
ಲಂಡನ್: ಪಾಕಿಸ್ತಾನದ ಖ್ಯಾತ ನಟಿ ಮಹಿರಾ ಖಾನ್ (Mahira Khan)ಗೆ ಅವರ ಭದ್ರತಾ ಸಿಬ್ಬಂದಿಯೇ ಲೈಂಗಿಕ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ.
ನಟಿ ಮಹಿರಾ ಖಾನ್ ತಮ್ಮ ನೂತನ ಚಿತ್ರ Love Guru ಪ್ರಚಾರಕ್ಕಾಗಿ ಲಂಡನ್ ಗೆ ತೆರಳಿದ್ದ ವೇಳೆ ಅವರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಹೇಳಲಾಗಿದೆ.
ಚಿತ್ರದ ನಾಯಕ ಹುಮಾಯೂನ್ ಸಯೀದ್ ಕೂಡ ಅವರೊಂದಿಗೆ ಹಾಜರಿದ್ದರು. ಈ ವೇಳೆ ಆಕ್ರೋಶಗೊಂಡ ನಟಿ ಜನಸಂದಣಿ ನಡುವೆ ಏನೂ ಮಾಡಲಾಗದೇ ಚಿತ್ರಮಂದಿರದೊಳಗೆ ಹೋದರು ಎನ್ನಲಾಗಿದೆ.
ನಟಿ ಮಹಿರಾ ಖಾನ್ ಲವ್ ಗುರು ಚಿತ್ರದ ಪ್ರಚಾರಕ್ಕಾಗಿ ಲಂಡನ್ ನ ಇಲ್ಫೋರ್ಡ್‌ನಲ್ಲಿರುವ ಇಂಡೋ-ಪಾಕ್ ಸೂಪರ್ ಮಾರ್ಕೆಟ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿ ನೂರಾರು ಮಂದಿ ಅದಾಗಲೇ ಸೇರಿದ್ದರು. ನಟಿ ತುಂಬಾ ಪ್ರಯಾಸಪಟ್ಟು ಜನರ ನಡುವೆಯೇ ತಳ್ಳಾಟ ನೂಕಾಟದ ನಡುವೆ ಕಾರ್ಯಕ್ರಮದ ವೇದಿಕೆಗೆ ಹೋದರು.
ಆದರೆ ಈ ನಡುವೆಯೇ ಮಹಿರಾ ಖಾನ್ ಗೆ ಲೈಂಗಿಕ ಕಿರುಕುಳ ನಡೆದಿದೆ. ಅವರ ಭದ್ರತಾ ಸಿಬ್ಬಂದಿಯೇ ಮಹಿರಾ ಖಾನ್ ದೇಹ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.
ತುಂಬಾ ನೂಕು ನುಗ್ಗಲು ಇದ್ದ ಕಾರಣ ಜನ ನಟಿಯತ್ತ ನುಗ್ಗುತ್ತಿದ್ದರು. ಇದನ್ನೇ ತಮ್ಮ ಕುಕೃತ್ಯಕ್ಕೆ ಬಳಸಿಕೊಂಡದ ಭದ್ರತಾ ಸಿಬ್ಬಂದಿ ಅವರನ್ನು ರಕ್ಷಿಸುವ ನೆಪದಲ್ಲಿ ಅವರ ಮೈಮುಟ್ಟಿ ವಿಕೃತಿ ಮೆರೆದಿದ್ದಾರೆ.
ಮಹಿರಾ ಖಾನ್ ಮತ್ತು ಹುಮಾಯೂನ್ ಸಯೀದ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಾಗ, ಅಲ್ಲಿ ಕಾಲ್ತುಳಿತ ಉಂಟಾಯಿತು. ಜನಸಂದಣಿ ತುಂಬಾ ದೊಡ್ಡದಾಗಿದ್ದು, ಭದ್ರತಾ ವ್ಯವಸ್ಥೆಯನ್ನೂ ಲೆಕ್ಕಿಸದೇ ಜನ ನುಗ್ಗಿದ್ದರು. ಮಹಿರಾ ಜನಸಂದಣಿಯಿಂದ ಹೊರಬರಲು ಹೆಣಗಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಅಂದಹಾಗೆ ಈ ನಟಿ ಮಹಿರಾ ಖಾನ್ ಬಾಲಿವುಡ್ ಚಿತ್ರಗಳಲ್ಲೂ ನಟಿಸಿದ್ದು, ಶಾರುಖ್ ಖಾನ್ ನಟನೆಯ "Raees" (2017) and "Verna" (2017). "Superstar" (2019) ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
Advertisement