ಆರೋಗ್ಯದ ಕುರಿತಾದ ವದಂತಿಗಳ ನಡುವೆ ನಿಗೂಢ ಪೋಸ್ಟ್ ಹಂಚಿಕೊಂಡ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್!

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ನಂತರ ನಟನ ಆರೋಗ್ಯದ ಬಗ್ಗೆ ಅನೇಕ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಆ ಕಾರ್ಯಕ್ರಮದ ವಿಡಿಯೋಗಳು ಮತ್ತು ಫೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು
Salman Khan'
ಸಲ್ಮಾನ್ ಖಾನ್
Updated on

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಿಗೂಢ ಪೋಸ್ಟ್‌ ಇದೀಗ ಮತ್ತೊಮ್ಮೆ ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ.

ತಡರಾತ್ರಿ ಮಾಡಿದ ಪೋಸ್ಟ್‌ನಲ್ಲಿ, ನಟ ತಮ್ಮ ಹೊಸ ಫೊಟೋಗಳನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ 'ಆಪ್ ಲೋಗೋನ್ ಕಿ ತಬಿಯತ್ ಕೈಸಿ ಹೈ' (ಎಲ್ಲರ ಆರೋಗ್ಯ ಹೇಗಿದೆ?) ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ತಮ್ಮ ಆರೋಗ್ಯದ ಕುರಿತು ಇತ್ತೀಚೆಗೆ ಆನ್‌ಲೈನ್‌ನಲ್ಲಿ ನಡೆಯುತ್ತಿರುವ ಚರ್ಚೆಗಳಿಗೆ ತಮಾಷೆಯ ಧಾಟಿಯಲ್ಲಿ ಪ್ರತಿಕ್ರಿಯಿಸುವ ರೀತಿಯಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ.

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ನಂತರ ಅವರ ಆರೋಗ್ಯದ ಬಗ್ಗೆ ಅನೇಕ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಆ ಕಾರ್ಯಕ್ರಮದ ವಿಡಿಯೋಗಳು ಮತ್ತು ಫೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗಿದ್ದವು; ಸಲ್ಮಾನ್ ಅವರು ಗಮನಾರ್ಹವಾಗಿ ಸಣ್ಣದಾಗಿ, ಸುಸ್ತಾದಂತೆ ಮತ್ತು ಬಳಲಿದಂತೆ ಕಾಣುತ್ತಿದ್ದಾರೆ ಎಂದು ಅನೇಕರು ಪ್ರತಿಕ್ರಿಯಿಸಿದ್ದರು.

ಈ ದೃಶ್ಯಗಳು ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾದವು ಮತ್ತು ಅಭಿಮಾನಿಗಳು ಅವರಿಗೆ ಉತ್ತಮ ಆರೋಗ್ಯವನ್ನು ಹಾರೈಸಿ ಸಂದೇಶಗಳನ್ನು ಹಂಚಿಕೊಳ್ಳುವಂತೆ ಪ್ರೇರೇಪಿಸಿದವು. ಈ ಚಿತ್ರಗಳ ಬಗ್ಗೆ ಹೇಳುವುದಾದರೆ, ಸಲ್ಮಾನ್ ಕ್ಯಾಶುಯಲ್ ಉಡುಪು ಮತ್ತು ಟೋಪಿ ಧರಿಸಿ ನಿರಾಳವಾದ ಭಂಗಿಯಲ್ಲಿ ಕಾಣಿಸಿಕೊಂಡಿದ್ದರು.

ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ತರಹೇವಾರಿ ಕಾಮೆಂಟ್ ಮಾಡಿದ್ದರಿಂದ ನಟ ಬೇಗನೆ ಪ್ರತಿಕ್ರಿಯಿಸಿದ್ದಾರೆ. ನಟ ಮಹಿ ವಿಜ್ ಕೂಡ ಆ ಪೋಸ್ಟ್‌ಗೆ ಪ್ರತಿಕ್ರಿಯಿಸಿ, ನಗುವ ಎಮೋಜಿಗಳ ಜೊತೆಗೆ 'ತುಂಬಾ ಚೆನ್ನಾಗಿದೆ' ಎಂದು ಬರೆದಿದ್ದಾರೆ.

ಸಲ್ಮಾನ್ ಖಾನ್ ಅವರು ಇನ್‌ಸ್ಟಾಗ್ರಾಂನಲ್ಲಿ ಆಗಾಗ್ಗೆ ಅಭಿಮಾನಿಗಳೊಂದಿಗೆ ಹೊಸ ವಿಷಯಗಳನ್ನು ಹಂಚಿಕೊಳ್ಳುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಈ ತಿಂಗಳ ಆರಂಭದಲ್ಲಿ, ಅವರು ತಮ್ಮ ಮುಂಬರುವ ಚಿತ್ರ 'ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್' (Maatrubhumi: May War Rest In Peace) ನಲ್ಲಿನ ತಮ್ಮ ಹೊಸ ಲುಕ್‌ವೊಂದನ್ನು ಹಂಚಿಕೊಂಡಿದ್ದರು.

ಪ್ರಶಾಂತವಾದ ಪರಿಸರದ ನಡುವೆ ನಿಂತು, ತಮ್ಮ ಸದೃಢ ಮೈಕಟ್ಟನ್ನು ಪ್ರದರ್ಶಿಸುವಂತಹ ಚಿತ್ರವೊಂದನ್ನು ಸಲ್ಮಾನ್ ಹಂಚಿಕೊಂಡಿದ್ದು, ಕೇವಲ 'ಮಾತೃಭೂಮಿ' ಎಂಬ ಶೀರ್ಷಿಕೆ ನೀಡಿದ್ದರು.

ಸಲ್ಮಾನ್ ಖಾನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಲ್ಮಾ ಖಾನ್ ನಿರ್ಮಿಸಿರುವ 'ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್' ಚಿತ್ರವನ್ನು ಅಪೂರ್ವ ಲಖಿಯಾ ನಿರ್ದೇಶಿಸಿದ್ದು, ಇದರಲ್ಲಿ ಚಿತ್ರಾಂಗದಾ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮೂಲತಃ ಈ ವರ್ಷದ ಏಪ್ರಿಲ್‌ನಲ್ಲಿ ಬಿಡುಗಡೆಯಾಗಬೇಕಿದ್ದ ಈ ಚಿತ್ರವನ್ನು ನಂತರ ಮುಂದೂಡಲಾಯಿತು. ಚಿತ್ರತಂಡವು ಪರಿಷ್ಕೃತ ಬಿಡುಗಡೆಯ ದಿನಾಂಕವನ್ನು ಇನ್ನೂ ಘೋಷಿಸಬೇಕಿದೆ.

Salman Khan'
ಶೀರ್ಷಿಕೆ ಬದಲಿಸಿದರೂ ಸಲ್ಮಾನ್ ಖಾನ್ ನಟನೆಯ 'ಮಾತೃಭೂಮಿ' ಚಿತ್ರ ಬಿಡುಗಡೆಗೆ ಸೆನ್ಸಾರ್ ಮಂಡಳಿ ತಡೆ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com