ಪ್ರಿಯಾಂಕಾ ಚೋಪ್ರಾಗೆ ಇದು 'ದೊಡ್ಡ ಗೆಲುವು', ಆಕೆ ನಟ ಸುಶಾಂತ್, ನಟಿ ಪರ್ವೀನ್‌‌ರಂತೆ ಆಗಲಿಲ್ಲ: ಅಪೂರ್ವ ಅಸ್ರಾನಿ

ಬಾಲಿವುಡ್ ಇಂಡಸ್ಟ್ರಿಯಿಂದ ಹಾಲಿವುಡ್‌ಗೆ ಹಾರಿದ ಬಗ್ಗೆ ಪ್ರಿಯಾಂಕಾ ಚೋಪ್ರಾ ಹೇಳಿಕೆ ನಂತರ, ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ಸಂಕಲನಕಾರ ಮತ್ತು ಲೇಖಕ ಅಪೂರ್ವ ಅಸ್ರಾನಿ ಅವರು, ನಟ ಸುಶಾಂತ್ ಸಿಂಗ್ ರಜಪೂತ್ ಅಥವಾ ಪರ್ವೀನ್ ಬಾಬಿ ಅವರಂತೆ ಜೀವನವನ್ನು ಕೊನೆಗೊಳಿಸಿಕೊಳ್ಳದಿರುವುದು ಪ್ರಿಯಾಂಕಾ ಚೋಪ್ರಾ ಅವರಿಗೆ ದೊಡ್ಡ ಗೆಲುವು ಎಂದು ಹೇಳಿದ್ದಾರೆ.
ಅಪೂರ್ವ ಅಸ್ರಾನಿ
ಅಪೂರ್ವ ಅಸ್ರಾನಿ
Updated on

ಮುಂಬೈ: ಬಾಲಿವುಡ್ ಇಂಡಸ್ಟ್ರಿಯಿಂದ ಹಾಲಿವುಡ್‌ಗೆ ಹಾರಿದ ಬಗ್ಗೆ ಪ್ರಿಯಾಂಕಾ ಚೋಪ್ರಾ ಹೇಳಿಕೆ ನಂತರ, ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ಸಂಕಲನಕಾರ ಮತ್ತು ಲೇಖಕ ಅಪೂರ್ವ ಅಸ್ರಾನಿ ಅವರು, ನಟ ಸುಶಾಂತ್ ಸಿಂಗ್ ರಜಪೂತ್ ಅಥವಾ ಪರ್ವೀನ್ ಬಾಬಿ ಅವರಂತೆ ಜೀವನವನ್ನು ಕೊನೆಗೊಳಿಸಿಕೊಳ್ಳದಿರುವುದು ಪ್ರಿಯಾಂಕಾ ಚೋಪ್ರಾ ಅವರಿಗೆ ದೊಡ್ಡ ಗೆಲುವು ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅಪೂರ್ವ, ಪ್ರಿಯಾಂಕಾ ಬಾಲಿವುಡ್‌ ತೊರೆದು ಹಾಲಿವುಡ್‌ಗೆ ಏಕೆ ತೆರಳಿದರು ಎಂಬುದರ ಕುರಿತು ಮಾತನಾಡುವ ಬಗ್ಗೆ ಲೇಖನವನ್ನು ಹಂಚಿಕೊಂಡಿದ್ದಾರೆ.

'ಅಂತಿಮವಾಗಿ ಪ್ರಿಯಾಂಕಾ ಚೋಪ್ರಾ ಅವರು ಎಲ್ಲರಿಗೂ ಈಗಾಗಲೇ ತಿಳಿದಿರುವ ವಿಚಾರವನ್ನೇ ಬಹಿರಂಗಪಡಿಸಿದ್ದಾರೆ. ಆದರೆ, ಉದಾರವಾದಿಗಳು ಅಥವಾ ಸ್ತ್ರೀವಾದಿಗಳಂತಹ ಪ್ರಗತಿಪರರು ಸೇರಿದಂತೆ ಯಾರೂ ಅದನ್ನು ಬಹಿರಂಗವಾಗಿ ಚರ್ಚಿಸಲಿಲ್ಲ. ಅವರು ಆಕೆಯನ್ನು ಬಹಿಷ್ಕರಿಸಿದವರನ್ನೇ ಹೊಗಳುತ್ತಾರೆ. ಆಕೆಯನ್ನು ನಾಶಮಾಡಲು ಪ್ರಯತ್ನಿಸಿದವರನ್ನೇ ಕೊಂಡಾಡುತ್ತಾರೆ. ಇದು ಆಕೆ ಸಾಧಿಸಿದ ದೊಡ್ಡ ಗೆಲುವು. ಏಕೆಂದರೆ, ಪರ್ವೀನ್ ಬಾಬಿ ಅಥವಾ ಸುಶಾಂತ್ ಸಿಂಗ್ ರಜಪೂತ್ ಅವರಂತೆ ಅವರ ಕಥೆ ಕೊನೆಗೊಳ್ಳಲಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ.

ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಪ್ರಿಯಾಂಕಾ, 'ನನ್ನನ್ನು ಬಾಲಿವುಡ್‌ನಲ್ಲಿ ಮೂಲೆಗುಂಪು ಮಾಡಲಾಯಿತು. ಬೇಕಂತಲೇ ನನಗೆ ಅವಕಾಶಗಳಿಂದ ವಂಚಿತಳನ್ನಾಗಿ ಮಾಡಲಾಗುತ್ತಿತ್ತು. ಈ ರಾಜಕೀಯದಲ್ಲಿ ಆಡುವುದರಲ್ಲಿ ಉತ್ತಮವಾಗಿಲ್ಲ. ಇದರಿಂದ ನನಗೆ ಸಾಕಾಗಿ ಹೋಗಿತ್ತು. ನನಗೆ ನಾನೇ ಬ್ರೇಕ್ ತೆಗೆದುಕೊಂಡೆ' ಎಂದು ಹೇಳಿದ್ದಾರೆ.

ಸಂಗೀತದ ಅವಕಾಶವು ಚಲನಚಿತ್ರಗಳ ಪ್ರಪಂಚದಿಂದ ಪ್ರತ್ಯೇಕವಾದ ಪ್ರಪಂಚದ ಇನ್ನೊಂದು ಭಾಗಕ್ಕೆ ಹೋಗಲು ನನಗೆ ಅವಕಾಶ ನೀಡಿತು. ನನಗೆ ಅವಕಾಶ ಸಿಗದ ಸಿನಿಮಾಗಳಿಗಾಗಿ ನಾನು ಹಂಬಲಿಸುವುದಿಲ್ಲ. ಆದರೆ, ನಾನು ಕೆಲವು ಜನರ ಗುಂಪುಗಳು ಮತ್ತು ನೆಟ್‌ವರ್ಕ್‌ಗಳೊಂದಿಗೆ ಸಂವಹನ ನಡೆಸುವ ಅಗತ್ಯವಿತ್ತು. ಇದಕ್ಕೆ ಅಂಗಲಾಚುವ ಅಗತ್ಯವಿರುತ್ತದೆ ಮತ್ತು ನಾನು ಅದನ್ನು ಮಾಡಲು ಬಯಸುವುದಿಲ್ಲ' ಎಂದಿದ್ದಾರೆ. 

ಹಿಂದಿ ಚಲನಚಿತ್ರೋದ್ಯಮದಲ್ಲಿ ವರ್ಣಬೇಧವನ್ನು ಎದುರಿಸಿರುವ ಬಗ್ಗೆ ಮಾತನಾಡಿದ್ದಾರೆ ಮತ್ತು ತಾವು ಫೇರ್‌ನೆಸ್ ಕ್ರೀಮ್ ಜಾಹೀರಾತುಗಳ ಭಾಗವಾಗಿರುವುದಕ್ಕೆ ವಿಷಾದಿಸುವುದಾಗಿ ಬಹಿರಂಗಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com