
ಮುಂಬೈ: ಮಕ್ಕಳಿಗೆ ನೀಡಲಾಗುವ ಇತಿಹಾಸದ ಪುಸ್ತಕಗಳಲ್ಲಿ ಬಹಳಷ್ಟು ವಿಷಯಗಳನ್ನು ಸರಿಪಡಿಸಬೇಕಾಗಿದೆ. ನಾವು ಅಕ್ಬರ್ ಅಥವಾ ಔರಂಗಜೇಬ್ ಬಗ್ಗೆ ಓದುತ್ತೇವೆ ಆದರೆ ನಮ್ಮದೇ ವೀರರ ಬಗ್ಗೆ ಓದುವುದಿಲ್ಲ ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ತಿಳಿಸಿದ್ದಾರೆ.
ಸಿಎನ್‌ಎನ್-ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ, ಶಾಲಾ ಪಠ್ಯ ಪುಸ್ತಕಗಳ ಭಾಗವಾಗಿರಬೇಕಾದ ಚಿತ್ರ ಇದಾಗಿದೆ. ಪುಸ್ತಕಗಳಲ್ಲಿ ಇಲ್ಲದ ಎಷ್ಟೋ ವಿಷಯಗಳು ಇಲ್ಲಿವೆ. ನಾನು ಉದ್ದೇಶಪೂರ್ವಕವಾಗಿ ನಮ್ಮ ಪುಸ್ತಕಗಳ ಭಾಗವಲ್ಲದ ಪಾತ್ರಗಳನ್ನೇ ನಿರ್ವಹಿಸುತ್ತೇನೆ. ನಾನು ಇಂತಹ ಚಿತ್ರಗಳಲ್ಲಿ ನಟಿಸಲು ಬಯುಸ್ತೇನೆ. ಏಕೆಂದರೆ, ಅವರೆಲ್ಲ ಅಪರಿಚಿತ ವೀರರು. ಯಾರೊಬ್ಬರೂ ಆಳಕ್ಕೆ ಹೋಗದ ಕಾರಣ ಜನರಿಗೆ ಅವರ ಬಗ್ಗೆ ಏನೂ ತಿಳಿದಿಲ್ಲ. ನಾನು ಅಂತಹ ಪಾತ್ರಗಳನ್ನು ಆಯ್ದುಕೊಳ್ಳುತ್ತೇನೆ ಎಂದರು.
ನಾವು ಅಕ್ಬರ್ ಮತ್ತು ಔರಂಗಜೇಬ್ ಬಗ್ಗೆ ಇತಿಹಾಸದ ಪುಸ್ತಕಗಳಿಂದ ತಿಳಿದುಕೊಳ್ಳುತ್ತೇವೆ. ಆದರೆ, ಅವರಲ್ಲದೆ ಮತ್ತಷ್ಟು ವೀರರು ನಮ್ಮಲ್ಲಿ ಇದ್ದರು. ಅವರನ್ನು ಪಠ್ಯಪುಸ್ತಕಗಳಲ್ಲಿ ಉಲ್ಲೇಖಿಸಬೇಕಾಗಿದೆ. ಸೇನೆಯಿಂದ ಹಲವು ಕಥೆಗಳಿವೆ. ಎಷ್ಟೋ ಮಂದಿಗೆ ಪರಮವೀರ ಚಕ್ರ ನೀಡಿ ಗೌರವಿಸಲಾಗಿದೆ. ಇತಿಹಾಸವನ್ನು ಸರಿಪಡಿಸಬೇಕು ಮತ್ತು ಈ ರೀತಿಯ ನಾಯಕರನ್ನು ಮುನ್ನೆಲೆಗೆ ಕರೆತರಬೇಕು ಮತ್ತು ನಮ್ಮ ಪೀಳಿಗೆಗೆ ತಿಳಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದರು.
ಕಳೆದ ಕೆಲವು ವರ್ಷಗಳಲ್ಲಿ, ಅಕ್ಷಯ್ ಕುಮಾರ್ ವಿವಿಧ ಜೀವನಚರಿತ್ರೆಗಳಲ್ಲಿ ನಟಿಸಿದ್ದಾರೆ. 2018 ರಲ್ಲಿ ಅವರು ಪ್ಯಾಡ್ ಮ್ಯಾನ್ ಚಿತ್ರದಲ್ಲಿ ಲಕ್ಷ್ಮೀಕಾಂತ್ ಚೌಹಾಣ್ ಪಾತ್ರವನ್ನು ನಿರ್ವಹಿಸಿದ್ದರು. ನಂತರ ಅವರು ಗೋಲ್ಡ್ (2018), ಕೇಸರಿ (2019), ಸಾಮ್ರಾಟ್ ಪೃಥ್ವಿರಾಜ್ (2022), ಮಿಷನ್ ರಾಣಿಗಂಜ್ (2023), ಸರ್ಫಿರಾ (2024) ಮತ್ತು ಈಗ ಸ್ಕೈ ಫೋರ್ಸ್‌ನಂತಹ ಬಯೋಪಿಕ್‌ಗಳಲ್ಲಿ ನಟಿಸಿದ್ದಾರೆ. ಸ್ಕೈ ಫೋರ್ಸ್ ಜನವರಿ 24 ರಂದು ಬಿಡುಗಡೆಯಾಗಲಿದೆ.
ಸ್ಕೈ ಫೋರ್ಸ್ ಕೂಡ ನೈಜ ಕಥೆಗಳನ್ನು ಆಧರಿಸಿದೆ. ಇದು 1965ರ ಭಾರತ-ಪಾಕಿಸ್ತಾನದ ವಾಯು ಯುದ್ಧದಲ್ಲಿ ಪಾಕಿಸ್ತಾನದ ಸರ್ಗೋಧಾ ವಾಯುನೆಲೆಯ ಮೇಲೆ ಭಾರತದ ಪ್ರತೀಕಾರದ ದಾಳಿಯ ಕಥೆಯನ್ನು ಒಳಗೊಂಡಿದೆ. ಚಿತ್ರದಲ್ಲಿ ಅಕ್ಷಯ್ ವಿಂಗ್ ಕಮಾಂಡರ್ KO ಅಜುಹಾ (ನಿಜ ಜೀವನದ ನಾಯಕ OP ತನೇಜಾ ಅವರಿಂದ ಪ್ರೇರಿತ) ಮತ್ತು ಟಿ ವಿಜಯಾ ಪಾತ್ರದಲ್ಲಿ ವೀರ್ ಪಹರಿಯಾ (ಅಜ್ಜಮಾಡ ಬೊಪ್ಪಯ್ಯ ದೇವಯ್ಯ ಅವರಿಂದ ಪ್ರೇರಿತ) ನಟಿಸಿದ್ದಾರೆ.
ಸಂದೀಪ್ ಕೆವ್ಲಾನಿ ಮತ್ತು ಅಭಿಷೇಕ್ ಅನಿಲ್ ಕಪೂರ್ ನಿರ್ದೇಶನದ ಸ್ಕೈ ಫೋರ್ಸ್ ಚಿತ್ರದಲ್ಲಿ ಸಾರಾ ಅಲಿ ಖಾನ್ ಮತ್ತು ನಿಮ್ರತ್ ಕೌರ್ ಕೂಡ ನಟಿಸಿದ್ದಾರೆ. 'ಸ್ತ್ರೀ 2' ನಿರ್ಮಾಪಕ ದಿನೇಶ್ ವಿಜನ್ ತಮ್ಮ ಬ್ಯಾನರ್ ಮ್ಯಾಡಾಕ್ ಫಿಲ್ಮ್ಸ್ ಅಡಿಯಲ್ಲಿ ಚಿತ್ರಕ್ಕೆ ಬೆಂಬಲ ನೀಡುತ್ತಿದ್ದಾರೆ.
Advertisement