ತಮ್ಮ 20 ವರ್ಷಗಳ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಸಮಾನ ವೇತನ ಪಡೆದ ಪ್ರಿಯಾಂಕಾ ಚೋಪ್ರಾ
ನಟಿ ಪ್ರಿಯಾಂಕಾ ಚೋಪ್ರಾ ಜೋನಸ್ ಅವರು ತಮ್ಮ ಮುಂಬರುವ ಅಮೆಜಾನ್ ಪ್ರೈಮ್ ವಿಡಿಯೋ ಸರಣಿ 'ಸಿಟಾಡೆಲ್'ಗಾಗಿ ಮೊದಲ ಬಾರಿಗೆ ತಮ್ಮ ಸಹ ನಟನಿಗೆ ಸಮಾನವಾದ ವೇತನ ಪಡೆದಿರುವುದಾಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
Published: 08th December 2022 12:47 PM | Last Updated: 08th December 2022 01:22 PM | A+A A-

ಪ್ರಿಯಾಂಕಾ ಛೋಪ್ರಾ
ಮುಂಬೈ: ನಟಿ ಪ್ರಿಯಾಂಕಾ ಚೋಪ್ರಾ ಜೋನಸ್ ಅವರು ತಮ್ಮ ಮುಂಬರುವ ಅಮೆಜಾನ್ ಪ್ರೈಮ್ ವಿಡಿಯೋ ಸರಣಿ 'ಸಿಟಾಡೆಲ್'ಗಾಗಿ ಮೊದಲ ಬಾರಿಗೆ ತಮ್ಮ ಸಹ ನಟನಿಗೆ ಸಮಾನವಾದ ವೇತನ ಪಡೆದಿರುವುದಾಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಅವರು 20 ವರ್ಷಗಳಿಂದಲೂ ಚಿತ್ರರಂಗದಲ್ಲಿ ನಟಿಸುತ್ತಿದ್ದಾರೆ.
ನಾನು ಈವರೆಗೂ ಬಾಲಿವುಡ್‌ನಲ್ಲಿ ಎಂದಿಗೂ ಸಮಾನ ವೇತನವನ್ನು ಪಡೆದಿಲ್ಲ ಎಂದು ಬಿಬಿಸಿಯ 100 ವುಮೆನ್ (ದಿ ಇಂಡಿಪೆಂಡೆಂಟ್ ಮೂಲಕ) ಸಂದರ್ಶನದಲ್ಲಿ ಪ್ರಿಯಾಂಕಾ ಹೇಳಿದ್ದಾರೆ.
ನನ್ನ ಸಹನಟನ ಸಂಬಳದ ಶೇ 10 ರಷ್ಟನ್ನು ನಾನು ಪಡೆಯುತ್ತಿದ್ದೆ. ಈ ವೇತನದ ಅಂತರ ದೊಡ್ಡದಾಗಿದೆ ಮತ್ತು ಗಣನೀಯವಾಗಿ ದೊಡ್ಡದಾಗಿದೆ. ಇನ್ನೂ ಅನೇಕ ಮಹಿಳೆಯರು ಇದೇ ರೀತಿಯಲ್ಲಿ ವೇತನ ಪಡೆಯುತ್ತಿದ್ದಾರೆ. ನನ್ನ ಪೀಳಿಗೆಯ ಮಹಿಳಾ ನಟಿಯರು ಖಂಡಿತವಾಗಿಯೂ ಸಮಾನ ವೇತನ ಕೇಳಿದ್ದಾರೆ. ನಾವು ಕೇಳಿದ್ದೇವೆ, ಆದರೆ ನಮಗೆ ಅದು ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.
ಬಾಲಿವುಡ್ ಸಿನಿಮಾಗಳಲ್ಲಿ ಕೆಲಸ ಮಾಡುವಾಗ ಲಿಂಗಭೇದಭಾವದ ವಿರುದ್ಧ ಹೋರಾಡಿದ ಇತರ ವಿಧಾನಗಳನ್ನು ಪ್ರಿಯಾಂಕಾ ವಿವರಿಸಿದ್ದಾರೆ. 'ಸೆಟ್‌ನಲ್ಲಿ ಗಂಟೆಗಳ ಕಾಲ ಕುಳಿತುಕೊಳ್ಳುವುದು ಸಂಪೂರ್ಣವಾಗಿ ಸರಿ ಎಂದು ನಾನು ಭಾವಿಸಿದೆ. ಆದರೆ, ನನ್ನ ಸಹನಟ ಅವರಿಗೆ ಬೇಕಾದ ಸಮಯವನ್ನು ತೆಗೆದುಕೊಳ್ಳುತ್ತಾರೆ. ಯಾವಾಗ ಸೆಟ್‌ಗೆ ಬರಬೇಕು ಎಂದು ಅವರು ಬಯಸುತ್ತಾರೋ ಆಗ ನಾವು ಶೂಟ್ ಮಾಡಲು ನಿರ್ಧರಿಸುತ್ತೇವೆ' ಎಂದು ಅವರು ಹೇಳಿದರು.
ಇದನ್ನೂ ಓದಿ: ಪುರುಷ-ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ: ಚಿತ್ರೋದ್ಯಮ ಸಹ ಇದನ್ನು ಅನುಸರಿಸಬೇಕು- ನಟಿ ರಮ್ಯಾ
ನನ್ನನ್ನು 'ಕಪ್ಪು ಬೆಕ್ಕು' ಮತ್ತು 'ಕಪ್ಪುಬಣ್ಣ' (ಡಸ್ಕಿ) ಎಂದು ಕರೆಯುತ್ತಿದ್ದರು. ಅಂದರೆ, ನಾವೆಲ್ಲರೂ ಅಕ್ಷರಶಃ ಎಣ್ಣೆಗೆಂಪು ಬಣ್ಣದಲ್ಲಿರುವ ದೇಶದಲ್ಲಿ 'ಡಸ್ಕಿ' ಎಂದರೆ ಏನು?. ನಾನು ಸಾಕಷ್ಟು ಸುಂದರವಾಗಿಲ್ಲ ಎಂದು ನಾನು ಭಾವಿಸಿದೆ. ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ ಎಂದು ನಾನು ನಂಬಿದ್ದೇನೆ. ಬಿಳಿ ಮೈಬಣ್ಣದ ನನ್ನ ಸಹ ನಟರಿಗಿಂತ ನಾನು ಬಹುಶಃ ಸ್ವಲ್ಪ ಹೆಚ್ಚು ಪ್ರತಿಭಾವಂತೆಯಾಗಿದ್ದೆ' ಎಂದು ತಿಳಿಸಿದ್ದಾರೆ.
ಅಮೆಜಾನ್ ಪ್ರೈಮ್ ವೀಡಿಯೊದ ಮುಂಬರುವ 'ಸಿಟಾಡೆಲ್' ವೆಬ್ ಸರಣಿಯನ್ನು 'ಅವೆಂಜರ್ಸ್: ಇನ್ಫಿನಿಟಿ ವಾರ್' ನಿರ್ದೇಶಕರಾದ ಜೋ ಮತ್ತು ಆಂಥೋನಿ ರುಸ್ಸೋ ಅವರು ನಿರ್ದೇಶಿಸಿದ್ದಾರೆ. ಇದರಲ್ಲಿ ಪ್ರಿಯಾಂಕಾ ಮತ್ತು ರಿಚರ್ಡ್ ಮ್ಯಾಡೆನ್ ನಟಿಸಿದ್ದಾರೆ.