ಮುಂಬೈ: ಭಾರತೀಯ ಸೇನೆಯ ಹಲವು ಯೋಧರು ಹುತಾತ್ಮರಾಗಿದ್ದ 2020ರ ಗಾಲ್ವಾನ್ ಘರ್ಷಣೆ ಕುರಿತು ಬಾಲಿವುಡ್ ನಟಿ ರಿಚಾ ಚಡ್ಡಾ ಅವರ ಹೇಳಿಕೆಯನ್ನು ನಟ ಅಕ್ಷಯ್ ಕುಮಾರ್ ಖಂಡಿಸಿದ್ದಾರೆ.
ಅಕ್ಷಯ್ ಕುಮಾರ್ ತಮ್ಮ ಟ್ವೀಟರ್ ಖಾತೆಯಲ್ಲಿ ರಿಚಾ ಚಡ್ಡಾರ ಫೋಟೋದೊಂದಿಗೆ ಅವರ ಹೇಳಿಕೆಯ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದು, ಇದನ್ನು ನೋಡಿ ನೋವಾಯಿತು. ನಮ್ಮ ಸೇನಾಪಡೆಗಳಿಗೆ ಎಂದಿಗೂ ನಾವು ಕೃತಜ್ಞತೆ ಸಲ್ಲಿಸದ ರೀತಿಯ ಹೇಳಿಕೆ ನೀಡಬಾರದು ಎಂದು ಅವರು ಹೇಳಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರವನ್ನು ಪಡೆಯಲು ಸೇನೆ ಯಾವಾಗಲೂ ಸಿದ್ಧವಾಗಿರುತ್ತದೆ ಎಂಬ ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರ ಹೇಳಿಕೆ ಕುರಿತು ರಿಚಾ ಚಡ್ಡಾ ಮಾಡಿದ್ದ ಟ್ವೀಟ್ ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಉಪೇಂದ್ರ ದ್ವಿವೇದಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ರಿಚಾ, "ಗಾಲ್ವಾನ್ ಹಾಯ್ ಎನ್ನುತ್ತಿದೆ" ಎಂದು ಟ್ವೀಟ್ ಮಾಡಿ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದ್ದರು.ರಿಚಾ ಚಡ್ಡಾ ಅವರು ಭಾರತ ಮತ್ತು ಚೀನಾ ನಡುವಿನ 2020 ಘರ್ಷಣೆಯ ಬಗ್ಗೆ ಮಾತನಾಡುವ ಮೂಲಕ ಸೇನೆಯನ್ನು ಅವಮಾನಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.
Advertisement