ಸಾಮಾನ್ಯರಿಗೊಂದು, ಸೆಲೆಬ್ರಿಟಿಗಳಿಗೊಂದು ನಿಯಮವೇ..? ಏರ್‌ಪೋರ್ಟ್‌ನಲ್ಲಿ ಸರತಿ ಸಾಲಿನಲ್ಲಿ ನಿಲ್ಲದ ನಟಿ ಕರೀನಾ ಕಪೂರ್ ಭಾರೀ ಟ್ರೋಲ್..!

ಮುಂಬೈ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಗೆ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಂತಿದ್ದಾಗ, ಕರೀನಾ ನೇರವಾಗಿ ಮುಂದೆ ಹೋಗಿ ಒಳ ಪ್ರವೇಶಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
kareena kapoor
ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್
Updated on

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಮುಂಬೈ ಏರ್‌ಪೋರ್ಟ್‌ನಲ್ಲಿ ಅವರು ಸಾಲಿನಲ್ಲಿ ನಿಲ್ಲದೆ, ಮುಂದೆ ಹೋಗಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ಜು. ವಿವಾದಕ್ಕೆ ಕಾರಣವಾಗಿದೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಗೆ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಂತಿದ್ದಾಗ, ಕರೀನಾ ನೇರವಾಗಿ ಮುಂದೆ ಹೋಗಿ ಒಳ ಪ್ರವೇಶಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಘಟನೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಸೆಲೆಬ್ರಿಟಿಗಳಿಗೆ ಈ ರೀತಿಯ ವಿಶೇಷ ಹಕ್ಕು ಯಾರು ಕೊಟ್ಟರು?” ಎಂದು ಕೆಲವರು ಪ್ರಶ್ನಿಸಿದ್ದು, ಸಾಮಾನ್ಯ ಜನರಿಗೆ ಒಂದು, ಸೆಲೆಬ್ರಿಟಿಗಳಿಗೆ ಒಂದು ನಿಯಮವಿದೆಯೇ ಎಂದು ಪ್ರಶ್ನಿಸಿದ್ದಾರೆ.

kareena kapoor
ಸೈಫ್ ಅಲಿ ಖಾನ್ ಮೇಲೆ ಚಾಕು ದಾಳಿ: ಸಾಮಾಜಿಕ ಮಾಧ್ಯಮದಲ್ಲಿ ರಹಸ್ಯ ಪೋಸ್ಟ್ ಹಂಚಿಕೊಂಡ ಕರೀನಾ ಕಪೂರ್!

ಇನ್ನೂ ಕೆಲವರು ಇದು “VIP ಸಂಸ್ಕೃತಿ”ಗೆ ಉದಾಹರಣೆ ಎಂದು ಟೀಕಿಸಿದ್ದು, ಸಾಲಿನಲ್ಲಿ ಕಾಯುತ್ತಿದ್ದವರಿದೆ ಆಗಿರುವ ಅನ್ಯಾಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಇನ್ನೂ ಕೆಲವರು ಕರೀನಾಳ ಪರವೂ ಮಾತನಾಡಿದ್ದಾರೆ. ಭದ್ರತಾ ಕಾರಣಗಳಿಂದ ಅಥವಾ ಜನಸಮೂಹ ನಿಯಂತ್ರಣಕ್ಕಾಗಿ ಸೆಲೆಬ್ರಿಟಿಗಳಿಗೆ ಕೆಲವೊಮ್ಮೆ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಇದಲ್ಲದೆ, ಏಪ್ರಿಲ್.12ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ vs ಆರ್​​ಸಿಬಿ ಮ್ಯಾಚ್ ವೇಳೆ ಕರೀನಾ ಅವರ ವರ್ತನೆಯೂ ವೈರಲ್ ಆಗುತ್ತಿದೆ.

ಮ್ಯಾಚ್ ನೋಡಲು ಬಂದಿದ್ದ ಕರೀನಾ ಅವರು ಪಂದ್ಯ ನೋಡದೆ, ಮೊಬೈಲ್ ಬಳಕೆಯಲ್ಲಿ ಬ್ಯುಸಿಯಾಗಿರುವುದು ಕಂಡು ಬಂದಿತ್ತು. ಅಲ್ಲದೆ, ಮೈದಾನದಲ್ಲಿ ಇರುವಾಗ ಮುಂಬೈ ಇಂಡಿಯನ್ಸ್ ಜರ್ಸಿ ಧರಿಸಿರುವುದು, ಹೊರ ಹೋಗುವಾಗ ಶರ್ಟ್ ಬದಲಿಸಿರುವುದು ಕಂಡು ಬಂದಿತ್ತು. ಇದೂ ಕೂಡ ಚರ್ಚೆಗೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com