

ಮುಂಬೈ: ಮ್ಯೂಸಿಕ್ ಅಲ್ಬಂನಲ್ಲಿ ಅವಕಾಶ ನೀಡಿ, ಮದುವೆಯಾಗುವುದಾಗಿ ಭರವಸೆ ನೀಡಿ ಮಹಿಳೆಯರೊಬ್ಬರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಬಾಲಿವುಡ್ ಗಾಯಕ ಮತ್ತು ಸಂಗೀತ ಸಂಯೋಜಕ ಸಚಿನ್ ಸಾಂಘ್ವಿ ಅವರನ್ನು ಬಂಧಿಸಲಾಗಿದೆ.
ಸ್ತ್ರೀ 2 ಮತ್ತು ಭೇಡಿಯಾ ಸಿನಿಮಾದ ಜನಪ್ರಿಯ ಹಾಡುಗಳನ್ನು ಸಂಯೋಜಿಸಿರುವ ಸಚಿನ್ ಸಾಂಘ್ವಿ ಅವರನ್ನು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫೆಬ್ರವರಿ 2024ರಲ್ಲಿ ನನಗೆ 20 ವರ್ಷ ಇದ್ದಾಗ ಸಂಘ್ವಿ ನನ್ನೊಂದಿಗೆ ಸಂಪರ್ಕ ಬೆಳೆಸಿದ್ದರು. ಇನ್ ಸ್ಟಾಗ್ರಾಮ್ ನಲ್ಲಿ ನನಗೆ ಸಂದೇಶ ಕಳುಹಿಸಿದ್ದರು ಎಂದು ದೂರುದಾರ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಸಚಿನ್ ಸಾಂಘ್ವಿ, ತನ್ನ ಮ್ಯೂಸಿಕ್ ಆಲ್ಬಮ್‌ನಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿ, ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಸ್ಟುಡಿಯೋಗೆ ಕರೆದು ಮದುವೆಯ ಪ್ರಸ್ತಾಪ ಮಾಡಿದ್ದರು. ಅನೇಕ ಸಂದರ್ಭಗಳಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ತನಿಖೆಯ ನಂತರ ಗಾಯಕನನ್ನು ಬಂಧಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
Advertisement