
ಮುಂಬೈ: ತಮ್ಮ ಬೋಲ್ಡ್ ಉಡುಪಿನಿಂದಲೇ ಸದಾಕಾಲ ಸುದ್ದಿಗೆ ಗ್ರಾಸವಾಗುವ ಬಾಲಿವುಡ್ ನಟಿ ಖುಷಿ ಮುಖರ್ಜಿ ಈ ಬಾರಿ ಟೀಕಾಕಾರರಿಗೆ ಖಾರವಾಗಿಯೇ ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ನಟಿ ಖುಷಿ ಮುಖರ್ಜಿ ಧರಿಸಿದ್ದ 'ಬಾಟಮ್ ಲೆಸ್' ಡ್ರೆಸ್ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದ್ದಂತೆಯೇ ನಟಿ ಕುರಿತು ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಸ್ವತಃ ಬಾಲಿವುಡ್ ನಟಿಮಣಿಯರು ಖುಷಿ ಮುಖರ್ಜಿಯನ್ನು ಬಹಿರಂಗವಾಗಿಯೇ ಟೀಕಿಸಿದ್ದರು.
ಕಿರುತೆರೆ ನಟಿ ಫಲಕ್ ನಾಜ್ ನಟಿ ಖುಷಿ ಮುಖರ್ಜಿಯನ್ನು ಬೀದಿ ನಾಯಿಗೆ ಹೋಲಿಕೆ ಮಾಡಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ವೈರಲ್ ಆಗುತ್ತಲೇ ಇದೀಗ ನಟಿ ಖುಷಿ ಮುಖರ್ಜಿ ತಿರುಗೇಟು ನೀಡಿದ್ದಾರೆ.
ನಾನು ಥಾಂಗ್ ಧರಿಸಿದ್ದೆ... ನಿಮಗೆ ಕಾಣಲಿಲ್ಲವೇ?
ಇನ್ನು ತಮ್ಮ ವಿರುದ್ಧದ ಟೀಕೆಗಳಿಗೆ ತಿರುಗೇಟು ನೀಡಿರುವ ಖುಷಿ ಮುಖರ್ಜಿ, 'ನಾನು ಚಡ್ಡಿ ಧರಿಸಿದ್ದೇನೋ ಇಲ್ಲವೋ ಎಂದು ನೀವು ನೋಡಿದ್ದೀರಾ?, ಯಾರೂ ಚಡ್ಡಿಯಿಂದ ಹೊರಬರುವುದಿಲ್ಲ?. ಅಂದು ನಾನು ಥಾಂಗ್ ಧರಿಸಿದ್ದೆ, ನಾನು ಅದರ ಪಟ್ಟಿಯನ್ನು ಹೊರತೆಗೆದು ಅದನ್ನು ಇಟ್ಟುಕೊಂಡಿದ್ದೆ... ಸ್ಕಿನ್ ಫಿಟ್ ಆಗಿದ್ದರಿಂದ ಕೆಲವರು ನಾನು ಏನೂ ಧರಿಸಿರಲಿಲ್ಲ ಎಂದು ಟೀಕಿಸುತ್ತಿದ್ದಾರೆ. ಆ ಟೀಕೆಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಅಂದು ಜೋರಾಗಿ ಗಾಳಿ ಬೀಸುತ್ತಿತ್ತು. ಹೀಗಾಗಿ ನನ್ನ ಮೇಲಿನ ಉಡುಪು ಗಾಳಿಯಲ್ಲಿ ಹಾರುತ್ತಿತ್ತು. ಇದೇ ಕಾರಣಕ್ಕೆ ನಾನು ಅದನ್ನು ಹಿಡಿದುಕೊಂಡಿದ್ದೆ. ಒಂದು ವೇಳೆ ನಾನು ಅದರ ಪಾಡಿಗೆ ಅದನ್ನು ಬಿಟ್ಟಿದ್ದರೆ ನೀವು ಅದನ್ನ ನಿಮ್ಮ ಕ್ಯಾಮೆರಾಗಳಲ್ಲಿ ತಕ್ಷಣ ಕ್ಲಿಕ್ಕಿಸಿಬಿಡುತ್ತಿದ್ದಿರಿ. ನನ್ನ ಉಡುಪು ಮತ್ತು ದೇಹ ಪ್ರದರ್ಶನ ವಿಚಾರವಾಗಿ ನಾನು ಜಾಗೃತಳಾಗಿರುತ್ತೇನೆ. ಆದರೂ ಜನ ನಾನು ನನ್ನ ದೇಹ ಪ್ರದರ್ಶನ ಮಾಡುತ್ತಿದ್ದೇನೆ ಎಂದು ಟೀಕಿಸುತ್ತಿದ್ದಾರೆ ಎಂದು ಖುಷಿ ಮುಖರ್ಜಿ ಹೇಳಿದ್ದಾರೆ.
ವಿಷಪೂರಿತ ಜನ
"ಜನರು ತುಂಬಾ ವಿಷಪೂರಿತರಾಗಿದ್ದಾರೆ... ಅವರಿಗೆ ಏನು ಬೇಕು? ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೇ? ಅದು ಸಾಧ್ಯವಿಲ್ಲ. ನಾನು ಅಂತಹ ಹೆಣ್ಣಲ್ಲ.. ಜನರು ನನ್ನ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಬಹುದು. ಆದರೆ ನಾನು ಮಾಡಿಕೊಳ್ಳುವುದಿಲ್ಲ. ನಾನು ಇದನ್ನೆಲ್ಲಾ ಮಾಡುತ್ತೇನೆ ಎಂದರೆ ನನಗೆ ಕಾಳಜಿ ಇಲ್ಲ. ಅಂತೆಯೇ ಯಾರ ಕಾಳಜಿಯೂ ನನಗೂ ಬೇಕಿಲ್ಲ. ಆಕೆಯ ಮಾತುಗಳು ನಿರಂತರ ಆನ್‌ಲೈನ್ ದ್ವೇಷದ ಭಾವನಾತ್ಮಕ ನಷ್ಟವನ್ನು ಬಹಿರಂಗಪಡಿಸುತ್ತಿವೆ ಎಂದು ಖುಷಿ ಮುಖರ್ಜಿ ತಿರುಗೇಟು ನೀಡಿದ್ದಾರೆ.
ಬೀದಿನಾಯಿಗಳಿಗೆ ಹೋಲಿಕೆ ಮಾಡಿದ್ದ ನಟಿ ಫಲಕ್ ನಾಜ್
ಇನ್ನು ಇದೇ ಖುಷಿ ಮುಖರ್ಜಿ ಅವರ 'ಬಾಟಮ್ ಲೆಸ್' ಡ್ರೆಸ್ ವಿಡಿಯೋವನ್ನು ರಿಶೇರ್ ಮಾಡಿದ್ದ ನಟಿ ಫಲಕ್ ನಾಜ್, 'ಕಳೆದ ಬಾರಿ, ನಿಮಗೆಲ್ಲರಿಗೂ ನೆನಪಿರುವಂತೆ, ನಾನು ದೀದಿ (ಖುಷಿ ಮುಖರ್ಜಿ) ಬಗ್ಗೆ ವೀಡಿಯೊ ಮಾಡಿದ್ದೆ. ಈಗ ಇಲ್ಲಿ ವಿಷಯವು ದೀದಿಯನ್ನು ಮೀರಿ ಹೋಗಿದೆ. ಇನ್ನು ಮುಂದೆ ಯಾವುದೇ XYZ ವ್ಯಕ್ತಿಯ ಬಗ್ಗೆ ನಾನು ಮಾತನಾಡುವುದಿಲ್ಲ. ಇದು ನಾನು ಸರ್ಕಾರವನ್ನು ಕೇಳಲು ಬಯಸುವ ವಿಷಯ, ಬೀದಿ ನಾಯಿಗಳ ವಿಚಾರವಾಗಿ ತುಂಬಾ ಗಲಾಟೆ ಇದೆ. ದಂಡ ಕೂಡ ಹೇರುತ್ತೀರಿ. ನಾವು ಅವುಗಳಿಗೆ ಆಹಾರ ನೀಡಬಾರದು ಎಂದು ನಿರ್ಬಂಧ ಹೇರುತ್ತೀರಿ. ಆದರೂ 50 ಘಟನೆಗಳು ನಡೆಯುತ್ತಿರುತ್ತವೆ, ಜನರು ಪ್ರಶ್ನೆಗಳನ್ನು ಎತ್ತುತ್ತಾರೆ.
ಆದರೆ ಇದನ್ನು ನನಗೆ ವಿವರಿಸಿ, ದಯವಿಟ್ಟು ರಸ್ತೆಯಲ್ಲಿ ಈ ರೀತಿ, 'ಅಂತಹ' ಬಟ್ಟೆಗಳನ್ನು ಧರಿಸಬಹುದೇ..? ಇಂದು ವೈರಲ್ ಆಗುತ್ತಿರುವ ವೀಡಿಯೊ, ಇಂದು ದೀದಿ ಏನು ಧರಿಸಿದ್ದಾರೆ ಎಂಬುದನ್ನು ವಿವರಿಸಿ. ಈಗ ಇದು ದೀದಿಯ ಬಗ್ಗೆ ಅಲ್ಲ. ಈಗ ಇದು ಸ್ವೀಕಾರಾರ್ಹವಲ್ಲದ ವಿಷಯ. ನೀವು ಸಮಾಜದಲ್ಲಿ ವಾಸಿಸುತ್ತಿದ್ದರೆ, ಈ ರೀತಿಯದ್ದನ್ನು ಧರಿಸಿ ರಸ್ತೆಯಲ್ಲಿ ಬರುತ್ತಿದ್ದರೆ, ಸರ್ಕಾರ ಏಕೆ ಅದನ್ನು ವಿರೋಧಿಸುತ್ತಿಲ್ಲ? ಅವುಗಳನ್ನು ವರದಿ ಮಾಡುವ ಮಾಧ್ಯಮಗಳಿಗೆ ಮತ್ತು ವರದಿ ಮಾಡಲಾಗುತ್ತಿರುವ ಜನರಿಗೆ ದಂಡ ಏಕೆ ವಿಧಿಸುವುದಿಲ್ಲ? ನಾನು ಇದನ್ನು ತಿಳಿದುಕೊಳ್ಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಅಂತೆಯೇ 'ಈ ಮೂಲಕ ಕುಳಿತಿರುವ ಎಲ್ಲಾ ಜನರು, ದಯವಿಟ್ಟು ಪ್ರಾಧಿಕಾರವನ್ನು ಟ್ಯಾಗ್ ಮಾಡಿ ಮತ್ತು ನಾನು ಉತ್ತರವನ್ನು ತಿಳಿದುಕೊಳ್ಳಲು ಬಯಸುತ್ತೇನೆ, ಇದು ಸರಿಯೇ? ಮತ್ತು ಇದು ಸರಿಯಾಗಿದ್ದರೆ, ಬೀದಿ ನಾಯಿಗಳಿಗೆ ಆಹಾರ ನೀಡುವುದರ ವಿರುದ್ಧವೂ ಯಾರೂ ಧ್ವನಿ ಎತ್ತಬಾರದು. ನೀವು ಬೆತ್ತಲೆಯಾಗಿರುವುದರ ಬಗ್ಗೆ ಧ್ವನಿ ಎತ್ತದಿದ್ದರೆ, ದಯವಿಟ್ಟು ನೀವು ಬೀದಿ ನಾಯಿಗಳಿಗೆ ಆಹಾರ ನೀಡುವಾಗಲೂ ಧ್ವನಿ ಎತ್ತಬೇಡಿ ಎಂದು ಕಿಡಿಕಾರಿದ್ದಾರೆ.
ಯಾರು ಖುಷಿ ಮುಖರ್ಜಿ
ಅಂದಹಾಗೆ ಈ ಖುಷಿ ಮುಖರ್ಜಿ ನಟಿಯಾಗಿದ್ದು, Mutra Visarjan Varjit Hai and Heart Attack (2014) ಚಿತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೆ ಸ್ಪ್ಲಿಟ್ಸ್‌ವಿಲ್ಲಾ ರಿಯಾಲಿಟಿ ಶೋನಾ ಮಾಜಿ ಸ್ಪರ್ಧಿಯಾಗಿದ್ದು, ಹಲವು ಫ್ಯಾಷನ್ ಷೋಗಳಲ್ಲೂ ಕಾಣಿಸಿಕೊಂಡಿದ್ದಾರೆ. ತಮ್ಮ ಬೋಲ್ಡ್ ಉಡುಪಿನಿಂದಲೇ ನಟಿ ಖುಷಿ ಮುಖರ್ಜಿ ಮತ್ತೊಮ್ಮೆ ದೊಡ್ಡ ಸುದ್ದಿಗೆ ಗ್ರಾಸವಾಗಿದ್ದಾರೆ.
Advertisement