

ಮುಂಬೈ: ನಟ ವಿಕ್ಕಿ ಕೌಶಾಲ್ ಜೊತೆ ಮದುವೆಯಾಗಿ ಈಗ ಒಂದು ಮಗುವಿನ ತಾಯಿಯಾಗಿರುವ ಬಾಲಿವುಡ್ ನಟಿ ಕತ್ರಿನಾ ಕೈಫ್ ಬಿಕ್ಕಿ ಬಿಕ್ಕಿ ಅತ್ತು, 'ನಾನೇ ನನ್ನ ಕೈಯಾರೆ ವೃತ್ತಿ ಜೀವನ ಹಾಳುಮಾಡಿಕೊಂಡೆ' ಎಂದು ಹೇಳಿದ್ದ ವಿಚಾರ ಬಹಿರಂಗವಾಗಿದೆ.
ಹೌದು.. ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಸಲ್ಮಾನ್ ಖಾನ್ ಮತ್ತು ನಟ ರಣಬೀರ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದರು.
ಅದರಲ್ಲೂ ರಣಬೀರ್ ಕಪೂರ್ ಜೊತೆಗಿನ ಅವರ ಸಂಬಂಧ ಒಂದು ಹಂತ ಮೇಲೇರಿ ಈ ಜೋಡಿ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿತ್ತು.
ಈ ಜೋಡಿ 'ಅಜಬ್ ಪ್ರೇಮ್ ಕಿ ಗಜಬ್ ಕಹಾನಿ'ಚಿತ್ರದಲ್ಲಿ ಕಾಣಿಸಿಕೊಂಡ ಬಳಿಕ ಇವರ ಮದುವೆ ಫಿಕ್ಸ್ ಎಂದೇ ಹೇಳಲಾಗಿತ್ತು. ಆದರೆ ಕಾರಣಾಂತರಗಳಿಂದ ಈ ಜೋಡಿ ಬ್ರೇಕಪ್ ಆಗಿತ್ತು.
ಬಿಕ್ಕಿ ಬಿಕ್ಕಿ ಅತ್ತಿದ್ದ ಕತ್ರೀನಾ!
ರಣಬೀರ್ ಕಪೂರ್ ಜೊತೆಗಿನ ಸಂಬಂಧ ಮುರಿದುಬಿದ್ದಾಗ, ಕತ್ರಿನಾ ಕೈಫ್ ಅವರು ತುಂಬಾ ದುಃಖಿತರಾಗಿದ್ದರು. ಈ ವೇಳೆ ಕತ್ರಿನಾ, 'ನಾನೇ ನನ್ನ ಕೈಯ್ಯಾರೆ ವೃತ್ತಿ ಜೀವನ ಹಾಳುಮಾಡಿಕೊಂಡೆ ಎಂದು ಅಳುತ್ತಾ ಹೇಳಿಕೊಂಡಿದ್ದರಂತೆ.
ಜಹ್ರಾ ಜಾನಿ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ಹಿರಿಯ ಪತ್ರಕರ್ತೆ ಪೂಜಾ ಸಮಂತ್ ಈ ಬಗ್ಗೆ ಮಾತನಾಡಿದ್ದು, 'ರಣಬೀರ್ ಅವರೊಂದಿಗಿನ ಕತ್ರಿನಾ ಅವರ ಬೇರ್ಪಡುವಿಕೆಯ ಬಗ್ಗೆ ಮಾತನಾಡಿದರು. ಆ ಸಮಯದಲ್ಲಿ ನಟಿ ತುಂಬಾ ಅಳುತ್ತಿದ್ದರು ಮತ್ತು ಭಾವನಾತ್ಮಕರಾಗಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ.
ರಣಬೀರ್ ಅವರೊಂದಿಗಿನ ಪ್ರಣಯದ ಸಮಯದಲ್ಲಿ ಹಲವಾರು ಚಿತ್ರಗಳನ್ನು ತಿರಸ್ಕರಿಸಿದ್ದರಿಂದ ಕತ್ರಿನಾ ತನ್ನ ವೃತ್ತಿಜೀವನ ಕೊನೆಗೊಳ್ಳುತ್ತದೆ ಎಂದು ಭಾವಿಸಿದ್ದರು ಎಂದು ಪತ್ರಕರ್ತೆ ಪೂಜಾ ಸಮಂತ್ ಹೇಳಿದ್ದಾರೆ.
"ನಾವು ಕತ್ರಿನಾ ಅವರನ್ನು ಸಂದರ್ಶಿಸಲು YRF ಸ್ಟುಡಿಯೋಗೆ ಹೋದಾಗ, ಅವರು ತುಂಬಾ ಅಳುತ್ತಿದ್ದರು. ಯಾವುದೇ ರೀತಿಯಂತೆ ಅಳುತ್ತಿದ್ದರು. ನಾನು ತಪ್ಪು ಮಾಡಿದ್ದೇನೆ ಮತ್ತು ಕೆಲಸ ಕಳೆದುಕೊಳ್ಳಲು ನಾನೇ ಜವಾಬ್ದಾರಾಳಾಗಿದ್ದೇನೆ ಎಂದು ಅವರು ಹೇಳುತ್ತಿದ್ದರು" ಎಂದು ಪೂಜಾ ನೆನಪಿಸಿಕೊಂಡರು.
ಅಂತೆಯೇ, ರಣಬೀರ್ ಕಪೂರ್ ರನ್ನುತುಂಬಾ ಪ್ರೀತಿಸುತ್ತಿದ್ದೆ. ಆದರೆ ನಂತರ ವಿಷಯಗಳು ಬೇರೆಯಾಯಿತು. ಈಗ ನಾವು ಒಟ್ಟಿಗೆ ಇಲ್ಲ ಎಂದು ಹೇಳುತ್ತಿದ್ದಳು. ಆದರೆ ಅವನ ಕಾರಣದಿಂದಾಗಿ, ನಾನು ನನ್ನ ವೃತ್ತಿಜೀವನವನ್ನು ಹಾಳುಮಾಡಿಕೊಂಡೆ ಎಂದು ಹೇಳಿದ್ದರು.
ರಣಬೀರ್ ಅವರನ್ನು ಮದುವೆಯಾದ ನಂತರ, ಅವರು ಕಪೂರ್ ಕುಟುಂಬದ ಸದಸ್ಯರಾಗಿರುತ್ತಿದ್ದರು ಎಂದು ಕತ್ರಿನಾ ಭಾವಿಸಿರಬೇಕು. ಅವರು ತಮ್ಮ ಸೊಸೆಯಂದಿರಿಗೆ ಸಿನಿಮಾಗಳಲ್ಲಿ ಕೆಲಸ ಮಾಡಲು ಬಿಡುವುದಿಲ್ಲ ಎಂದು ಆಕೆ ಭಾವಿಸಿರಬೇಕು, ಕನಿಷ್ಠ ಆಗ ಪರಿಸ್ಥಿತಿ ಹೀಗಿತ್ತು, ಈಗ ವಿಷಯಗಳು ಬದಲಾಗಿವೆ. ಅವರು ಬಹಳಷ್ಟು ಚಿತ್ರಗಳನ್ನು ಬಿಟ್ಟುಬಿಟ್ಟಿದ್ದಾರೆ. ಅವರು ತುಂಬಾ ನಿರಾಶೆಗೊಂಡಿದ್ದರು" ಎಂದು ಪೂಜಾ ಹೇಳಿದರು.
ವಿಕ್ಕಿ ಕೌಶಲ್ ಜೊತೆ ವಿವಾಹ
ಕತ್ರಿನಾ ಕೈಫ್ ಈಗ ವಿಕ್ಕಿ ಕೌಶಲ್ ಅವರನ್ನು ವಿವಾಹವಾದರು. ಇಬ್ಬರೂ ಡಿಸೆಂಬರ್ 2021 ರಲ್ಲಿ ವಿವಾಹವಾಗಿದ್ದರು ಮತ್ತು ಈ ವರ್ಷ ನವೆಂಬರ್ 7 ರಂದು ಈ ಜೋಡಿ ತಮ್ಮ ಮೊದಲ ಮಗುವನ್ನು ಕೂಡ ಸ್ವಾಗತಿಸಿದೆ. ಅಂತೆಯೇ ನಟ ರಣಬೀರ್ ಕಪೂರ್ ಕೂಡ ಏಪ್ರಿಲ್ 2022 ರಲ್ಲಿ ನಟಿ ಆಲಿಯಾ ಭಟ್ ಅವರನ್ನು ವಿವಾಹವಾದರು. ಈ ಜೋಡಿಗೂ ಕೂಡ ರಾಹಾ ಎಂಬ ಹೆಣ್ಣು ಮಗುವಿದೆ.
Advertisement