ಕಣ್ಣುಗಳು ನಿಮಗೆ ಸಿಕ್ಕಿರುವ ಉಡುಗೊರೆ, ಅವುಗಳನ್ನು ಎಂದಿಗೂ ಲಘುವಾಗಿ ತೆಗೆದುಕೊಳ್ಳಬಾರದು: ಶಿಲ್ಪಾ ಶೆಟ್ಟಿ

ಪ್ರತಿಯೊಬ್ಬರು ತಮ್ಮ ಕಣ್ಣುಗಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಅನುಯಾಯಿಗಳಿಗೆ ನಟಿ ಶಿಲ್ಪಾ ಶೆಟ್ಟಿ ಅವರು ಒತ್ತಾಯಿಸಿದ್ದಾರೆ. ಕಣ್ಣುಗಳನ್ನು ಎಂದಿಗೂ ಲಘುವಾಗಿ ತೆಗೆದುಕೊಳ್ಳಬೇಡಿ. ಏಕೆಂದರೆ ಅವು ನಮಗೆ ಸಿಕ್ಕಿರುವ ಉಡುಗೊರೆ ಎಂದಿದ್ದಾರೆ.
ನಟಿ ಶಿಲ್ಪಾ ಶೆಟ್ಟಿ
ನಟಿ ಶಿಲ್ಪಾ ಶೆಟ್ಟಿ

ಚೆನ್ನೈ: ಪ್ರತಿಯೊಬ್ಬರು ತಮ್ಮ ಕಣ್ಣುಗಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಅನುಯಾಯಿಗಳಿಗೆ ನಟಿ ಶಿಲ್ಪಾ ಶೆಟ್ಟಿ ಅವರು ಒತ್ತಾಯಿಸಿದ್ದಾರೆ. ಕಣ್ಣುಗಳನ್ನು ಎಂದಿಗೂ ಲಘುವಾಗಿ ತೆಗೆದುಕೊಳ್ಳಬೇಡಿ. ಏಕೆಂದರೆ ಅವು ನಮಗೆ ಸಿಕ್ಕಿರುವ ಉಡುಗೊರೆ ಎಂದಿದ್ದಾರೆ.

ಶುಷ್ಕತೆ ಮತ್ತು ಕೆಂಪು ಕಣ್ಣುಗಳಿಗೆ ಕಾರಣವಾಗುವ ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಕುರಿತು ವಿವರವಾದ ಪೋಸ್ಟ್ ಹಂಚಿಕೊಂಡಿರುವ ಅವರು, 'ನಾನು ಇತ್ತೀಚೆಗೆ ಎಲ್ಲೋ ಓದಿದ್ದೇನೆ, ಪರದೆಗಳಿಗೆ (ಸ್ಕ್ರೀನ್) ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಶುಷ್ಕತೆ ಮತ್ತು ಕೆಂಪು ಕಣ್ಣು ಉಂಟಾಗುತ್ತದೆ. ಈಗ ಇದನ್ನು ಸಾಮಾನ್ಯವಾಗಿ 'ಕಂಪ್ಯೂಟರ್ ವಿಷನ್ ಸಿಂಡ್ರೋಮ್' ಎಂದು ಕರೆಯಲಾಗುತ್ತದೆ' ಎಂದು ಹೇಳಿದ್ದಾರೆ.

ಈ ಮಾಹಿತಿಯು ನಿಜವಾಗಿಯೂ ನನ್ನನ್ನು ಚಿಂತೆಗೀಡು ಮಾಡಿದೆ. ನಾವು ತಂತ್ರಜ್ಞಾನವನ್ನು ತಪ್ಪಿಸಲು ಸಾಧ್ಯವಾಗದಿದ್ದರೂ, ಸಾಕಷ್ಟು ತೇವಾಂಶವನ್ನು ಉಳಿಸಿಕೊಳ್ಳುವ ಮೂಲಕ ನಮ್ಮ ಕಣ್ಣುಗಳ ಸರಿಯಾದ ಆರೈಕೆಯನ್ನು ನಾವು ಮಾಡಬಹುದು ಎಂದು ಹೇಳಿದ್ದಾರೆ.

ಕಣ್ಣಿನ ಶುದ್ಧೀಕರಣ ದಿನಚರಿ ಅಥವಾ ನೇತ್ರ ಯೋಗವನ್ನು ಅಭ್ಯಾಸ ಮಾಡಲು ದಿನದಲ್ಲಿ ಕೆಲವು ನಿಮಿಷಗಳ ಕಾಲ ಮೀಸಲಿಡಿ. ಈ ದಿನಚರಿಯು ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ. ಇದು ಡಿಜಿಟಲ್‌ನಿಂದ ಕಣ್ಣಿನ ಮೇಲೆ ಬೀಳುವ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಕಣ್ಣಿನ ಶುಷ್ಕತೆಯನ್ನು ತಡೆಯುತ್ತದೆ ಮತ್ತು ಕಣ್ಣಿನ ಪ್ರದೇಶದ ಕಡೆಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಏಕಾಗ್ರತೆ ಸುಧಾರಣೆಯಾಗುತ್ತದೆ' ಎಂದು ತಿಳಿಸಿದ್ದಾರೆ.

ನಿಮ್ಮ ಕಣ್ಣುಗಳನ್ನು ನೋಡಿಕೊಳ್ಳಿ, ನನ್ನ ಪ್ರೀತಿಯ ಇನ್ಸ್ಟಾ ಕುಟುಂಬ. ಕಣ್ಣುಗಳನ್ನು ನಾವು ಎಂದಿಗೂ ಲಘುವಾಗಿ ತೆಗೆದುಕೊಳ್ಳಬಾರದು ಎಂದಿರುವ ಅವರು, ಕಣ್ಣುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ನೇತ್ರ ಯೋಗವನ್ನು ಹೇಗೆ ಮಾಡಬೇಕು ಎಂಬ ವಿಡಿಯೋವನ್ನು ನಟಿ ಪೋಸ್ಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com