'ಆದಿಪುರುಷ' ರಾಮನ ಪಾತ್ರಕ್ಕಾಗಿ ಮದ್ಯ, ಮಾಂಸ ಸೇವನೆ ಬಿಟ್ಟ ನಟ ಪ್ರಭಾಸ್!

ಬಾಹುಬಲಿ ಪ್ರಭಾಸ್ ನಾಯಕ ನಟನಾಗಿ ನಟಿಸಿರುವ ಆದಿಪುರುಷ ಸಿನಿಮಾ ಇಂದು ಶುಕ್ರವಾರ ತೆರೆಕಂಡಿದೆ. ಆದಿಪುರುಷನಲ್ಲಿ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸಿರುವ ಪ್ರಭಾಸ್ ಪಾತ್ರದಲ್ಲಿ ಸಂಪೂರ್ಣ ತಲ್ಲೀನವಾಗಲು ಮದ್ಯ, ಮಾಂಸ ಸೇವನೆಯನ್ನು ತ್ಯಜಿಸಿದ್ದರಂತೆ.
ಆದಿಪುರುಷದಲ್ಲಿ ನಟ ಪ್ರಭಾಸ್
ಆದಿಪುರುಷದಲ್ಲಿ ನಟ ಪ್ರಭಾಸ್

ಬಾಹುಬಲಿ ಪ್ರಭಾಸ್ ನಾಯಕ ನಟನಾಗಿ ನಟಿಸಿರುವ ಆದಿಪುರುಷ ಸಿನಿಮಾ ಇಂದು ಶುಕ್ರವಾರ ತೆರೆಕಂಡಿದೆ. ಆದಿಪುರುಷನಲ್ಲಿ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸಿರುವ ಪ್ರಭಾಸ್ ಪಾತ್ರದಲ್ಲಿ ಸಂಪೂರ್ಣ ತಲ್ಲೀನವಾಗಲು ಮದ್ಯ, ಮಾಂಸ ಸೇವನೆಯನ್ನು ತ್ಯಜಿಸಿದ್ದರಂತೆ.

ರಾಮ ದೇವರ ಪಾತ್ರವನ್ನು ಮಾಡುವಷ್ಟು ಸಮಯ ಸಂತನಂತೆ ಜೀವಿಸಲು ಬಯಸಿ ಪ್ರಭಾಸ್ ದುಶ್ಚಟಗಳನ್ನು ತ್ಯಜಿಸಿದ್ದರು ನಟನ ಆಪ್ತರು ಬಾಲಿವುಡ್ ನಿರ್ಮಾಪಕ ಹಾಗೂ ನಿರ್ದೇಶಕ ಸುಭಾಷ್ ಕೆ ಝಾ ಅವರಿಗೆ ಹೇಳಿದ್ದರಂತೆ. 

ರಾಮನ ಪಾತ್ರ ನಿರ್ವಹಿಸುವಾಗ ಯಾವುದೇ ಮೋಜಿ, ಮಸ್ತಿ ಮಾಡಲು ಪ್ರಭಾಸ್ ಇಷ್ಟಪಡುತ್ತಿರಲಿಲ್ಲವಂತೆ. ಪ್ರಭಾಸ್ ಇತರ ಸಾಮಾನ್ಯ ದಿನಗಳಲ್ಲಿ ಮದ್ಯ ಸೇವನೆ ಮಾಡುತ್ತಿದ್ದುದು ಅಪರೂಪ. ಅದು ಅವರಿಗೆ ಕಷ್ಟವಾಗಿರಲಿಲ್ಲವಂತೆ. ಆದರೆ ಮಾಂಸ ಸೇವನೆಯಿಂದ ದೂರವಿರಲು ಪ್ರಭಾಸ್ ಗೆ ಬಹಳ ಕಷ್ಟವಾಯಿತಂತೆ. 

ನಾನು ಸಸ್ಯಾಹಾರಿಯಾಗುತ್ತಿದ್ದೇನೆ ಎಂದು ಪ್ರಭಾಸ್ ತಾಯಿಗೆ ಹೇಳಿದಾಗ ಅವರು ಬಹಳ ಬೇಸರಗೊಂಡರಂತೆ. ಏಕೆಂದರೆ ತನ್ನ ಮಗನಿಗೆ ರುಚಿರುಚಿಯಾದ ಮಾಂಸದಡುಗೆಯನ್ನು ಮಾಡುವುದೆಂದರೆ ಪ್ರಭಾಸ್ ತಾಯಿಗೆ ಬಹಳ ಇಷ್ಟವಂತೆ. ಕಟ್ಟುನಿಟ್ಟಿನ ಸಂತನ ರೀತಿಯ ಜೀವನವನ್ನು ಏಕೆ ಅನುಸರಿಸಬೇಕೆಂದು ಪ್ರಭಾಸ್ ತನ್ನ ತಾಯಿಗೆ ಮನವರಿಕೆ ಮಾಡಿಕೊಡುವುದು ಕಷ್ಟವಾಯಿತಂತೆ. 

ಯಾವುದೇ ಪಾತ್ರ ಮಾಡುವಾಗ ಆ ಪಾತ್ರಕ್ಕೆ ಸಂಪೂರ್ಣ ಬದ್ಧತೆ ತೋರಿಸುವುದು ಪ್ರಭಾಸ್ ಗೆ ಹೊಸದಲ್ಲ ಮತ್ತು ಕಷ್ಟದ ವಿಚಾರವಲ್ಲ. ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುವುದೆಂದರೆ ಅವರಿಗೆ ಬಹಳ ಇಷ್ಟ. ಬಾಹುಬಲಿ ಶೂಟಿಂಗ್ ಸಮಯದಲ್ಲಿ ರಾಕ್ ಕ್ಲೈಂಬಿಂಗ್, ಕಿಕ್ ಬಾಕ್ಸಿಂಗ್, ಕುದುರೆ ಸವಾರಿ ಮತ್ತು ಕತ್ತಿವರಸೆಗಳನ್ನು ಕಲಿತಿದ್ದರು.

ದೈಹಿಕವಾಗಿಯೂ ಪಾತ್ರಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲು ನೋಡುತ್ತಾರೆ. ಬಾಹುಬಲಿಗಿಂತ ಮೊದಲು ದೈಹಿಕವಾಗಿ ಪ್ರಭಾಸ್ ಸಣ್ಣ ಕಾಣುತ್ತಿದ್ದರು. ಬಾಹುಬಲಿಯಲ್ಲಿ ಯೋಧನ ಪಾತ್ರ ಮಾಡಬೇಕಾಗಿದ್ದರಿಂದ  ದೇಹ ಗಟ್ಟಿಮುಟ್ಟಾಗಿ ಕಾಣಬೇಕು ಎಂದು ನಿರ್ದೇಶಕ ರಾಜಮೌಳಿ ಹೇಳಿದರಂತೆ. ಇದಕ್ಕಾಗಿ ಪ್ರಭಾಸ್ ಪ್ರತಿದಿನ ಬೆಳಗ್ಗೆ, ಸಾಯಂಕಾಲ ವರ್ಕೌಟ್ ಮಾಡುತ್ತಿದ್ದರು. 

ಚಿತ್ರೀಕರಣ ಪ್ರಾರಂಭವಾಗುವ ಮೊದಲು ಪ್ರಭಾಸ್ ಆರು ತಿಂಗಳ ಕಾಲ ಪ್ರತಿದಿನ ಮೂರು ಗಂಟೆಗಳ ಕಾಲ ತರಬೇತಿ ಪಡೆಯುತ್ತಿದ್ದರಂತೆ. ಬೆಳಗ್ಗೆ 5 ಗಂಟೆಗೆ ಎದ್ದು ರೆಡಿಯಾಗಿ 7 ಗಂಟೆಗೆ ಚಿತ್ರೀಕರಣಕ್ಕೆ ಹೋಗಿ ಬಂದರೆ ರಾತ್ರಿ 10 ಗಂಟೆಯವರೆಗೆ ಚಿತ್ರೀಕರಣ ಸಾಗುತ್ತಿತ್ತಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com