

ನವದೆಹಲಿ: ರಣವೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಆದಿತ್ಯ ಧಾರ್ ನಿರ್ದೇಶನದ 'ಧುರಂಧರ್' ಚಿತ್ರ ದೇಶೀಯ ಗಲ್ಲಾ ಪೆಟ್ಟಿಗೆಯಲ್ಲಿ ₹500 ಕೋಟಿಗಳನ್ನು ದಾಟಿದೆ ಎಂದು ಚಿತ್ರತಂಡ ಶನಿವಾರ ತಿಳಿಸಿದ್ದಾರೆ.
ಡಿಸೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಸಂಜಯ್ ದತ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್, ಆರ್ ಮಾಧವನ್ ಮತ್ತು ರಾಕೇಶ್ ಬೇಡಿ ಕೂಡ ನಟಿಸಿದ್ದಾರೆ.
ಕಂದಹಾರ್ ವಿಮಾನ ಅಪಹರಣ, 2001ರ ಸಂಸತ್ತಿನ ದಾಳಿ ಮತ್ತು 26/11 ಮುಂಬೈ ದಾಳಿಗಳಂತಹ ಭೌಗೋಳಿಕ ಮತ್ತು ಭಯೋತ್ಪಾದಕ ಘಟನೆಗಳ ಹಿನ್ನೆಲೆಯಲ್ಲಿ ನಡೆದ ರಹಸ್ಯ ಗುಪ್ತಚರ ಕಾರ್ಯಾಚರಣೆಗಳ ಬಗ್ಗೆ ಚಿತ್ರದಲ್ಲಿ ತೋರಿಸಲಾಗಿದೆ.
ಪ್ರೊಡಕ್ಷನ್ ಬ್ಯಾನರ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ನೊಂದಿಗೆ ಸುದ್ದಿಯನ್ನು ಹಂಚಿಕೊಂಡಿದ್ದು, ಚಿತ್ರದ ಒಟ್ಟು ಸಂಗ್ರಹ ₹503.20 ಕೋಟಿ ಆಗಿದೆ ಎಂದು ಚಿತ್ರದ ಪೋಸ್ಟರ್ ಮೇಲೆ ಬರೆದಿದೆ.
'ಮತ್ತೊಂದು ದಿನ, ಮತ್ತೊಂದು ದಾಖಲೆ ಮುರಿದುಬಿದ್ದಿದೆ! ನಿಮ್ಮ ಟಿಕೆಟ್‌ಗಳನ್ನು ಬುಕ್ ಮಾಡಿ. ಧುರಂಧರ್ ಸಿನಿಮಾ ವಿಶ್ವದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ' ಎಂದು ಬರೆದಿದೆ.
ಆದಿತ್ಯ ಧಾರ್ ಮತ್ತು ಅವರ ಸಹೋದರ ಲೋಕೇಶ್ ಧಾರ್ ಅವರು ತಮ್ಮ ಬಿ62 ಸ್ಟುಡಿಯೋಸ್ ಬ್ಯಾನರ್ ಮೂಲಕ ಜಿಯೋ ಸ್ಟುಡಿಯೋಸ್‌ನ ಜ್ಯೋತಿ ದೇಶಪಾಂಡೆ ಜೊತೆಗೆ ನಿರ್ಮಿಸಿದ್ದಾರೆ.
Advertisement