ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಬಿಪಾಶಾ ಬಸು, 'ಬೇಬಿ ಬಂಪ್ ಫೋಟೋಶೂಟ್!

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಿಪಾಶಾ ಬಸು ಬೇಬಿ ಬಂಪ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ದಂಪತಿ ಆಗ್ಗಾಗೆ ತಮ್ಮ ಖಾಸಗಿ ಜೀವನದ ಸಂಗತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಬಿಪಾಶಾ ಬಸು

ಗರ್ಭಿಣಿಯಾಗಿರುವ ಅನೇಕ ಫೋಟೋಗಳನ್ನು ಬಿಪಾಶಾ ಬಸು ಹಂಚಿಕೊಂಡಿದ್ದಾರೆ. ಇದೀಗ ಬೇಬಿ ಬಂಪ್ ನ ಮತ್ತೊಂದು ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಶುಕ್ರವಾರ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ, ಗೋಲ್ಡನ್ ಬಣ್ಣದ ಬಟ್ಟೆಯೊಂದಿಗೆ ಬೇಬಿ ಬಂಪ್ ತೋರಿಸಿದ್ದಾರೆ. ಇದರ ಜೊತೆಗೆ 'ಎಲ್ಲಾ ಸಮಯದಲ್ಲೂ ನಿಮ್ಮನ್ನು ನೀವು ಪ್ರೀತಿಸಿ, ನೀವು ಜೀವಿಸುವ ದೇಹವನ್ನು ಪ್ರೀತಿಸಿ ಎಂದು ಬರೆದುಕೊಂಡಿದ್ದಾರೆ.

ಬಿಪಾಶಾ ಬಸು  ಮತ್ತು ಕರಣ್ ಸಿಂಗ್ ಗ್ರೋವರ್ ಏಪ್ರಿಲ್ 30,2016ರಲ್ಲಿ ವಿವಾಹವಾಗಿದ್ದರು. ಈ ವರ್ಷದ ಆಗಸ್ಟ್ ನಲ್ಲಿ ತಾವು ಗರ್ಭಿಣಿಯಾಗಿರುವುದನ್ನು ಅಧಿಕೃತವಾಗಿ ಘೋಷಿಸಿಕೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com