
ರಿಚಾ ಚಡ್ಡಾ
ಝೀ ಸ್ಟುಡಿಯೋಸ್‌ನ ಬ್ಯಾನರ್‌ನಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಚಿತ್ರವೊಂದರಲ್ಲಿ ನಟಿ ರಿಚಾ ಚಡ್ಡಾ ಅವರು ನಟಿಸುತ್ತಿದ್ದಾರೆ.
ಕೋವಿಡ್-19 ಎರಡನೇ ಅಲೆಯ ನೈಜ ಕಥೆಯನ್ನು ಹೊಂದಿರುವ ಈ ಚಿತ್ರಕ್ಕೆ ಇನ್ನೂ ಹೆಸರಿಡಲಾಗಿಲ್ಲ. ಚಿತ್ರದಲ್ಲಿ ಮುಂಚೂಣಿ ಹೋರಾಟಗಾರ್ತಿ ಪಾತ್ರವೊಂದರಲ್ಲಿ ರಿಚಾ ಚಾಧಾ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರವು 2021ರ ನೈಜ ಕಥೆಗಳನ್ನು ಹೈಲೈಟ್ ಮಾಡುತ್ತಿದೆ.
ಚಿತ್ರದ ಕುರಿತು ಮಾಹಿತಿ ನೀಡಿರುವ ರಿಚಾ ಚಡ್ಡಾ, ಚಿತ್ರವು ಕೋವಿಡ್‌ನ 2ನೇ ಅಲೆ ಸಮಯದಲ್ಲಿ ನಾವೆಲ್ಲರೂ ಕಂಡ ನೈಜ ಘಟನೆಗಳನ್ನು ಆಧರಿಸಿದ್ದಾಗಿದೆ. ನಷ್ಟ ಮತ್ತು ಹತಾಶೆ ಇದ್ದಾಗ ಅಲ್ಲಿ ಭರವಸೆಯೂ ಇರುತ್ತದೆ. ಕೋವಿಡ್ ಸಮಯದಲ್ಲಿ ಅಪರಿಚತರು ತೋರಿದ ದಾನಗಳಿಂದ ನಾನು ಎಷ್ಟು ಪ್ರಭಾವಿತಳಾಗಿದ್ದೆನೆಂದರೆ, ನಾನು ಕಿಂಡ್ರಿ ಎಂಬ ಸಣ್ಣ ಸಾಮಾಜಿಕ ಮಾಧ್ಯಮ ಉಪಕ್ರಮವನ್ನು ಪ್ರಾರಂಭಿಸಿದೆ. ಈ ಉಪಕ್ರಮದಲ್ಲಿ 2ನೇ ಅಲೆಯ ವೇಳೆ ಒಳ್ಳೆಯತನ, ನಿಸ್ವಾರ್ಥದಿಂದ ಸೇವೆ ಸಲ್ಲಿಸಿದರ ಕಥೆಗಳನ್ನು ಪ್ರಕಟಿಸಲಾಗಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: 'ನಿಮಗಿಂತ ರಿಚಾ ಚಡ್ಡಾ ಅವರೇ ಇಂದು ನಮ್ಮ ದೇಶಕ್ಕೆ ಹೆಚ್ಚು ಪ್ರಸ್ತುತ': ಅಕ್ಷಯ್ ಕುಮಾರ್‌ಗೆ ಪ್ರಕಾಶ್ ರಾಜ್ ಪ್ರತಿಕ್ರಿಯೆ
ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ನಾವು ಮನುಷ್ಯರಾಗಿರಲು ಹೆದರುತ್ತಿದ್ದೆವು. ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳುತ್ತಿದ್ದೆವು. ಈ ಸಂದರ್ಭದಲ್ಲಿ ವೈದ್ಯರು, ನರ್ಸ್ ಗಳ ನಿಸ್ವಾರ್ಥ ಸೇವೆ ಅರ್ಥವಾಗಿತ್ತು. ಅಂತಹ ನರ್ಸ್ ಪಾತ್ರವನ್ನು ನಿರ್ವಹಿಸಲು ನನಗೆ ಹೆಮ್ಮೆಯಿದೆ ಎಂದು ತಿಳಿಸಿದ್ದಾರೆ.
ಈ ಚಿತ್ರದ ಇದರ ಹೊರತಾಗಿ, ರಿಚಾ ಅವರು ತಮ್ಮ ಸಹ-ಮಾಲೀಕತ್ವದ ಹೋಮ್ ಪ್ರೊಡಕ್ಷನ್‌ನ ಮೊದಲ ಚಲನಚಿತ್ರವಾದ ಗರ್ಲ್ಸ್ ಬಿ ಗರ್ಲ್ಸ್‌ನ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಜೊತೆಗೆ ಸಂಜಯ್ ಲೀಲಾ ಬನ್ಸಾಲಿಯವರ ವೆಬ್ ಸೀರೀಸ್ ಹೀರಾಮಂಡಿಯಲ್ಲಿಯೂ ರಿಚಾ ಚಡ್ಡಾ ಅವರು ನಟಿಸಿದ್ದಾರೆ.