
ನವದೆಹಲಿ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರು ಮುಂಬೈನ ಬಾಂದ್ರಾ ವೆಸ್ಟ್ ಅಪಾರ್ಟ್‌ಮೆಂಟ್ ಅನ್ನು 22.50 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ರಿಯಲ್ ಎಸ್ಟೇಟ್ ಕನ್ಸಲ್ಟಂಟ್ ಸ್ಕ್ವೇರ್ ಯಾರ್ಡ್ಸ್ ತಿಳಿಸಿದೆ.
ಈ ಕುರಿತು ಸೋಮವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಈ ವಹಿವಾಟಿಗೆ ಸಂಬಂಧಿಸಿದ ಆಸ್ತಿ ನೋಂದಣಿ ದಾಖಲೆಗಳನ್ನು ಸ್ಕ್ವೇರ್ ಯಾರ್ಡ್ಸ್ ಪರಿಶೀಲಿಸಿದೆ ಎಂದಿದೆ.
'ಸೋನಾಕ್ಷಿ ಸಿನ್ಹಾ ಅವರು ಮಾರಾಟ ಮಾಡಿರುವ ಆಪಾರ್ಟ್‌ಮೆಂಟ್ 81 Aureate ನಲ್ಲಿದೆ. ಇದು MJ Shah ಗ್ರೂಪ್‌ನ ಯೋಜನೆಯಾಗಿದ್ದು, ಇದು 4.48 ಎಕರೆಗಳಲ್ಲಿ ಹರಡಿದೆ ಮತ್ತು 4 BHK ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿದೆ. ಈ ಅಪಾರ್ಟ್‌ಮೆಂಟ್ ಸುಮಾರು 4,632 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ.
ಈ ವಹಿವಾಟಿಗೆ 1.35 ಕೋಟಿ ರೂಪಾಯಿ ಸ್ಟ್ಯಾಂಪ್ ಡ್ಯೂಟಿ ಮತ್ತು 30,000 ರೂಪಾಯಿ ನೋಂದಣಿ ಶುಲ್ಕ ಪಾವತಿಸಲಾಗಿದೆ.
'ಅದೇ ಅಪಾರ್ಟ್‌ಮೆಂಟ್ ಅನ್ನು ಸೋನಾಕ್ಷಿ ಸಿನ್ಹಾ ಅವರು 2020ರ ಮಾರ್ಚ್‌ನಲ್ಲಿ 14 ಕೋಟಿ ರೂಪಾಯಿಗೆ ಖರೀದಿಸಿದ್ದರು. ಈಗ ಅದನ್ನು 8 ಕೋಟಿ ರೂ. ಲಾಭದೊಂದಿಗೆ ಮಾರಾಟ ಮಾಡಲಾಗಿದೆ. ಸೋನಾಕ್ಷಿ ಸಿನ್ಹಾ ಅವರು 81 Aureate ನಲ್ಲಿಯೇ ಮತ್ತೊಂದು ಅಪಾರ್ಟ್‌ಮೆಂಟ್ ಹೊಂದಿದ್ದಾರೆ' ಎಂದಿದೆ.
Advertisement