ಗಣೇಶ ಚತುರ್ಥಿ ವಿಶೇಷ: ಮನೆಗೆ ಗಣಪತಿ ಮೂರ್ತಿ ತಂದ ಸೂಪರ್ ಸ್ಟಾರ್ ಶಾರುಖ್ ಖಾನ್!
ದೇಶದಲ್ಲೇ ಹೆಚ್ಚಾಗಿ ವಾಣಿಜ್ಯ ನಗರಿ ಮುಂಬೈಯಲ್ಲಿ ಗಣೇಶ ಚತುರ್ಥಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಶಿಲ್ಪಾ ಶೆಟ್ಟಿ, ಸಲ್ಮಾನ್ ಖಾನ್ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಕೂಡಾ ತಮ್ಮ ಮನೆಗಳಿಗೆ ಗಣೇಶ ವಿಗ್ರಹ ತಂದು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುತ್ತಾರೆ.
Published: 20th September 2023 01:14 AM | Last Updated: 20th September 2023 01:23 PM | A+A A-

ಸೂಪರ್ ಸ್ಟಾರ್ ಶಾರುಖ್ ಖಾನ್
ಮುಂಬೈ: ದೇಶದಲ್ಲೇ ಹೆಚ್ಚಾಗಿ ವಾಣಿಜ್ಯ ನಗರಿ ಮುಂಬೈಯಲ್ಲಿ ಗಣೇಶ ಚತುರ್ಥಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಶಿಲ್ಪಾ ಶೆಟ್ಟಿ, ಸಲ್ಮಾನ್ ಖಾನ್ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಕೂಡಾ ತಮ್ಮ ಮನೆಗಳಿಗೆ ಗಣೇಶ ವಿಗ್ರಹ ತಂದು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುತ್ತಾರೆ. ಗಣೇಶನ ಆಶೀರ್ವಾದ ಕೋರುವ ಹಬ್ಬದ ಉತ್ಸಾಹ ಹೆಚ್ಚಿಸುವ ತಾರೆಗಳಲ್ಲಿ ಶಾರುಖ್ ಖಾನ್ ಕೂಡ ಒಬ್ಬರು.
ಇದನ್ನೂ ಓದಿ: ಪರಿಸರ ಸ್ನೇಹಿ ಗಣಪನ ಮೂರ್ತಿಯನ್ನು ಪೂಜಿಸಿ ಈ ಸುಂದರ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸೋಣ ಅಲ್ಲವೇ?
ಜವಾನ್ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಶಾರೂಖ್ ಖಾನ್ ತಮ್ಮ ಮನೆಗೆ ಗಣಪತಿ ಮೂರ್ತಿಯನ್ನು ತಂದಿದ್ದಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ ನಲ್ಲಿ ಗಣೇಶ ಮೂರ್ತಿ. ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ಎಲ್ಲರಿಗೂ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
Welcome home Ganpati Bappa Ji. Wishing you and your family a wonderful day honoring Lord Ganesha. May Lord Ganesha bless all of us with happiness, wisdom, good health and lots of Modak to eat!!! pic.twitter.com/d9Adfl1ggs
— Shah Rukh Khan (@iamsrk) September 19, 2023