ಹಿಂದೂ ಯುವಕನ ಜೊತೆ ನಟಿ ಉರ್ಫಿ ಜಾವೇದ್ ನಿಶ್ಚಿತಾರ್ಥ!:  ವೈರಲ್ ಫೋಟೋದಲ್ಲಿರುವ ನಿಗೂಢ ವ್ಯಕ್ತಿ ಯಾರು?

ನಟಿ ಉರ್ಫಿ ಜಾವೇದ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಂತೆ. ಬಾಲಿವುಡ್‌ ಅಂಗಳದಲ್ಲಿ ಈ ರೀತಿಯ ಸುದ್ದಿಯೊಂದು ಸದ್ದಿಲ್ಲದೆ ಹುಟ್ಟಿಕೊಂಡಿದೆ. ಅದಕ್ಕೆ ಕಾರಣ ಉರ್ಫಿ ಸಹೋದರಿ ಉರುಸಾ ಹಂಚಿಕೊಂಡ ಫೋಟೋ ವೈರಲ್ ಆಗಿರುವುದು
ಯುವಕನ ಜೊತೆ ಉರ್ಫಿ ಜಾವೇದ್
ಯುವಕನ ಜೊತೆ ಉರ್ಫಿ ಜಾವೇದ್
Updated on

ವಿಚಿತ್ರ ಫ್ಯಾಶನ್ ಗಳ ಮೂಲಕವೇ ಸಾಕಷ್ಟು ಸದ್ದು ಮಾಡುವ ಉರ್ಫಿ ಜಾವೇದ್, ತಮ್ಮನ್ನು ಯಾರೂ ಮದುವೆ ಆಗಲು ಮುಂದೆ ಬರುತ್ತಿಲ್ಲ ಎಂದು ಪದೇ ಪದೇ ನೋವು ಹೇಳಿಕೊಳ್ಳುತ್ತಿದ್ದರು. ಈ ವಿಷಯದಲ್ಲಿ ತಮ್ಮ ಕುಟುಂಬ ಸಮೇತ ತನ್ನ ಅಳಲನ್ನು ಕೇಳಿಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದರು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಅವರದೊಂದು ಫೋಟೋ ವೈರಲ್ ಆಗಿದೆ.

ನಟಿ ಉರ್ಫಿ ಜಾವೇದ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಂತೆ. ಬಾಲಿವುಡ್‌ ಅಂಗಳದಲ್ಲಿ ಈ ರೀತಿಯ ಸುದ್ದಿಯೊಂದು ಸದ್ದಿಲ್ಲದೆ ಹುಟ್ಟಿಕೊಂಡಿದೆ. ಅದಕ್ಕೆ ಕಾರಣ ಉರ್ಫಿ ಸಹೋದರಿ ಉರುಸಾ ಹಂಚಿಕೊಂಡ ಫೋಟೋ ವೈರಲ್ ಆಗಿರುವುದು. ಉರ್ಫಿ ಜಾವೇದ್ ಮತ್ತು ಒಬ್ಬ ನಿಗೂಢ ವ್ಯಕ್ತಿಯ ಫೋಟೋಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿವೆ. ಈ ಫೋಟೋ ನಿಶ್ಚಿತಾರ್ಥದ ವದಂತಿಗಳನ್ನು ಹುಟ್ಟುಹಾಕಿದೆ.

ಹಿಂದೂ ಹುಡುಗನ ಜೊತೆ ಎಂಗೇಜ್  ಆಗಿರುವಂತೆ ಕಾಣುವ ಫೋಟೋವೊಂದು ವೈರಲ್ ಆಗಿದ್ದು, ಈ ಫೋಟೋ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿವೆ. ಉರ್ಫಿ ಮೈತುಂಬಾ ಬಟ್ಟೆ ಹಾಕಿಕೊಂಡು ಹೋಮ ಕುಂಡದ ಮುಂದೆ ಕೂತಿದ್ದಾರೆ. ಹುಡುಗನ ಕೈಗೆ ಉಂಗುರ ತೊಡಿಸುವಂತೆ ಪೋಸ್ ನೀಡಿದ್ದಾರೆ. ಆದರೆ, ಆ ಹುಡುಗನ ಮುಖವನ್ನು ಮುಚ್ಚಲಾಗಿದೆ. ಹಾಗಾಗಿ ಅದು ಯಾವ ಫೋಟೋ ಎಂದು ನಿಖರವಾಗಿ ತಿಳಿಯುತ್ತಿಲ್ಲ. ಆದರೂ, ಅನೇಕರು ಉರ್ಫಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ವೈರಲ್ ಆಗಿರುವ ಫೋಟೋಗಳ ಬಗ್ಗೆ ಈವರೆಗೆ ತುಟಿ ಬಿಚ್ಚಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com