ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಬಳಿಕ ಶಾರುಖ್ ಖಾನ್‌ಗೆ ಕೊಲೆ ಬೆದರಿಕೆಯೊಡ್ಡಿರುವ ಪ್ರಕರಣ ವರದಿಯಾಗಿದ್ದು, 50 ಲಕ್ಷ ರೂ. ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ.
ಶಾರುಖ್ ಖಾನ್ ವೈಯುಕ್ತಿಕ ಮೊಬೈಲ್ ಗೇ ನಿಂದ ಬೆದರಿಕೆ ಕರೆ ಬಂದಿದ್ದು, 50 ಲಕ್ಷ ರೂ. ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.
ಬೆದರಿಕೆ ಕರೆ ಬೆನ್ನಲ್ಲೇ ನಟ ಶಾರುಖ್ ಖಾನ್ ತಂಡ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಬಾಂದ್ರಾ ಪೊಲೀಸರು ತನಿಖೆ ನಡೆಸಿದ್ದಾರೆ.
ನವೆಂಬರ್ 5, ಮಂಗಳವಾರ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಶಾರುಖ್ ಖಾನ್‌ಗೆ ಬೆದರಿಕೆಯ ದೂರು ದಾಖಲಾಗಿದೆ.
ಬಾಂದ್ರಾ ಪೊಲೀಸ್ ಠಾಣೆಯಲ್ಲಿ BNS ಕಾಯಿದೆಯ ಸೆಕ್ಷನ್ 308(4) ಮತ್ತು 351(3)(4) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಚತ್ತೀಸ್ ಘಡದಲ್ಲಿ ಆರೋಪಿ
ಇನ್ನು ಈ ಬೆದರಿಕೆ ಕರೆ ಮಾಡಿರುವ ಮೊಬೈಲ್ ಲೊಕೇಷನ್ ಚತ್ತೀಸ್ ಘಡದಲ್ಲಿ ಪತ್ತೆಯಾಗಿದೆ. ಶಾರುಖ್‌ಗೆ ಬೆದರಿಕೆ ಬಂದ ಫೋನ್ ಫೈಜಾನ್ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ ಮತ್ತು ಆತನ ಕೊನೆಯ ಸ್ಥಳ ರಾಯ್‌ಪುರದಲ್ಲಿ ಲೊಕೇಷನ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಮಹಾರಾಷ್ಟ್ರ ಪೊಲೀಸ್ ತಂಡ ರಾಯಪುರ ತಲುಪಿದ್ದು, ಮಹಾರಾಷ್ಟ್ರ ಪೊಲೀಸರು ಫೈಜಾನ್ ಖಾನ್ ಎಂಬ ಯುವಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಹೆಚ್ಚಿನ ತನಿಖೆಗಾಗಿ ಛತ್ತೀಸ್‌ಗಢ, ಪೊಲೀಸ್ ತಂಡಗಳನ್ನು ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಹಲವು ದಿನಗಳಿಂದ ಗ್ಯಾಂಗ್ಸ್ಟರ್ಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಸಲ್ಮಾನ್ ಹೆಸರಿನಲ್ಲಿ ಒಂದರ ಹಿಂದೆ ಒಂದರಂತೆ ಬೆದರಿಕೆಗಳು ಬರುತ್ತಿವೆ. ನಟನ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಬೆದರಿಕೆ ಹಾಕಿರುವ ಬಿಷ್ಣೋಯ್ ಗ್ಯಾಂಗ್ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
Advertisement