
ಮುಂಬೈ: ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ತಮ್ಮ ಖಾಸಗಿ ವಿಡಿಯೋ ವೈರಲ್ ಆದ ವಿಚಾರದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದು, ಬಾತ್‌ರೂಮ್ ವಿಡಿಯೋ ಲೀಕ್ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.
ಹೌದು.. ಈ ಹಿಂದೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಅವರ ಖಾಸಗಿ ವಿಡಿಯೊವೊಂದು ವೈರಲ್ ಆಗಿತ್ತು. ನಟಿ ಬಾತ್‌ರೂಮ್‌ನಲ್ಲಿ ಬಟ್ಟೆ ಬದಲಾಯಿಸುತ್ತಿರುವ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.
ಕೆಲವರು ಇದನ್ನು ಪಬ್ಲಿಸಿಟಿ ಗಿಮಿಕ್ ಎಂದರೆ ಅಭಿಮಾನಿಗಳು ಕಿಡಿಗೇಡಿಗಳ ಕುಕೃತ್ಯದ ವಿರುದ್ಧ ಕಿಡಿಕಾರಿದ್ದರು. ಎಲ್ಲ ವಾದ-ವಿವಾದಗಳ ನಡುವೆ ಇದೇ ಮೊದಲ ಬಾರಿಗೆ ನಟಿ ಊರ್ವಶಿ ರೌಟೇಲಾ ಈ ವಿವಾದದ ಕುರಿತು ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಲೀಕ್ ಆದ ವಿಡಿಯೋ ಸಿನಿಮಾದ ದೃಶ್ಯ
ಸಿನಿಮಾ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ನಟಿ ಊರ್ವಶಿ ರೌಟೇಲಾ, ‘ಸೋರಿಕೆಯಾದ’ ಬಾತ್ರೂಮ್ ವೀಡಿಯೊ ತನ್ನ ಮುಂಬರುವ ʻಘುಸ್ಪೈತಿಯೇʼ ಸಿನಿಮಾದ ದೃಶ್ಯ ಎಂದು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಪ್ರಬುದ್ಧವಾಗಿ ವರ್ತಿಸಬೇಕು. ವೀಡಿಯೊ ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವುದು ಬೇಸರ ತಂದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
''ಕ್ಲಿಪ್ ಸೋರಿಕೆಯಾದ ದಿನ, ನಾನು ಅಸಮಾಧಾನಗೊಂಡಿದ್ದೆ. ಖಂಡಿತವಾಗಿಯೂ ಇದು ನನ್ನ ವೈಯಕ್ತಿಕ ಕ್ಲಿಪ್ ಅಲ್ಲ, ಇದು ಘುಸ್ಪೈತಿಯೇ ಚಲನಚಿತ್ರದ ಭಾಗವಾಗಿದೆʼʼಎಂದು ಹೇಳಿದರು.
ಘುಸ್ಪೈತಿಯೇ ಆಗಸ್ಟ್ 9 ರಂದು ಬಿಡುಗಡೆಯಾಗಲಿದ್ದು, ಅಕ್ಷಯ್ ಒಬೆರಾಯ್ ಅವರೊಂದಿಗೆ ಊರ್ವಶಿ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಸುಸಿ ಗಣೇಶನ್ ನಿರ್ದೇಶಿಸಿದ್ದಾರೆ.
Advertisement