ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅರ್ಬಾಜ್ ಖಾನ್

ಬಾಲಿವುಡ್​​ನ ಜನಪ್ರಿಯ ನಟ ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ನಟ ಅರ್ಬಾಜ್ ಖಾನ್ ಅವರು ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಅವರೊಂದಿಗೆ ಭಾನುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಶುರಾ ಖಾನ್ ಜೊತೆ ಅರ್ಬಾಜ್ ಖಾನ್
ಶುರಾ ಖಾನ್ ಜೊತೆ ಅರ್ಬಾಜ್ ಖಾನ್

ಮುಂಬೈ: ಬಾಲಿವುಡ್​​ನ ಜನಪ್ರಿಯ ನಟ ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ನಟ ಅರ್ಬಾಜ್ ಖಾನ್ ಅವರು ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಅವರೊಂದಿಗೆ ಭಾನುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮುಂಬೈನಲ್ಲಿರುವ ತಮ್ಮ ಸಹೋದರಿ ಅರ್ಪಿತಾ ಖಾನ್ ಅವರ ನಿವಾಸದಲ್ಲಿ ಶುರಾ ಖಾನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿಹಾಹ ಸಮಾರಂಭದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಭಾಗಿಯಾಗಿದ್ದರು.

ಅರ್ಬಾಜ್ ಖಾನ್ ತಮ್ಮ ಮದುವೆಯ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗೆ, 'ಪ್ರೀತಿ ಪಾತ್ರರ ಸಮ್ಮುಖದಲ್ಲಿ ನಾನು ಮತ್ತು ನನ್ನವಳು ಈ ದಿನದಿಂದ ಜೊತೆಯಾಗಿ ಪ್ರೀತಿಯ ಜೀವನವನ್ನು ಪ್ರಾರಂಭಿಸುತ್ತಿದ್ದೇವೆ', ನಮ್ಮ ವಿಶೇಷ ದಿನದಂದು ನಿಮ್ಮೆಲ್ಲರ ಆಶೀರ್ವಾದ ಮತ್ತು ಶುಭ ಹಾರೈಕೆಗಳು ಬೇಕು. ಎಂದು ಬರೆದುಕೊಂಡಿದ್ದಾರೆ.

ಅರ್ಬಾಜ್ ಖಾನ್ ಹೂವಿನ ಚಿತ್ರ ಬಿಡಿಸಿರುವ ಬೀಚ್​ ಬಣ್ಣದ ಬಂಧ್​ಗಾಲ ಉಡುಪನ್ನು ಧರಿಸಿದ್ದು, ವಧು ಶುರಾ ಖಾನ್​ ಹಗುರವಾದ ಪೀಚ್ ಲೆಹೆಂಗಾದಲ್ಲಿ ಅಪ್ಸರೆಯಂತೆ ಕಂಗೊಳಿಸುತ್ತಿದ್ದರು.

ಇನ್ನು ಅರ್ಬಾಜ್ ಖಾನ್ ಅವರ ಮೊದಲ ಪತ್ನಿ ಮಲೈಕಾ ಅರೋರಾ ಮತ್ತು ಅವರ ಮಗ ಅರ್ಹಾನ್ ಖಾನ್ ಕಪ್ಪು ಸೂಟ್‌ನಲ್ಲಿ ಕಂಗೊಳಿಸುತ್ತಿದ್ದರು.

ಹಾಗೇ ಅರ್ಬಾಜ್ ಖಾನ್​ ಪೋಷಕರಾದ ಸಲೀಂ ಮತ್ತು ಸಲ್ಮಾ ಖಾನ್, ಹೆಲೆನ್, ಸಹೋದರರಾದ ಸಲ್ಮಾನ್ ಖಾನ್​ ಮತ್ತು ಸೊಹೈಲ್ ಖಾನ್ ಅವರ ಪುತ್ರರಾದ ನಿರ್ವಾನ್ ಮತ್ತು ಯೋಹಾನ್ ಮತ್ತು ಸಹೋದರಿ ಅಲ್ವಿರಾ ಖಾನ್ ಮದುವೆ ಮುಂಚಿತವಾಗಿ ಅರ್ಪಿತಾ ಅವರ ಮನೆಗೆ ಆಗಮಿಸಿದ್ದರು. ಜತೆಗೆ ರವೀನಾ ಟಂಡನ್ ಮತ್ತು ಅವರ ಪುತ್ರಿ ರಶಾ ಥಡಾನಿ, ರಿದ್ಧಿಮಾ ಪಂಡಿತ್, ಮತ್ತು ರಿತೇಶ್ ದೇಶ್ಮುಖ್ ಮತ್ತು ಅವರ ಪತ್ನಿ ಜೆನಿಲಿಯಾ ದೇಶಮುಖ್ ಸಹ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com