3ನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಕರೀನಾ-ಸೈಫ್ ಅಲಿ ಖಾನ್? ಸಂಚಲನ ಸೃಷ್ಟಿಸಿದ ಬೇಬಿ ಬಂಪ್ ವಿಡಿಯೋ!

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಸಾರ್ವಜನಿಕವಾಗಿ ಕಾಣಿಸಿಕೊಂಡು ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದರು. ನಟಿ ತಮ್ಮ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ವೀಡಿಯೊದಲ್ಲಿ, ಕರೀನಾ ಅವರ ಕಾರಿನ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು.
Kareena Kapoor Khan
ಕರೀನಾ ಕಪೂರ್ ಖಾನ್
Updated on

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಸಾರ್ವಜನಿಕವಾಗಿ ಕಾಣಿಸಿಕೊಂಡು ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದರು. ನಟಿ ತಮ್ಮ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ವೀಡಿಯೊದಲ್ಲಿ, ಕರೀನಾ ಅವರ ಕಾರಿನ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು.

ಪಾಪರಾಜಿಗಳು ಫೋಟೋ ತೆಗೆಯುವುದನ್ನು ತಡೆಯಲು ನಟಿಯ ತಂಡದ ಸದಸ್ಯರೊಬ್ಬರು ಅವರ ಮುಂದೆ ಛತ್ರಿ ಹಿಡಿದಿದ್ದಾರೆ. ಆದರೂ ಕರೀನಾ ವೀಡಿಯೊದಲ್ಲಿ ಸೆರೆಯಾಗಿದ್ದು ಅವರ ಹೊಟ್ಟೆ ಉಬ್ಬಿಕೊಂಡಂತೆ ಕಾಣುತ್ತಿದೆ. ಹೀಗಾಗಿ ಅವರ ಅಭಿಮಾನಿಗಳು ಬೆಬೊ ಗರ್ಭಿಣಿಯೇ? ಎಂದು ಪ್ರಶ್ನಿಸುತ್ತಿದ್ದಾರೆ. ಮತ್ತೊಂದೆಡೆ ಬಹುಶಃ ಅವರು ಹೆಚ್ಚು ಪಾಸ್ತಾ ತಿಂದಿರಬಹುದು ಅಥವಾ ಅದು ಕೆಟ್ಟ ಕ್ಯಾಮೆರಾ ಕೋನವಾಗಿರಬಹುದು ಎಂದು ಮತ್ತೊಂದು ಮೂಲ ಹೇಳುತ್ತದೆ. ನಟಿಗೆ ಅದಾಗಲೇ ತೈಮೂರ್ ಮತ್ತು ಜೆಹ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಕರೀನಾ ಮತ್ತು ಸೈಫ್ ಇತ್ತೀಚೆಗೆ ತಮ್ಮ ಮಕ್ಕಳೊಂದಿಗೆ ಬೀಚ್ ರಜೆಯಿಂದ ಮರಳಿದರು. ಆಗಸ್ಟ್ 16 ರಂದು ಸೈಫ್ ಅವರ 56 ನೇ ಹುಟ್ಟುಹಬ್ಬವನ್ನು ಆಚರಿಸಲು ಕುಟುಂಬವು ಅಲ್ಲಿಗೆ ಹೋಗಿತ್ತು. ನಟಿ ತಮ್ಮ ರಜೆಯ ಹಲವಾರು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

Kareena Kapoor Khan
'ಬಾಬಾ ಜೀ, ನನ್ನ ಯೌವನ ಅಥವಾ ಬೆಡ್‌ರೂಂ ಬಗ್ಗೆ ಹಗಲುಗನಸು ಕಾಣಬೇಡಿ': ಬಾಬಾ ರಾಮ್‌ದೇವ್‌ಗೆ ಕಂಗನಾ ರಣಾವತ್ ತಿರುಗೇಟು

ಹಳೆಯ ಸಂದರ್ಶನವೊಂದರಲ್ಲಿ, ಕರೀನಾ ಈಗಾಗಲೇ ತನ್ನ ಕುಟುಂಬದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸೈಫ್ ಅವರು ತಮ್ಮ ಮೊದಲ ಪತ್ನಿ ಅಮೃತಾ ಸಿಂಗ್ ಅವರ ಮಕ್ಕಳಾದ ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್ ಅವರ ತಂದೆಯಾಗಿರುವುದರಿಂದ ಅವರು ಹೆಚ್ಚು ಮಕ್ಕಳನ್ನು ಹೊಂದಬಾರದು ಎಂದು ಹೇಳಿದ್ದಾಗಿ ಕರೀನಾ ಹೇಳಿದ್ದಾರೆ.

ಕರೀನಾ ಮತ್ತು ಸೈಫ್ ಅವರ ಮೊದಲ ಮಗು ತೈಮೂರ್ ಅಲಿ ಖಾನ್ ಡಿಸೆಂಬರ್ 20, 2016 ರಂದು ಜನಿಸಿದರು. ಅವರ ಎರಡನೇ ಮಗ ಜೆಹ್ ಅಲಿ ಖಾನ್ ಫೆಬ್ರವರಿ 21, 2021 ರಂದು ಜನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com