

ಮುಂಬೈ: ನಟಿ ಸಮಂತಾ ರುತ್ ಪ್ರಭು ಮತ್ತು ನಿರ್ಮಾಪಕ ರಾಜ್ ನಿಡಿಮೋರು ವಿವಾಹ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ರಾಜ್ ನಿಡಿಮೋರು ಮಾಜಿ ಪತ್ನಿ ಶ್ಯಾಮಲಿ ಡೆ ಮಾಡಿರುವ ಪೋಸ್ಟ್ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಇಂದು ಖ್ಯಾತ ನಟಿ ಸಮಂತಾ ರುತ್ ಪ್ರಭು ಮತ್ತು ನಿರ್ಮಾಪಕ ರಾಜ್ ನಿಡಿಮೋರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಇಬ್ಬರಿಗೂ ಎರಡನೇ ಮದುವೆಯಾಗಿದೆ. ಈ ಹಿಂದೆ ರಾಜ್ ನಿಡಿಮೋರು ಶ್ಯಾಮಲಿ ಡೆ ಎಂಬುವವರನ್ನು ವಿವಾಹವಾಗಿ ವಿಚ್ಚೇದನ ಪಡೆದಿದ್ದರೆ, ನಟಿ ಸಮಂತಾ ತೆಲುಗು ನಟ ನಾಗಾರ್ಜುನ ಅವರ ಮಗ ನಾಗಚೈತನ್ಯ ಅವರನ್ನು ವಿವಾಹವಾಗಿ ವಿಚ್ಚೇದನ ಪಡೆದಿದ್ದರು. ನಾಗಚೈತನ್ಯ ನಟಿ ಶೋಭಿತಾ ಧುಲಿಪಾಲ ಅವರನ್ನು ವಿವಾಹವಾಗಿದ್ದಾರೆ.
ಇಂದು (ಡಿಸೆಂಬರ್ 1) ಸಮಂತಾ ರುತ್ ಪ್ರಭು ಅವರು ರಾಜ್ ನಿಡಿಮೋರು ಜೊತೆ ಮದುವೆ ಆಗಿದ್ದಾರೆ. ತಮಿಳುನಾಡಿನ ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ರಾಜ್ ಮತ್ತು ಸಮಂತಾ ವಿವಾಹವಾಗಿದ್ದಾರೆ. ಕೆಲವೇ ಕೆಲವು ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ. ಮದುವೆ ಬಳಿಕ ಒಂದಷ್ಟು ಫೋಟೋಗಳನ್ನು ಸಮಂತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಮಂತಾ ಪತಿಯ ಮಾಜಿ ಪತ್ನಿಯಿಂದ ನಿಗೂಢ ಪೋಸ್ಟ್
ಇನ್ನುಸಮಂತಾ ಮತ್ತು ರಾಜ್ ಮದುವೆ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ರಾಜ್ ನಿಡಿಮೋರು ಮಾಜಿ ಪತ್ನಿ ಶಾಮಲಿ ಡೇ ಮಾಡಿರುವ ಪೋಸ್ಟ್ ವೈರಲ್ ಆಗಿದೆ. ತಮ್ಮ ಪೋಸ್ಟ್ ನಲ್ಲಿ ಶಾಮಲಿ ಅವರು, 'ಹತಾಶ ಜನರು ಹತಾಶ ಕೆಲಸಗಳನ್ನು ಮಾಡುತ್ತಾರೆ' ಎಂದು ಪೋಸ್ಟ್ ಮಾಡಿದ್ದಾರೆ. ಅವರ ಈ ಪೋಸ್ಟ್ ಅನ್ನು ಸಿನಿ ಅಭಿಮಾನಿಗಳು ತರಹೇವಾರಿ ರೀತಿಯಲ್ಲಿ ಅರ್ಥೈಸುತ್ತಿದ್ದು ರಾಜ್ ಮತ್ತು ಸಮಂತಾ ನಡುವಿನ ಮದುವೆಯ ವದಂತಿಗಳ ಬಗ್ಗೆ ಮಾಡಿರುವ ಸೂಕ್ಷ್ಮವಾದ ಶೋಧ ಎಂದು ಅರ್ಥೈಸಿಕೊಳ್ಳುತ್ತಿದ್ದಾರೆ.
ಫ್ಯಾಮಿಲಿ ಮ್ಯಾನ್ 2 ವೇಳೆ ಆಪ್ತತೆ
ರಾಜ್ ನಿಡಿಮೋರು ಅವರು ನಿರ್ದೇಶನ ಮಾಡಿದ್ದ ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲಿ ಸಮಂತಾ ರುತ್ ಪ್ರಭು ಅವರು ನಟಿಸಿದ್ದರು. ಆಗ ಅವರಿಬ್ಬರ ನಡುವೆ ಆಪ್ತತೆ ಬೆಳೆದಿತ್ತು. ಅದೇ ವೇಳೆಗೆ ನಾಗ ಚೈತನ್ಯ ಜೊತೆ ಸಮಂತಾ ಅವರಿಗೆ ವೈಮನಸ್ಸು ಉಂಟಾಗಿತ್ತು. ಬಳಿಕ ಅವರು ವಿಚ್ಛೇದನ ಪಡೆದುಕೊಂಡು ಅಕ್ಕಿನೇನಿ ಕುಟುಂಬದಿಂದ ಹೊರಬಂದಿದ್ದರು.
Advertisement