
ನವದೆಹಲಿ: ಬಾಲಿವುಡ್ ಸ್ಟಾರ್ ದಂಪತಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಇದೀಗ ತಾವು ಮೊದಲನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಶುಕ್ರವಾರ ಘೋಷಿಸಿದ್ದಾರೆ.
ದಂಪತಿ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದು, ಮಗುವಿನ ಸಾಕ್ಸ್‌ಗಳ ಫೊಟೋ ಹಂಚಿಕೊಂಡಿದ್ದಾರೆ.
'ನಮ್ಮ ಜೀವನದ ಶ್ರೇಷ್ಠ ಉಡುಗೊರೆಯು ಶೀಘ್ರದಲ್ಲೇ ಬರಲಿದೆ' ಎಂದು 33 ವರ್ಷದ ಕಿಯಾರಾ ಅಡ್ವಾಣಿ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಮಲ್ಹೋತ್ರಾ (40) ಮತ್ತು ಕಿಯಾರಾ ಅಡ್ವಾಣಿ 2023ರ ಫೆಬ್ರುವರಿಯಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಸೂರ್ಯಗಢ ಅರಮನೆಯಲ್ಲಿ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದರು.
2021ರಲ್ಲಿ ತೆರೆಕಂಡ ಶೇರ್‌ಷಾ ಚಿತ್ರದಲ್ಲಿ ದಂಪತಿ ಒಟ್ಟಿಗೆ ಕೆಲಸ ಮಾಡಿದ್ದರು. ತಮ್ಮ ಸಂಬಂಧವನ್ನು ಖಾಸಗಿಯಾಗಿ ಇಟ್ಟುಕೊಂಡಿದ್ದರು.
ಕಿಯಾರಾ ಅಡ್ವಾಣಿ ಇತ್ತೀಚೆಗೆ ರಾಮ್ ಚರಣ್ ಅಭಿನಯದ 'ಗೇಮ್ ಚೇಂಜರ್' ಚಿತ್ರದಲ್ಲಿ ನಟಿಸಿದ್ದಾರೆ. ಯಶ್ ನಟನೆಯ 'ಟಾಕ್ಸಿಕ್' ಮತ್ತು 'ವಾರ್ 2' ಚಿತ್ರದಲ್ಲಿ ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್‌ಟಿಆರ್ ಜೊತೆಗೆ ನಟಿಸಲಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ಅವರು ಜಾನ್ವಿ ಕಪೂರ್ ಜೊತೆಗೆ 'ಪರಮ ಸುಂದರಿ' ಚಿತ್ರದಲ್ಲಿ ಮತ್ತು ಜಾನಪದ ಥ್ರಿಲ್ಲರ್ 'Vvan' ನಲ್ಲಿ ಸಹ ನಟಿಸುತ್ತಿದ್ದಾರೆ.
Advertisement