಂದು ಭೋಪಾಲ್ ಮೂಲದ ಸಂಘಟನೆ ಮುಖ್ಯಸ್ಥ ಪೀರ್ಜಾದಾ ಖುರ್ರಂ ಮಿಯಾನ್ ಚಿಶ್ತಿ ಹೇಳಿದ್ದಾರೆ.

ಶೀಘ್ರದಲ್ಲೇ ಮುಂಬೈ ಮತ್ತು ತೆಲಂಗಾಣದಲ್ಲಿರುವ ನಮ್ಮ ಘಟಕಗಳು ಎಫ್‌ಐಆರ್‌ಗಳನ್ನು ದಾಖಲಿಸುವ ಮೂಲಕ ಚಿತ್ರದ ನಿರ್ಮಾಪಕರು ಮತ್ತು ನಟರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿವೆ. ಸ್ಥಳೀಯ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ. ಚಿತ್ರದಲ್ಲಿ ಶಾರೂಕ್ ಖಾನ್(Sharukh Khan) ನಾಯಕನಾಗಿರುವುದು ನಮಗೆ ಮುಖ್ಯವಲ್ಲ, ಚಿತ್ರದ ಬಗ್ಗೆ ನಮ್ಮ ನಿಲುವು ಬದಲಾಗುವುದಿಲ್ಲ ಎಂದು ಎಐಎಂಟಿಸಿ ಮುಖ್ಯಸ್ಥರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com