ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ 'ಪಠಾಣ್': ಕೆಜಿಎಫ್-2 ದಾಖಲೆ ಉಡೀಸ್!
ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರ ಜನವರಿ 25ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಮೊದಲ ದಿನವೇ ಕೆಜಿಎಫ್ ಹಿಂದಿಯಲ್ಲಿ ಮಾಡಿದ್ದ ಮೊದಲ ದಿನದ ಕಲೆಕ್ಷನ್ ಅನ್ನು ಹಿಂದಿಕ್ಕಿದೆ.
Published: 26th January 2023 03:55 PM | Last Updated: 26th January 2023 03:55 PM | A+A A-

ಸಂಗ್ರಹ ಚಿತ್ರ
ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರ ಜನವರಿ 25ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಮೊದಲ ದಿನವೇ ಕೆಜಿಎಫ್ ಹಿಂದಿಯಲ್ಲಿ ಮಾಡಿದ್ದ ಮೊದಲ ದಿನದ ಕಲೆಕ್ಷನ್ ಅನ್ನು ಹಿಂದಿಕ್ಕಿದೆ.
ವಾಸ್ತವವಾಗಿ ಪಠಾಣ್ ಚಿತ್ರ ಗಳಿಕೆಯ ವಿಷಯದಲ್ಲಿಯೂ ದಾಖಲೆಯನ್ನು ಮುರಿದಿದೆ. ಪಠಾಣ್ ಚಿತ್ರದ ಭಾರತದಲ್ಲಿ ಮೊದಲ ದಿನವೇ 54 ಕೋಟಿ ಗಳಿಸಿದೆ. ಮತ್ತೊಂದೆಡೆ, ವಿಶ್ವಕಪ್ 100 ಕೋಟಿ ಗಳಿಕೆ ಮಾಡಿದೆ ಎಂದು ವರದಿಯಾಗುತ್ತಿದೆ.
‘PATHAAN’ CREATES HISTORY, BIGGEST DAY 1 TOTAL… #Pathaan is now BIGGEST OPENER [#Hindi films] in #India… *Day 1* biz…
#Pathaan: ₹ 55 cr [Non-holiday]
#KGF2 #Hindi: ₹ 53.95 cr
#War: ₹ 51.60 cr
#TOH: ₹ 50.75 cr
Nett BOC. #India biz. pic.twitter.com/y2c5F0ySN0— taran adarsh (@taran_adarsh) January 26, 2023
ಶಾರುಖ್ ಖಾನ್ ಅಭಿನಯದ 'ಪಠಾಣ್' ಕೂಡ ಈ ಗಳಿಕೆಯೊಂದಿಗೆ ಕೆಜಿಎಫ್-2 ಅನ್ನು ಹಿಂದಿಕ್ಕಿದೆ. ಒಂದು ಸುದ್ದಿಯ ಪ್ರಕಾರ, ಕೆಜಿಎಫ್-2 ಭಾರತದಲ್ಲಿ 53.95 ಕೋಟಿ ಗಳಿಸಿತ್ತು. ಆದರೆ ಪಠಾಣ್ 54 ಕೋಟಿ ಗಳಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಇದಲ್ಲದೇ ಶಾರುಖ್ ತಮ್ಮದೇ ಆದ "ಹ್ಯಾಪಿ ನ್ಯೂ ಇಯರ್" ಚಿತ್ರವನ್ನೂ ಹಿಂದಿಕ್ಕಿದ್ದಾರೆ. 2014ರಲ್ಲಿ ಬಿಡುಗಡೆಯಾದ 'ಹ್ಯಾಪಿ ನ್ಯೂ ಇಯರ್' ಮೊದಲ ದಿನವೇ 44.97 ಕೋಟಿ ಗಳಿಸಿತ್ತು.
₹ 100 Crs+ WW Day 1 Opening Indian Movies :
— Ramesh Bala (@rameshlaus) January 26, 2023
1. #Bahubali2
2. #2Point0
3. #Kabali
4. #Saaho
5. #RRR
6. #KGF2
7. #Pathaan