ಟೀಸರ್ ರಿಲೀಸ್: ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ 'ದಿ ವ್ಯಾಕ್ಸಿನ್ ವಾರ್' ಸೆಪ್ಟೆಂಬರ್‌ನಲ್ಲಿ ಬಿಡುಗಡೆ

'ದಿ ಕಾಶ್ಮೀರ್ ಫೈಲ್ಸ್' ಚಿತ್ರ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರ ಮುಂಬರುವ 'ದಿ ವ್ಯಾಕ್ಸಿನ್ ವಾರ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರತಂಡ ದಿನಾಂಕ ನಿಗದಿಪಡಿಸಿದೆ. ಈ ಕುರಿತು ವಿವೇಕ್ ಅಗ್ನಿಹೋತ್ರಿ ಅವರು ಮಂಗಳವಾರ ಟ್ವೀಟ್ ಮಾಡಿದ್ದು, ಚಿತ್ರವು ಸೆಪ್ಟೆಂಬರ್ 28ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ಘೋಷಿಸಿದ್ದಾರೆ.
ವಿವೇಕ್ ಅಗ್ನಿಹೋತ್ರಿ - ದಿ ವ್ಯಾಕ್ಸಿನ್ ವಾರ್
ವಿವೇಕ್ ಅಗ್ನಿಹೋತ್ರಿ - ದಿ ವ್ಯಾಕ್ಸಿನ್ ವಾರ್

ಮುಂಬೈ: 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರ ಮುಂಬರುವ 'ದಿ ವ್ಯಾಕ್ಸಿನ್ ವಾರ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರತಂಡ ದಿನಾಂಕ ನಿಗದಿಪಡಿಸಿದೆ.

ಈ ಕುರಿತು ವಿವೇಕ್ ಅಗ್ನಿಹೋತ್ರಿ ಅವರು ಮಂಗಳವಾರ ಟ್ವೀಟ್ ಮಾಡಿದ್ದು, ಚಿತ್ರವು ಸೆಪ್ಟೆಂಬರ್ 28ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ಘೋಷಿಸಿದ್ದಾರೆ.

ನಾನಾ ಪಾಟೇಕರ್, ಅನುಪಮ್ ಖೇರ್ ಮತ್ತು ಪಲ್ಲವಿ ಜೋಶಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡದ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಮತ್ತು ರೈಮಾ ಸೇನ್ ಕೂಡ ದಿ ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ನಟಿಸಿದ್ದಾರೆ.

‘ದಿ ವ್ಯಾಕ್ಸಿನ್ ವಾರ್’ ಚಿತ್ರವು ಕೋವಿಡ್ ಲಸಿಕೆ ಕಂಡುಹಿಡಿಯಲು ಎರಡು ವರ್ಷಗಳ ಕಾಲ ಹಗಲು ರಾತ್ರಿ ದುಡಿದ ಭಾರತೀಯ ವಿಜ್ಞಾನಿಗಳು ಮತ್ತು ಸಿಬ್ಬಂದಿಯ ಕಥಾಹಂದರವನ್ನು ಒಳಗೊಂಡಿದೆ. ಕೋವಿಡ್-19 ಸಾಂಕ್ರಾಮಿಕದ ಅನಿಶ್ಚಿತ ಸಮಯದಲ್ಲಿ ವೈದ್ಯರು ಮತ್ತು ವಿಜ್ಞಾನಿಗಳ ಸಮರ್ಪಣೆಗೆ ಚಿತ್ರವು ಗೌರವ ಸಮರ್ಪಿಸಲಿದೆ.

77ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಚಿತ್ರದ ಟೀಸರ್ ಅನ್ನು ಹಂಚಿಕೊಂಡಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ- ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಭಾಗಿತ್ವದಲ್ಲಿ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ಎಂದೂ ಕರೆಯಲ್ಪಡುವ BBV152 ಲಸಿಕೆ ಅಭಿವೃಯಲ್ಲಿ ತೊಡಗಿರುವ ವಿಜ್ಞಾನಿಗಳ ಚಟುವಟಿಕೆಗಳ ಸಂಕ್ಷಿಪ್ತ ಚಿತ್ರಣವ್ನು ಟೀಸರ್‌ನಲ್ಲಿ ನೀಡಲಾಗಿದೆ.

'ಬಿಗ್ ಅನೌನ್ಸ್‌ಮೆಂಟ್... ಆತ್ಮೀಯ ಸ್ನೇಹಿತರೇ, ನಿಮ್ಮ ದಿ ವ್ಯಾಕ್ಸಿನ್ ವಾರ್ ಚಿತ್ರವು 2023ರ ಸೆಪ್ಟೆಂಬರ್ 28ನೇ ಶುಭ ದಿನದಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ದಯವಿಟ್ಟು ನಮ್ಮನ್ನು ಆಶೀರ್ವದಿಸಿ' ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಈ ಹಿಂದೆ ವಿವೇಕ್ ರಂಜನ್ ಅಗ್ನಿಹೋತ್ರಿ ಚಿತ್ರದ ಕುರಿತು ಮಾತನಾಡುತ್ತಾ, 'ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಿಡುಗಡೆಯನ್ನು ಮುಂದೂಡಿದಾಗ, ನಾನು ಇದರ ಬಗ್ಗೆ ಸಂಶೋಧನೆ ಪ್ರಾರಂಭಿಸಿದೆ. ನಂತರ ನಾವು ನಮ್ಮದೇ ಆದ ಲಸಿಕೆ ಕಂಡುಹಿಡಿದ ಐಸಿಎಂಆರ್ ಮತ್ತು ಎನ್ಐವಿಯ ವಿಜ್ಞಾನಿಗಳೊಂದಿಗೆ ಸಂಶೋಧನೆ ಪ್ರಾರಂಭಿಸಿದೆವು. ಅವರ ಹೋರಾಟ ಮತ್ತು ತ್ಯಾಗವು ಅಗಾಧವಾಗಿತ್ತು. ಈ ವಿಜ್ಞಾನಿಗಳು ಭಾರತದ ವಿರುದ್ಧದ ವಿದೇಶಿ ಏಜೆನ್ಸಿಗಳಿಂದ ಮಾತ್ರವಲ್ಲದೆ ನಮ್ಮದೇ ಜನರಿಂದಲೂ ಎದುರಾದ ಹೋರಾಟ ಹೇಗಿತ್ತು ಎಂಬುದನ್ನು ನಾವು ಸಂಶೋಧಿಸುವಾಗ ನಾವು ಅರ್ಥಮಾಡಿಕೊಂಡಿದ್ದೇವೆ. ಇದರಿಂದ ಪ್ರತಿಯೊಬ್ಬ ಭಾರತೀಯನೂ ತನ್ನ ದೇಶದ ಬಗ್ಗೆ ಹೆಮ್ಮೆ ಪಡಬಹುದು' ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com