ಬಾಲಿವುಡ್ ನಲ್ಲಿ 34 ವರ್ಷ ಪೂರೈಸಿದ ಸಲ್ಮಾನ್ ಖಾನ್, ಹೊಸ ಸಿನಿಮಾದ ಹೆಸರು ಘೋಷಣೆ

ಬಾಲಿವುಡ್ ನ ಬಹು ಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಿನಿಯಾನಕ್ಕೆ ಇಂದಿಗೆ 34 ವರ್ಷ ತುಂಬಿದೆ. ಇದೇ ಸಂಭ್ರಮದಲ್ಲಿ ಅವರು ತಮ್ಮ ಹೊಸ ಸಿನಿಮಾದ ಹೆಸರು ಘೋಷಿಸಿದ್ದಾರೆ. 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್'  ಅವರ ಹೊಸ ಚಿತ್ರವಾಗಿದೆ.
ಸಲ್ಮಾನ್ ಖಾನ್
ಸಲ್ಮಾನ್ ಖಾನ್

ಮುಂಬೈ: ಬಾಲಿವುಡ್ ನ ಬಹು ಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸಿನಿಯಾನಕ್ಕೆ ಇಂದಿಗೆ 34 ವರ್ಷ ತುಂಬಿದೆ. ಇದೇ ಸಂಭ್ರಮದಲ್ಲಿ ಅವರು ತಮ್ಮ ಹೊಸ ಸಿನಿಮಾದ ಹೆಸರು ಘೋಷಿಸಿದ್ದಾರೆ. 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಅವರ ಹೊಸ ಚಿತ್ರವಾಗಿದೆ.

ತನ್ನ ಟ್ವೀಟರ್ ಖಾತೆಯಲ್ಲಿ ಕಳೆದ ಮೂರು ದಶಕಗಳಿಂದ ತನ್ನನ್ನು ಪ್ರೀತಿಯಿಂದ ಬೆಳೆಸಿರುವ ಅಭಿಮಾನಿಗಳಿಗೆ ಧನ್ಯವಾದ ಹೇಳುವ ವೀಡಿಯೊದೊಂದಿಗೆ  ಚಿತ್ರದ ಶೀರ್ಷಿಕೆ ಮತ್ತು ಲುಕ್ ನ್ನು ಸಲ್ಮಾನ್ ಖಾನ್ ಹಂಚಿಕೊಂಡಿದ್ದಾರೆ. "34 ವರ್ಷಗಳ ಹಿಂದೆಯೂ ಈಗಿನಿಂತಿತ್ತು. 34 ವರ್ಷಗಳ ನಂತರವೂ ಈಗಿನಂತಿರಲಿದೆ ಎಂದು ಹೇಳುವ ಮೂಲಕ ತನನ್ನು ಬೆಳೆಸಿದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಚಿತ್ರದ ಉಳಿದ ತಾರಾಗಣ ಮತ್ತು ನಿರ್ದೇಶಕರನ್ನು ನಿರ್ಮಾಪಕರು ಇನ್ನೂ ಘೋಷಿಸಬೇಕಾಗಿದೆ. 56 ವರ್ಷದ ಖಾನ್, ಸೂರಜ್ ಬರ್ಜಾತ್ಯಾ ಅವರ 'ಮೈನೆ ಪ್ಯಾರ್ ಕಿಯಾ (1989) ಸಿನಿಮಾದೊಂದಿಗೆ ನಾಯಕನಾಗಿ ಪಾದಾರ್ಪಣೆ ಮಾಡಿದರು. ಅದಕ್ಕೂ ಮುಂಚೆ 1988 ರ ಬಿವಿ ಹೋ ತೋ ಐಸಿ ಚಿತ್ರದೊಂದಿಗೆ ಬಾಲಿವುಡ್‌ನಲ್ಲಿ ಕಾಣಿಸಿಕೊಂಡಿದ್ದರು. ಅಂದಿನಿಂದ, ಹಮ್ ಆಪ್ಕೆ ಹೈ ಕೌನ್‌ನಂತಹ ಅನೇಕ ಕಮರ್ಷಿಯಲ್ ಹಿಟ್ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಖಾಮೋಶಿ, ದಿ ಮ್ಯೂಸಿಕಲ್, ಅಂದಾಜ್ ಅಪ್ನಾ ಅಪ್ನಾ, ಮುಜ್ಸೆ ಶಾದಿ ಕರೋಗಿ, ನೋ ಎಂಟ್ರಿ, ವಾಂಟೆಡ್, ದಬಾಂಗ್, ಏಕ್ ಥಾ ಟೈಗರ್ , ಸುಲ್ತಾನ್ ಮತ್ತು ಟೈಗರ್ ಜಿಂದಾ ಹೈ ಅಂತಹ ಅನೇಕ ಚಿತ್ರಗಳು ಹಿಟ್ ಆಗಿವೆ. ಆಂಟಿಮ್ ಖಾನ್ ಅವರ ಕೊನೆಯ ಚಿತ್ರವಾಗಿದೆ. ಇದರಲ್ಲಿ ಅವರ ಸೋದರ ಮಾವ ಆಯುಷ್ ಶರ್ಮಾ ಅವರೊಂದಿಗೆ ಕಾಣಿಸಿಕೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com