

ಮುಂಬೈ: ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಲ್ಮಾನ್ ಖಾನ್, ಆಲಿಯಾ ಭಟ್ ಮತ್ತು ಕರೀನಾ ಕಪೂರ್ ಖಾನ್ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರು ಬೆಂಬಲ ವ್ಯಕ್ತಪಡಿಸಿದ ನಂತರ, ಶಾರುಖ್ ಖಾನ್ ಕೂಡಾ ಪ್ರತಿಕ್ರಿಯೆ ನೀಡಬಹುದೆಂದು ಅನೇಕ ಅಭಿಮಾನಿಗಳು ಕಾಯುತ್ತಿದ್ದಾರೆ.
ಈ ನಿರೀಕ್ಷೆಯ ನಡುವೆಯೇ ಸೂಪರ್‌ಸ್ಟಾರ್ ಪೋಸ್ಟ್ ಎಂದು ತೋರುವ ಸ್ಕ್ರೀನ್‌ಶಾಟ್ ವೊಂದು (Screenshot) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಶಾರೂಕ್ ಖಾನ್ ಕಡೆಗೂ ಮೌನ ಮುರಿದಿದ್ದಾರೆ ಎಂದು ಅನೇಕ ಅಂದುಕೊಂಡಿದ್ದರು.
ಈ ಸ್ಕ್ರೀನ್ ಶಾಟ್ ನಲ್ಲಿ “To all the dear students, Tum logon ne dikhaya hai ke asli taakat kahan hai... books mein, pen mein, aur awaaz mein. Tumhara protest sirf ek exam ke against nahi, balki ek behtar, transparent, aur fair system ke liye hai... Main tum sabke saath hoon, emotionally and morally...!!” ಎಂದು ಬರೆಯಲಾಗಿದೆ.
ಆದರೆ ಈ ಸ್ಕ್ರೀನ್ ಶಾಟ್ ಹಿಂದಿನ ಅಸಲಿ ಸತ್ಯ ಬಹಿರಂಗವಾಗಿದ್ದು, ಶಾರುಖ್ ಖಾನ್ ಅವರ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಅಂತಹ ಯಾವುದೇ ಪೋಸ್ಟ್ ಕಂಡುಬಂದಿಲ್ಲ. ಅವರ ಇನ್‌ಸ್ಟಾಗ್ರಾಮ್ ಅಥವಾ ಎಕ್ಸ್ ಪ್ರೊಫೈಲ್‌ನಲ್ಲಿ ಈ ಪೋಸ್ಟ್ ಕಾಣಿಸಿಕೊಂಡಿಲ್ಲ, ಇದು ನಕಲಿ ಎಂದು ದೃಢಪಟ್ಟಿದೆ.
ಶಾರುಖ್ ಖಾನ್ ಎಂಬ ಹೆಸರಿನ ಅಭಿಮಾನಿಯೊಬ್ಬರ ಅಕೌಂಟ್ ನಲ್ಲಿ ಪ್ರತಿಭಟನೆಗೆ ಸಂಬಂಧಿಸಿದ ವಿಷಯವನ್ನು ಹಂಚಿಕೊಂಡಿದ್ದು, ಇದು ಗೊಂದಲವನ್ನು ಹೆಚ್ಚಿಸಿದ್ದಂತೆ ತೋರುತ್ತದೆ. ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಕಿಂಗ್ ಖಾನ್ ಇಲ್ಲಿಯವರೆಗೂ ಸಾರ್ವಜನಿಕವಾಗಿ ಎಲ್ಲಿಯೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.