ಸಿನಿಮಾ ಮಾಡುವುದು ಮನರಂಜನೆಗಾಗಿ, Boycott ಬಾಲಿವುಡ್ ಮಾಡುವುದರಲ್ಲಿ ಅರ್ಥವಿಲ್ಲ: ರಣಬೀರ್ ಕಪೂರ್

ನಟ ರಣಬೀರ್ ಕಪೂರ್ ಅವರ ಮುಂಬರುವ ಚಿತ್ರ 'ತು ಜೂಥಿ ಮೈನ್ ಮಕ್ಕರ್' ಮಾರ್ಚ್ 8 ರಂದು ಬಿಡುಗಡೆಯಾಗಲಿದೆ. ಸಾಮಾಜಿಕ ಮಾಧ್ಯಮದಲ್ಲಿನ ಬಾಲಿವುಡ್ ಬಾಯ್ಕಾಟ್ ಮಾಡುವುದರಲ್ಲಿ ಅರ್ಥವಿಲ್ಲ ಎಂದು ರಣಬೀರ್ ತಳ್ಳಿಹಾಕಿದ್ದಾರೆ.
ನಟ ರಣಬೀರ್ ಕಪೂರ್
ನಟ ರಣಬೀರ್ ಕಪೂರ್

ಕೋಲ್ಕತ್ತಾ: ನಟ ರಣಬೀರ್ ಕಪೂರ್ ಅವರ ಮುಂಬರುವ ಚಿತ್ರ 'ತು ಜೂಥಿ ಮೈನ್ ಮಕ್ಕರ್' ಮಾರ್ಚ್ 8 ರಂದು ಬಿಡುಗಡೆಯಾಗಲಿದೆ. ಸಾಮಾಜಿಕ ಮಾಧ್ಯಮದಲ್ಲಿನ ಬಾಲಿವುಡ್ ಬಾಯ್ಕಾಟ್ ಮಾಡುವುದರಲ್ಲಿ ಅರ್ಥವಿಲ್ಲ ಎಂದು ರಣಬೀರ್ ತಳ್ಳಿಹಾಕಿದ್ದಾರೆ.

ತಮ್ಮ ಇತ್ತೀಚಿನ ಸಿನಿಮಾದ ಪ್ರಚಾರಕ್ಕಾಗಿ ಭಾನುವಾರ ನಗರಕ್ಕೆ ಬಂದಿದ್ದ ನಟ, ಕ್ರಿಕೆಟಿಗ ಸೌರವ್ ಗಂಗೂಲಿ ಅವರ ಬಯೋಪಿಕ್ ಮಾಡಲು ಆಫರ್ ಮಾಡಲಾಗಿದೆ ಎಂಬ ವರದಿಗಳನ್ನು ನಿರಾಕರಿಸಿದರು.

''ಬಾಲಿವುಡ್ ಬಹಿಷ್ಕರಿಸಿ' (Boycott Bollywood) ಎಂಬ ಯಾವುದೇ ಕರೆ ಬಗ್ಗೆ ನೀವು ನನ್ನನ್ನು ಕೇಳಿದರೆ, ಅದು ಆಧಾರರಹಿತವಾಗಿದೆ ಎಂದು ನಾನು ಭಾವಿಸುತ್ತೇನೆ. ಸಾಂಕ್ರಾಮಿಕ ರೋಗದ ನಂತರ ಅನೇಕ ನಕಾರಾತ್ಮಕ ವಿಷಯಗಳು ಬರುತ್ತಿವೆ. ಚಲನಚಿತ್ರಗಳನ್ನು ಮನರಂಜನಾ ಉದ್ದೇಶಕ್ಕಾಗಿ ನಿರ್ಮಿಸಲಾಗಿದೆ, ನಾವು ಜಗತ್ತನ್ನು ಉಳಿಸುತ್ತಿಲ್ಲ. ಹೀಗಾಗಿ ಪ್ರೇಕ್ಷಕರು ಚಿಂತೆ ಮರೆಯಲು ಚಿತ್ರಮಂದಿರಗಳಿಗೆ ಬರುತ್ತಾರೆ. ಅವರು ದೊಡ್ಡ ಪರದೆಯ ಮೇಲೆ ಚಲನಚಿತ್ರಗಳನ್ನು ವೀಕ್ಷಿಸಲು, ಒಳ್ಳೆಯ ಸಮಯವನ್ನು ಕಳೆಯಲು ಬರುತ್ತಾರೆ. ಬಾಯ್ಕಾಟ್ ವಿಷಯ ನನಗೆ ತಿಳಿದಿಲ್ಲ' ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ತೀರಾ ಇತ್ತೀಚೆಗೆ, ಶಾರುಖ್ ಖಾನ್ ಅವರ 'ಪಠಾಣ್' ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಧರಿಸಿರುವ ವೇಷಭೂಷಣಗಳ ಮೇಲೆ ಬಾಲಿವುಡ್ ಬಹಿಷ್ಕಾರದ ಕರೆಗಳನ್ನು ಎದುರಿಸಿತು.

ಗಂಗೂಲಿ ಅವರ ಯಾವುದೇ ಚಲನಚಿತ್ರದಲ್ಲಿ ನಟಿಸಲು ನನಗೆ ಆಫರ್ ಮಾಡದಿದ್ದರೂ, 'ದಾದಾ ಇಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಜೀವಂತ ದಂತಕಥೆ. ಅವರ ಬಯೋಪಿಕ್ ತುಂಬಾ ವಿಶೇಷವಾಗಿರುತ್ತದೆ. ದುರದೃಷ್ಟವಶಾತ್, ನನಗೆ ಈ ಚಿತ್ರದ ಆಫರ್ ಬಂದಿಲ್ಲ. ಚಿತ್ರದ ನಿರ್ಮಾಪಕರು ಇನ್ನೂ ಸ್ಕ್ರಿಪ್ಟ್ ಬರೆಯುತ್ತಿದ್ದಾರೆಯೇ ಎಂದು ತಿಳಿದಿಲ್ಲ' ಎಂದು ಅವರು ಹೇಳಿದರು.

'11 ವರ್ಷಗಳಿಂದ, ನಾನು ಅನುರಾಗ್ ಬಸು ಬರೆದಿರುವ ಕಿಶೋರ್ ಕುಮಾರ್ ಅವರ ಜೀವನಚರಿತ್ರೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಅದು ನನ್ನ ಮುಂದಿನ ಜೀವನಚರಿತ್ರೆಯಾಗಲಿದೆ ಎಂದು ನಾನು ಭಾವಿಸುತ್ತೇನೆ' ಎಂದರು.

ಬಾಕ್ಸ್ ಆಫೀಸ್‌ನಲ್ಲಿ 1,000 ಕೋಟಿ ರೂ.ಗಿಂತ ಹೆಚ್ಚು ಗಳಿಸಿದ 'ಪಠಾಣ್' ಚಿತ್ರದ ಯಶಸ್ಸಿನ ಬಗ್ಗೆ ಕೇಳಿದಾಗ, ಪಠಾಣ್ ಏನು ಮಾಡಿದ್ದಾನೋ, ಅದು ಚಿತ್ರರಂಗಕ್ಕೆ ಬೇಕಿತ್ತು. ಪಠಾಣ್ ಅದನ್ನು ಮಾಡಿದ್ದಕ್ಕಾಗಿ ತುಂಬಾ ಸಂತೋಷ ಮತ್ತು ಕೃತಜ್ಞನಾಗಿದ್ದೇನೆ. ಶಾರುಖ್ ಖಾನ್ ಅವರು 'ಪಠಾಣ್' ಚಿತ್ರದ ಎಲ್ಲಾ ಯಶಸ್ಸಿಗೆ ಅರ್ಹರು ಎಂದು ನಾನು ಭಾವಿಸುತ್ತೇನೆ. ನಾನು ಅವರನ್ನು ನಟನಾಗಿ ನೋಡಿದ್ದೇನೆ, ಅವರೊಂದಿಗೆ ಹಲವಾರು ಬಾರಿ ಕೆಲಸ ಮಾಡಲು ಸಾಧ್ಯವಾಯಿತು. ಅವರು ಈ ಉದ್ಯಮಕ್ಕೆ ಸಾಕಷ್ಟು ಕೊಟ್ಟಿದ್ದಾರೆ. ನಾನು ಅವರ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ' ಎಂದು ಅವರು ಹೇಳಿದರು.

'ಸ್ಕ್ರೀನ್ ಮೇಲೆ ಎಬಿಎಸ್ ತೋರಿಸುವ ಪ್ರತಿಯೊಬ್ಬ ನಟನೂ ತುಂಬಾ ದುಃಖಿತ ವ್ಯಕ್ತಿ, ಅವನಿಗೆ ಮೂರು ತಿಂಗಳು ತಿನ್ನಲು ಏನೂ ಇರುವುದಿಲ್ಲ, ಇದರಿಂದ ಅವನು ಸ್ವಲ್ಪ ಎಬಿಎಸ್ ಸಾಧಿಸಬಹುದು' ಎಂದು ಅವರು ಹೇಳಿದರು.

ಅವರ ಕೆಲವು ಚಲನಚಿತ್ರಗಳು ಸೂಪರ್ ಹಿಟ್ ಆಗಿವೆ ಮತ್ತು ಮತ್ತೆ ಕೆಲವು ಫ್ಲಾಪ್ ಆಗಿರುವ ಬಗ್ಗೆ ಮಾತನಾಡಿದ ಅವರು, 'ಪ್ರತಿಯೊಂದು ಚಲನಚಿತ್ರಕ್ಕೂ ಅದರದೇ ಆದ ಹಣೆಬರಹವಿದೆ. ನೀವು ಅದನ್ನು ಲೇಬಲ್ ಮಾಡಲು ಸಾಧ್ಯವಿಲ್ಲ. 2022 ರಲ್ಲಿ ಬಿಡುಗಡೆಯಾದ 'ಬ್ರಹ್ಮಾಸ್ತ್ರ: ಭಾಗ ಒಂದು' ನನಗೆ ಸಂತೋಷ ನೀಡಿದೆ ಮತ್ತು ಹಲವಾರು ವರ್ಷಗಳಿಂದ ಚಿತ್ರವನ್ನು ನಿರ್ಮಿಸಲಾಗಿತ್ತು. ನಮಗೆ ಇನ್ನೂ ಎರಡು ಮತ್ತು ಮೂರು ಭಾಗಗಳು ಉಳಿದಿವೆ ಮತ್ತು ಅದಕ್ಕಾಗಿ ನಾನು ಉತ್ಸುಕನಾಗಿದ್ದೇನೆ' ಎನ್ನುತ್ತಾರೆ.

ಇನ್ನೊಬ್ಬರ ಸಿನಿಮಾಗಳ ವೈಫಲ್ಯಗಳ ಬಗ್ಗೆ ಮಾತನಾಡುವುದು ಮತ್ತು ಅವು ನಮ್ಮ ಸಿನಿಮಾಗಳೇ ಆಗಿದ್ದಾಗ ಕಷ್ಟ.  15 ವರ್ಷಗಳ ನನ್ನ ವೃತ್ತಿಜೀವನದಲ್ಲಿ ಸುಮಾರು 18 ಚಿತ್ರಗಳು ಬಂದಿವೆ. ಅವುಗಳಲ್ಲಿ ಕೆಲವು ಯಶಸ್ವಿಯಾಗಿದೆ ಮತ್ತು ಕೆಲವು ವಾಣಿಜ್ಯಿಕವಾಗಿ ವಿಫಲವಾಗಿವೆ. ಚಿಕ್ಕಂದಿನಿಂದಲೂ ನನಗೆ ಯಶಸ್ಸು ಮತ್ತು ಸೋಲು ಎರಡಕ್ಕೂ ಒಗ್ಗಿಕೊಂಡಿದ್ದೇನೆ. ಸೋಲು ಯಾವಾಗಲೂ ನಿಮ್ಮ ಬಗ್ಗೆ ಏನನ್ನಾದರೂ ಕಲಿಸುತ್ತದೆ ಮತ್ತು ವೈಫಲ್ಯಗಳನ್ನು ಹೊಂದುವುದು, ನಿಮ್ಮ ವೈಫಲ್ಯಗಳ ಬಗ್ಗೆ ಮಾತನಾಡುವುದು ಬಹಳ ಮುಖ್ಯ. ವೈಫಲ್ಯಗಳ ಬಗ್ಗೆ ಮಾತನಾಡಲು ನನಗೆ ತುಂಬಾ ಸಂತೋಷವಾಗಿದೆ ಎಂದು ಅವರು ಹೇಳಿದರು.

ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ಎದುರಿಸುತ್ತಿರುವ ಟ್ರೋಲಿಂಗ್ ಬಗ್ಗೆ ಕೇಳಿದ ಪ್ರಶ್ನೆಗೆ, 'ನಾನು ಅಧಿಕೃತವಾಗಿ ಸಾಮಾಜಿಕ ಮಾಧ್ಯಮದಲ್ಲಿಲ್ಲ. ನಾನು ಟ್ರೋಲ್ ಮಾಡುವುದನ್ನು ಇಷ್ಟಪಡುತ್ತೇನೆ. ನಾನು ನನ್ನ ಸ್ನೇಹಿತರೆಲ್ಲರನ್ನು ಟ್ರೋಲ್ ಮಾಡುತ್ತೇನೆ. ಇದನ್ನು ತಮಾಷೆಗಾಗಿ ಹೇಳಲಾಗುತ್ತದೆ. ಆದರೆ, ಕೆಲವೊಮ್ಮೆ ಟ್ರೋಲ್‌ಗಳು ಬೆಲ್ಟ್‌ಗಿಂತ ಕೆಳಗಿರುತ್ತವೆ' ಎಂದು ಹೇಳಿದರು.

'ಅವರು (ಅಭಿಮಾನಿಗಳು) ನಮ್ಮನ್ನು ಇಷ್ಟಪಟ್ಟರೆ, ಅವರು ನಮ್ಮನ್ನು ಪ್ರೀತಿಯಿಂದ ಆರಾಧಿಸುತ್ತಾರೆ. ಇಲ್ಲದಿದ್ದರೆ, ಅವರು ನಮ್ಮನ್ನು ಟ್ರೋಲ್ ಮಾಡುತ್ತಾರೆ. ಅಂತಿಮವಾಗಿ ಅದು ಅವರ ಹಣ' ಎಂದು ಅವರು ಸೇರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com