ಮತ್ತೋರ್ವ ಕನ್ನಡತಿ ಜೊತೆ ಸಲ್ಮಾನ್ ಖಾನ್ ಡೇಟಿಂಗ್: ತನಗಿಂತ 24 ವರ್ಷ ಕಿರಿಯ ನಟಿ ಜೊತೆ ಲವ್?; ಬಾಲಿವುಡ್ ನಲ್ಲಿ ಸಂಚಲನ
ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್ ಮತ್ತು ಹಾಟ್ ಗೊಂಬೆ ಪೂಜಾ ಹೆಗ್ಡೆ ಕುರಿತು ಇಂಟರೆಸ್ಟಿಂಗ್ ಮ್ಯಾಟರ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ
Published: 09th December 2022 08:52 AM | Last Updated: 09th December 2022 08:52 AM | A+A A-

ಸಲ್ಮಾನ್ ಖಾನ್
ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್ ಮತ್ತು ಹಾಟ್ ಗೊಂಬೆ ಪೂಜಾ ಹೆಗ್ಡೆ ಕುರಿತು ಇಂಟರೆಸ್ಟಿಂಗ್ ಮ್ಯಾಟರ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕನ್ನಡತಿ ಪೂಜಾ ಹೆಗ್ಡೆ ಜೊತೆ ಸಲ್ಲು ಭಾಯ್ ಪ್ರೀತಿಯಲ್ಲಿ ಮುಳುಗಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಇವರಿಬ್ಬರು ಡೇಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಹೌದು, ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ಡೇಟ್ ಮಾಡ್ತಿದ್ದಾರಂತೆ. ಹಾಗಂತ ನಾವ್ ಹೇಳ್ತಿಲ್ಲ, ಬಾಲಿವುಡ್ ಕಾಂಟ್ರುವರ್ಸಿಯಲ್ ವಿಮರ್ಶಕ ಉಮೈರ್ ಸಂಧು.
ಸೆನ್ಸಾರ್ ಮಂಡಳಿಯ ಸದಸ್ಯ ಎಂದು ಹೇಳಿಕೊಂಡಿರುವ ಉಮೈರ್ ಸಂಧು ಈ ಕುರಿತು ಟ್ಟಿಟ್ ಮೂಲಕ ತಿಳಿಸಿದ್ದಾರೆ. ಸಲ್ಮಾನ್ ಖಾನ್ ಪೂಜಾ ಹೆಗ್ಡೆ ಫೋಟೋ ಹಂಚಿಕೊಂಡಿರುವ ಉಮೈರ್, ಬ್ರೇಕಿಂಗ್ ನ್ಯೂಸ್... ಫಿಲ್ಮ್ ನಗರದಲ್ಲಿ ನವ ಜೋಡಿ.. ಪೂಜಾ ಹೆಗ್ಡೆಯನ್ನು ಪ್ರೀತಿಸಿದ ಮೆಗಾ ಸ್ಟಾರ್ ಸಲ್ಮಾನ್ ಖಾನ್..! ಪೂಜಾ ಹೆಗ್ಡೆಗೆ ತಮ್ಮ ನಿರ್ಮಾಣ ಸಂಸ್ಥೆಯಲ್ಲಿ ಎರಡು ಚಿತ್ರಗಳಿಗೆ ಸಲ್ಲು ಸಹಿ ಹಾಕಿಸಿದ್ದಾರೆ. ಸದ್ಯ ಇಬ್ಬರೂ ಒಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಸಲ್ಮಾನ್ ಖಾನ್ ಆಪ್ತರು ಇದನ್ನು ಖಚಿತಪಡಿಸಿದ್ದಾರೆ..'' ಎಂದು ಉಮೈರ್ ಸಂಧು ಟ್ವೀಟ್ ಮಾಡಿದ್ದಾರೆ.
ಪೂಜಾ ಹೆಗ್ಡೆ ಸದ್ಯ ಸಲ್ಮಾನ್ ಖಾನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ʼಕಿಸಿ ಕಾ ಭಾಯ್ ಕಿಸಿ ಕಾ ಜಾನ್ʼ ಚಿತ್ರದಲ್ಲಿ ವಿಕ್ಟರಿ ವೆಂಕಟೇಶ್ ಮತ್ತು ಜಗಪತಿ ಬಾಬು ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಪರ್ಹಾದ್ ಸಂಜಿ ನಿರ್ದೇಶಿಸುತ್ತಿದ್ದಾರೆ
BREAKING NEWS : New Couple in Town !!! Mega Star #SalmanKhan fell in love with #PoojaHegde !! His production house also signed her for next 2 films !! They are spending time together now a days !! Confirmed by Salman Khan close sources. pic.twitter.com/2lkNIXH3IE
— Umair Sandhu (@UmairSandu) December 7, 2022