3ನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಕರೀನಾ ಕಪೂರ್? ವೈರಲ್ ವಿಡಿಯೋ ಬಗ್ಗೆ ನಾದಿನಿ ಸಬಾ ಪಟೌಡಿ ಹೇಳಿದ್ದೇನು?

45 ವರ್ಷದ ಕರೀನಾ ಕಪೂರ್ ಖಾನ್ ಅವರು ಮೂರನೇ ಬಾರಿಗೆ ಗರ್ಭಿಣಿಯಾಗಿದ್ದಾರೆ ಎಂಬ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ನಟಿಯ ನಾದಿನಿ ಸಬಾ ಪಟೌಡಿ ಅವರು, ಜನ ಅವರ ಖಾಸಗಿತನವನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.
Kareena Kapoor Khan
ಕರೀನಾ ಕಪೂರ್ ಖಾನ್
Updated on: 

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರು ಮತ್ತೆ ಸುದ್ದಿಯಲ್ಲಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು, ನಟಿ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆಯೇ ಎಂಬ ಪ್ರಶ್ನೆಗಳು ನೆಟ್ಟಿಗರ ಮನದಲ್ಲಿ ಮೂಡಿವೆ.

45 ವರ್ಷದ ಕರೀನಾ ಕಪೂರ್ ಖಾನ್ ಅವರು ಮೂರನೇ ಬಾರಿಗೆ ಗರ್ಭಿಣಿಯಾಗಿದ್ದಾರೆ ಎಂಬ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ನಟಿಯ ನಾದಿನಿ ಸಬಾ ಪಟೌಡಿ ಅವರು, ಜನ ಅವರ ಖಾಸಗಿತನವನ್ನು ಗೌರವಿಸಬೇಕು ಮತ್ತು "ಊಹಾಪೋಹ ಮಾಡುವುದನ್ನು ನಿಲ್ಲಿಸಬೇಕು" ಎಂದು ಹೇಳಿದ್ದಾರೆ.

ಇತ್ತೀಚೆಗೆ ಕರೀನಾ ಕಪೂರ್ ಅವರು ಜಿಮ್‌ನಿಂದ ಹೊರಬರ್ತಿದ್ದಾಗ ಪಾಪರಾಜಿಗಳ ಕ್ಯಾಮೆರಾಗೆ ಸೆರೆಯಾಗಿದ್ದಾರೆ. ವಿಡಿಯೋದಲ್ಲಿ ಜಿಮ್ ಉಡುಪು ಹಾಗೂ ಸನ್‌ಗ್ಲಾಸ್ ಧರಿಸಿದ್ದ ಕರೀನಾ, ಕೈಯಲ್ಲಿ ವಾಟರ್ ಬಾಟಲ್ ಹಿಡಿದು ತಮ್ಮ ಕಾರಿನತ್ತ ಹೆಜ್ಜೆ ಹಾಕಿದ್ದಾರೆ. ಈ ವೇಳೆ, ಅವರ ತಂಡದ ಭದ್ರತಾ ಸಿಬ್ಬಂದಿಯೊಬ್ಬರು ಬಿಸಿಲಿನಿಂದ ರಕ್ಷಿಸಲು ಅವರ ಮೇಲೆ ಛತ್ರಿ ಹಿಡಿದಿದ್ದರು.

ಪಾಪರಾಜಿಗಳು ಫೋಟೋ ತೆಗೆಯುವುದನ್ನು ತಡೆಯಲು ನಟಿಯ ತಂಡದ ಸದಸ್ಯರೊಬ್ಬರು ಅವರಿ ಛತ್ರಿ ಹಿಡಿದಿದ್ದಾರೆ. ಆದರೂ ಕರೀನಾ ವಿಡಿಯೋದಲ್ಲಿ ಸೆರೆಯಾಗಿದ್ದು, ಅವರ ಹೊಟ್ಟೆ ಉಬ್ಬಿಕೊಂಡಂತೆ ಕಾಣುತ್ತಿದೆ. ಹೀಗಾಗಿ ಅವರ ಅಭಿಮಾನಿಗಳು ಬೆಬೊ ಗರ್ಭಿಣಿಯೇ? ಎಂದು ಪ್ರಶ್ನಿಸುತ್ತಿದ್ದಾರೆ. ಮತ್ತೊಂದೆಡೆ ಬಹುಶಃ ಅವರು ಹೆಚ್ಚು ಪಾಸ್ತಾ ತಿಂದಿರಬಹುದು ಅಥವಾ ಅದು ಕೆಟ್ಟ ಕ್ಯಾಮೆರಾ ಕೋನವಾಗಿರಬಹುದು ಎಂದು ಮತ್ತೊಂದು ಮೂಲ ಹೇಳುತ್ತದೆ. ನಟಿಗೆ ಅದಾಗಲೇ ತೈಮೂರ್ ಮತ್ತು ಜೆಹ್ ಎಂಬ ಇಬ್ಬರು ಮಕ್ಕಳಿದ್ದಾರೆ.

Kareena Kapoor Khan
3ನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಕರೀನಾ-ಸೈಫ್ ಅಲಿ ಖಾನ್? ಸಂಚಲನ ಸೃಷ್ಟಿಸಿದ ಬೇಬಿ ಬಂಪ್ ವಿಡಿಯೋ!

ಇನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕರೀನಾ ಅವರ ವಿಡಿಯೋದ ಚಿತ್ರವನ್ನು ಹಂಚಿಕೊಂಡಿರುವ ಸಬಾ ಪಟೌಡಿ, ಇದು ಕೇವಲ "ಕೆಟ್ಟ ಕ್ಯಾಮೆರಾ ಆ್ಯಂಗಲ್"ನಿಂದ ಉಂಟಾದ ತಪ್ಪು ಕಲ್ಪನೆ ಎಂದು ಸ್ಪಷ್ಟಪಡಿಸಿದ್ದಾರೆ.

"ಇದು ಕೆಟ್ಟ ಅ್ಯಂಗಲ್ ... ಅಥವಾ ಕೆಟ್ಟ ಹೇರ್ ಡೇ! ಎಲ್ಲರೂ ಹೇಗೆ ಮತ್ತೊಂದು ತೀವ್ರ ನಿರ್ಧಾರಕ್ಕೆ ಬರಬಹುದು!! ಅವರು ವಿಮಾನ ನಿಲ್ದಾಣದಿಂದ ನುಣುಪಾದ, ಕ್ಲಾಸಿ ಮತ್ತು ಸ್ಲಿಮ್ ಆಗಿ ಹೊರಬಂದರು. ಇಂದು ಜಿಮ್‌ನಿಂದ ಹೊರಬಂದರು! ಅಷ್ಟೇ" ಸಬಾ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಇದೇ ವೇಳೆ ಆಭರಣ ವಿನ್ಯಾಸಕಿ ತನ್ನ ಸಹೋದರಿ ಮತ್ತು ನಟಿ ಸೋಹಾ ಅಲಿ ಖಾನ್ ಅವರಿಗೆ ಮತ್ತೊಂದು ಮಗು ಹೊಂದಲು ಮನವೊಲಿಸುತ್ತಿದ್ದೇನೆ ಎಂದು ಸಬಾ ಹೇಳಿದ್ದಾರೆ.

"ನಾನು ನನ್ನ ಸಹೋದರಿಗೆ ಎರಡನೇ ಮಗುವನ್ನು ಹೊಂದಲು ಮನವೊಲಿಸುತ್ತಿದ್ದೇನೆ ... ಅದು ನಿಜವಾಗಲಿ ಎಂದು ಬಯಸುತ್ತೇನೆ! ಹೀಗೆ ಹೇಳಿದ್ದಕ್ಕೆ ಸೋಹಾ ನನ್ನನ್ನು ಕೊಲ್ಲುತ್ತಾಳೆ! ಬದುಕಿ ಮತ್ತು ಬದುಕಲು ಬಿಡಿ ಹುಡುಗರೇ. ಕೆಲವು ವಿಷಯಗಳನ್ನು ಖಾಸಗಿಯಾಗಿಯೇ ಬಿಡಿ. ಯಾವುದೇ ಊಹಾಪೋಹದ ಅಗತ್ಯವಿಲ್ಲ. ಪ್ರೀತಿ ಮತ್ತು ಗೌರವದಿಂದ" ಸಬಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com