'ನಾವು ಪರಸ್ಪರ ಪ್ರೀತಿಸುತ್ತಿದ್ದೇವೆ': ಪಾಕ್ ನಟನ ಜೊತೆ Rakhi Sawant 3ನೇ ಮದುವೆ! ಯಾರು ಆ ಅದೃಷ್ಟವಂತ?

ರಾಖಿ ಸಾವಂತ್ ಈಗಾಗಲೇ 2 ಬಾರಿ ಮದುವೆಯಾಗಿದ್ದು, ಆ ಎರಡೂ ಮದುವೆಗಳು ಮುರಿದುಬಿದ್ದಿದೆ. 2019ರಲ್ಲಿ ಅವರು ರಿತೇಶ್ ಸಿಂಗ್ ಜೊತೆ ಮದುವೆ ಆಗಿದ್ದರು.
Rakhi Sawant confirms her 3rd wedding
ರಾಖಿ ಸಾವಂತ್
Updated on

ಮುಂಬೈ: ವಿವಾದಿತ ನಟಿ ರಾಖಿ ಸಾವಂತ್ ಮತ್ತೆ ಮದುವೆಯಾಗುತ್ತಿದ್ದು, ಅಧಿಕೃತವಾಗಿ ತಮ್ಮ ಮೂರನೇ ಮದುವೆಯನ್ನು ಘೋಷಿಸಿದ್ದಾರೆ.

ಹೌದು.. ಯಾವಾಗಲೂ ವಿವಾದಗಳ ಮೂಲಕವೇ ಸುದ್ದಿಯಾಗುತ್ತಿದ್ದ ರಾಖಿ ಸಾವಂತ್ ಈ ಬಾರಿ ಮದುವೆ ವಿಚಾರವಾಗಿ ಸುದ್ದಿಗೆ ಬಂದಿದ್ದಾರೆ. ರಾಖಿ ಸಾವಂತ್ ಈಗಾಗಲೇ 2 ಬಾರಿ ಮದುವೆಯಾಗಿದ್ದು, ಆ ಎರಡೂ ಮದುವೆಗಳು ಮುರಿದುಬಿದ್ದಿದೆ.

2019ರಲ್ಲಿ ಅವರು ರಿತೇಶ್ ಸಿಂಗ್ ಜೊತೆ ಮದುವೆ ಆಗಿದ್ದರು. ಆದರೆ ಕೇವಲ ಮೂರು ವರ್ಷಗಳಲ್ಲಿ ಅಂದರೆ 2022ರಲ್ಲಿ ವಿಚ್ಛೇದನ ಪಡೆದುಕೊಂಡರು. ಬಳಿಕ ಮೈಸೂರು ಮೂಲದ ಆದಿಲ್ ಖಾನ್​ ಜೊತೆ ಮದುವೆ ನೆರವೇರಿತು. ಆ ಮದುವೆ ಕೂಡ ಕಿರಿಕ್​ನಲ್ಲಿ ಅಂತ್ಯವಾಯಿತು.

ಇದೀಗ ರಾಖಿ ಸಾವಂತ್ ಮೂರನೇ ಬಾರಿಗೆ ಮದುವೆಯಾಗಲು ಸಜ್ಜಾಗಿದ್ದಾರೆ. ಈ ಬಾರಿ ಅವರು ಪಾಕಿಸ್ತಾನದ ಹುಡುಗನ ಕೈ ಹಿಡಿಯಲಿದ್ದಾರೆ. ರಾಖಿ ಸಾವಂತ್ ಗೆ ಪಾಕಿಸ್ತಾನದಿಂದ ಮದುವೆ ಪ್ರಪೋಸಲ್ ಬಂದಿದ್ದು, ನಾನು ಪಾಕಿಸ್ತಾನದ ಸೊಸೆ ಆಗುತ್ತೇನೆ’ ಎಂದು ಅವರು ಹೇಳಿದ್ದಾರೆ.

Rakhi Sawant confirms her 3rd wedding
ಹೌದು... ನಾನು ಬೋಲ್ಡ್ ಇರಬಹುದು, ಅದರರ್ಥ ಮುಟ್ಟಿ ಚಪಲ ತೀರಿಸಿಕೊಳ್ಳಿ ಅಂತಲ್ಲ: ಮೌನ ಮುರಿದ ಪಾಕ್ ಮಾಡೆಲ್, ವಿಡಿಯೋ ನೋಡಿ!

ಯಾರು ಆ 'ಅದೃಷ್ಟ'ವಂತ

ಪಾಕಿಸ್ತಾನದಲ್ಲಿ ಗುರುತಿಸಿಕೊಂಡಿರುವ ನಟ, ಮಾಡೆಲ್ ಡೊಡಿ ಖಾನ್ ಜೊತೆ ರಾಖಿ ಸಾವಂತ್ ಮದುವೆ ಆಗುವುದಾಗಿ ತಿಳಿಸಿದ್ದಾರೆ. ಡೊಡಿ ಖಾನ್ ಅವರು ಅಲ್ಲಿ ಪೊಲೀಸ್ ಅಧಿಕಾರಿ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಸ್ವತಃ ಡೊಡಿ ಖಾನ್ ಅವರು ರಾಖಿ ಸಾವಂತ್​ಗೆ ಮದುವೆಯ ಪ್ರಪೋಸ್ ಮಾಡಿದ್ದಾರೆ ಎನ್ನಲಾಗಿದೆ. ಈ ವಿಡಿಯೋವನ್ನು ರಾಖಿ ಸಾವಂತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ದಿಬ್ಬಣ ತೆಗೆದುಕೊಂಡು ಭಾರತಕ್ಕೆ ಬರಲೇ ಅಥವಾ ದುಬೈಗೆ ಬರಲೇ’ ಎಂದು ಡೊಡಿ ಖಾನ್ ಕೇಳಿದ್ದಾರೆ. ‘ಅವರೇ ನನ್ನ ಪ್ರೀತಿ. ನಾವಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ. ಅವರು ಪಾಕಿಸ್ತಾನದವರು. ನಾನು ಭಾರತದವಳು. ನಮ್ಮದು ಲವ್ ಮ್ಯಾರೇಜ್ ಆಗಲಿದೆ’ ಎಂದು ರಾಖಿ ಸಾವಂತ್ ಅವರು ಹೇಳಿದ್ದಾರೆ.

ಮಾಜಿ ಪತಿ ವಿರುದ್ಧ ರಾಖಿ ಕಿಡಿ

ಇದೇ ವೇಳೆ ಮಾಜಿ ಪತಿ ಆದಿಲ್ ಖಾನ್​ಬಗ್ಗೆ ರಾಖಿ ಸಾವಂತ್ ಕಿಡಿಕಾರಿದ್ದಾರೆ. ‘ನಾನು ಈಗ ಮದುವೆ ಆಗುತ್ತಿರುವುದಕ್ಕೆ ಆದಿಲ್ ಖಾನ್​ಗೆ ಹೊಟ್ಟೆ ಕಿಚ್ಚು. ಅವನಿಗೆ ಕೆಟ್ಟ ಪ್ರಚಾರ ಬೇಕು. ಆ ಮೂರ್ಖನಿಗೆ ನಾನು ಪ್ರಚಾರ ನೀಡುವುದಿಲ್ಲ’ ಎಂದು ರಾಖಿ ಸಾಂವತ್ ಹೇಳಿದ್ದಾರೆ. ಅಂತೆಯೇ ‘ಮಕ್ಕಳಿಗೆ ಭಾರತದಲ್ಲಿ ಜನ್ಮ ನೀಡಬೇಕೋ ಅಥವಾ ಪಾಕಿಸ್ತಾನದಲ್ಲಿ ಜನ್ಮ ನೀಡಬೇಕೋ ಎಂಬ ಬಗ್ಗೆ ನಾನು ಇನ್ನೂ ನಿರ್ಧಾರ ಮಾಡಿಲ್ಲ. ಮೆಕ್ಕಾ, ಮದೀನಾಗೆ ಹೋಗುವ ಹುಡುಗ ನನಗೆ ಬೇಕಿತ್ತು. ಪಾಕಿಸ್ತಾನದ ಹುಡುಗರು ಇಸ್ಲಾಂ ವಿಚಾರದಲ್ಲಿ ಬಹಳ ಗಟ್ಟಿಯಾಗಿರುತ್ತಾರೆ. 5 ಬಾರಿ ನಮಾಜ್ ಮಾಡುತ್ತಾರೆ. ನನ್ನನ್ನು ಮದುವೆ ಆಗುವವರು ಪಾಕಿಸ್ತಾನದಲ್ಲಿ ದೊಡ್ಡ ಪೊಲೀಸ್ ಅಧಿಕಾರಿ ಹಾಗೂ ನಟ ಕೂಡ ಹೌದು’ ಎಂದು ರಾಖಿ ಸಾವಂತ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com