ಪೋಕ್ಸೊ ಕೇಸ್‌ನಲ್ಲಿ ಕಿರುತೆರೆ ನಟ ಅರೆಸ್ಟ್; 16 ವರ್ಷದ ಬಾಲಕಿಗೆ ಕಿರುಕುಳ ನೀಡಿದ ನಟ ರೋಹಿತ್

16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ನೀಡಿದ ಗಂಭೀರ ಪ್ರಕರಣದಲ್ಲಿ ಕಿರುತೆರೆಯ ಖ್ಯಾತ ನಟ 29 ವರ್ಷದ ರೋಹಿತ್ ಚಾಂಡೆಲ್ ಅವರನ್ನು ಪೊಲೀಸರು ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ.
Actor Rohit Chandel
ನಟ ರೋಹಿತ್Online Desk
Updated on: 

16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ನೀಡಿದ ಗಂಭೀರ ಪ್ರಕರಣದಲ್ಲಿ ಕಿರುತೆರೆಯ ಖ್ಯಾತ ನಟ 29 ವರ್ಷದ ರೋಹಿತ್ ಚಾಂಡೆಲ್ ಅವರನ್ನು ಮುಂಬೈ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ.

ಏನಿದು ಘಟನೆ?

ಮುಂಬೈ ಪೊಲೀಸರ ಪ್ರಕಾರ, ಹಿಂದಿ ಕಿರುತೆರೆಯ ಕಾಶಿಬಾಯಿ ಬಾಜಿರಾವ್ ಬಲ್ಲಾಳ, ಪಾಂಡ್ಯ ಸ್ಟೋರ್ ಮತ್ತು ಸಾಯಿರಾಬ್ ಧಾರಾವಾಹಿಗಳಲ್ಲಿನ ಪಾತ್ರಕ್ಕಾಗಿ ಹೆಸರುವಾಸಿಯಾಗಿರುವ ನಟ ರೋಹಿತ್ ಚಾಂಡೆಲ್ ಅವರು, ಮುಂಬೈನ ಪೂರ್ವ ಉಪನಗರದ 16 ವರ್ಷದ ಬಾಲಕಿಗೆ, ಬೇರೆ ಬೇರೆ ಮೊಬೈಲ್ ನಂಬರ್ಗಳಿಂದ ಪದೇ ಪದೇ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

Actor Rohit Chandel
ಪೋಕ್ಸೋ ಕೇಸ್​ ಆರೋಪಿಯ ಭೀಭತ್ಸ ಕೃತ್ಯ: ಜಾಮೀನಿನ ಮೇಲೆ ಬಿಡುಗಡೆಯಾದ ಕೂಡಲೆ ಸಂತ್ರಸ್ತೆ ಸೇರಿ 6 ಮಂದಿಯ ಭೀಕರ ಹತ್ಯೆ!

ಮುಂದುವರೆದು, ರೋಹಿತ್ ಚಾಂಡೆಲ್ ಮತ್ತು ಅಪ್ರಾಪ್ತ ಬಾಲಕಿ ಇಬ್ಬರು ಸಾಮಾಜಿಕ ಜಾಲತಾಣದ ಮೂಲಕ ಪರಿಚಿತರಾಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಚಾಟ್ ಮಾಡಲು ಪ್ರಾರಂಭಿಸಿದ್ದು, ಮುಂದೆ ಇವರಿಬ್ಬರ ಪರಿಚಯ ಸ್ನೇಹಕ್ಕೆ ತಿರುಗಿದೆ ಎಂದು ವರದಿಯಾಗಿದೆ. ಆದಾಗ್ಯೂ, ದೂರಿನ ಪ್ರಕಾರ, ಕೆಲ ಸಮಯದಿಂದ ಬಾಲಕಿಗೆ, ಬೇರೆ ಬೇರೆ ಮೊಬೈಲ್ ನಂಬರ್ಗಳಿಂದ ಪದೇ ಪದೇ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಅದರಲ್ಲೂ, ಜುಲೈ 5 ರಂದು, ಆಕೆಯನ್ನು ಹಿಂಬಾಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇನ್ನು ಬಾಲಕಿಯ ದೂರಿನ ಆಧಾರದಲ್ಲಿ ಪೊಲೀಸರು, ಚಾಂಡೆಲ್ ವಿರುದ್ಧ ಪೋಕ್ಸೋ ಕಾಯ್ದೆಯ, ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 78 (ಹಿಂಬಾಲಿಸುವುದು) ಮತ್ತು 115(2) (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ ನಂತರ ಬಂಧಿಸಿದ್ದಾರೆ. ತದನಂತರ ವಿಶೇಷ ಪೋಕ್ಸೊ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಚಾಂಡೆಲ್ ನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

Actor Rohit Chandel
ಲೈಂಗಿಕ ದೌರ್ಜನ್ಯ ಮುಚ್ಚಿಡುವುದೂ ಅಪರಾಧ: POCSO ಕೇಸ್ ಮುಚ್ಚಿಟ್ಟರೆ ನಿಮಗೂ ಶಿಕ್ಷೆ; ಶಿಕ್ಷಣ ಸಂಸ್ಥೆಗಳಿಗೆ ಹೈಕೋರ್ಟ್‌ ಎಚ್ಚರಿಕೆ

ರೋಹಿತ್ ಚಾಂಡೆಲ್ ಹಿಂದಿ ಕಿರುತೆರೆಯ ಕಾಶಿಬಾಯಿ ಬಾಜಿರಾವ್ ಬಲ್ಲಾಳನಲ್ಲಿ ಬಾಜಿರಾವ್ ಪಾತ್ರದಲ್ಲಿ ಮತ್ತು ಪಾಂಡ್ಯ ಸ್ಟೋರ್‌ ಧಾರಾವಾಹಿಯಲ್ಲಿ ಧವಲ್ ಮಕ್ವಾನಾ ಪಾತ್ರದಲ್ಲಿ ಹೆಸರುವಾಸಿಯಾಗಿದ್ದಾರೆ. ಏತನ್ಮಧ್ಯೆ, ಮನರಂಜನಾ ಉದ್ಯಮಕ್ಕೆ ಪ್ರವೇಶಿಸುವ ಮೊದಲು, ಚಾಂಡೆಲ್ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​(ಎಂಸಿಎ) ಗಾಗಿ ವೃತ್ತಿಪರ ಕ್ರಿಕೆಟ್ ಆಡುತ್ತಿದ್ದರು ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com