Eetha First Look OUT: ಹಿಂದೆಂದೂ ಕಂಡಿರದ ಹೊಸ ಅವತಾರದಲ್ಲಿ ಶ್ರದ್ಧಾ ಕಪೂರ್! ಫ್ಯಾನ್ಸ್ ಫಿದಾ, Video

ಲಕ್ಷ್ಮಣ್ ಉತೇಕರ್ ನಿರ್ದೇಶನದ ಈ ಚಿತ್ರವು ಈಗಾಗಲೇ ಭಾರಿ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಮಹಾರಾಷ್ಟ್ರದ ಪ್ರಸಿದ್ಧ ತಮಾಷಾ ಮತ್ತು ಲಾವಣಿ ಕಲಾವಿದೆ ವಿಠಾಬಾಯಿ ಭಾವು ಮಾಂಗ್ ನಾರಾಯಣಗಾಂವ್ಕರ್ ಅವರ ಜೀವನಾಧಾರಿತ ಚಿತ್ರ ಇದಾಗಿದೆ
Shraddha Kapoor
ಶ್ರದ್ಧಾ ಕಪೂರ್
Updated on

ಶ್ರದ್ಧಾ ಕಪೂರ್ ಅವರ ಬಹುನಿರೀಕ್ಷಿತ ‘ಈಥಾ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಇದರಲ್ಲಿ ಶ್ರದ್ಧಾ ಕಪೂರ್ ಹಿಂದೆಂದೂ ಕಂಡಿರದ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಆಕೆಯ ಅತ್ಯುತ್ತಮ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಲಕ್ಷ್ಮಣ್ ಉತೇಕರ್ ನಿರ್ದೇಶನದ ಈ ಚಿತ್ರವು ಈಗಾಗಲೇ ಭಾರಿ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಮಹಾರಾಷ್ಟ್ರದ ಪ್ರಸಿದ್ಧ ತಮಾಷಾ ಮತ್ತು ಲಾವಣಿ ಕಲಾವಿದೆ ವಿಠಾಬಾಯಿ ಭಾವು ಮಾಂಗ್ ನಾರಾಯಣಗಾಂವ್ಕರ್ ಅವರ ಜೀವನಾಧಾರಿತ ಚಿತ್ರ ಇದಾಗಿದೆ. 1940 ರಿಂದ 1990 ರ ದಶಕದವರೆಗಿನ ಅವರ ಬದುಕಿನ ಪ್ರಯಾಣ ಕುರಿತ ಕಥೆ ಇದಾಗಿದೆ.

ಈ ಟೀಸರ್‌ನಲ್ಲಿ ಶ್ರದ್ಧಾ ಕಪೂರ್ ಯಾರೂ ಊಹಿಸದ ರೀತಿಯಲ್ಲಿ ಅತ್ಯಂತ ವಿಭಿನ್ನವಾಗಿ ಪರದೆಯ ಮೇಲೆ ಪ್ರತ್ಯಕ್ಷವಾಗುತ್ತಾರೆ.ತಮ್ಮ ವೃತ್ತಿಜೀವನದಲ್ಲಿ ಹಲವು ನೆನಪಿನಲ್ಲುಳಿಯುವ ಪಾತ್ರಗಳನ್ನು ಮಾಡಿರುವ ಶ್ರದ್ಧಾ, ಈ ಚಿತ್ರಕ್ಕಾಗಿ ಸಂಪೂರ್ಣವಾಗಿ ಮರಾಠಿ ಶೈಲಿಯ ನೃತ್ಯ ಮತ್ತು ಹಾವಭಾವಗಳನ್ನು ಕರಗತ ಮಾಡಿಕೊಂಡಿರುವುದು ಟೀಸರ್‌ನಲ್ಲಿ ಎದ್ದು ಕಾಣುತ್ತಿದೆ.

ಇದರಲ್ಲಿ ಗರ್ಭಿಣಿಯಾಗಿದ್ದರೂ ವಿಠಾಬಾಯಿ ಪ್ರದರ್ಶನ ನೀಡುವುದನ್ನು ಮುಂದುವರಿಸುವ, ಅಂತಿಮವಾಗಿ ವೇದಿಕೆಯ ಹಿಂದೆ ಜನ್ಮ ನೀಡುವ ಮತ್ತು ಸ್ವಲ್ಪ ಸಮಯದ ನಂತರ ತನ್ನ ಅಭಿನಯವನ್ನು ಪೂರ್ಣಗೊಳಿಸಲು ವೇದಿಕೆಗೆ ಮರಳುವ ಕ್ಷಣಗಳು ಸೇರಿದ್ದು, ಪ್ರೇಕ್ಷಕರ ಮನ ಸೆಳೆದಿದೆ.

Shraddha Kapoor
Dawood Ibrahim drug parties: ಬಾಲಿವುಡ್ ನಟಿಯರಾದ ಶ್ರದ್ಧಾ ಕಪೂರ್, ನೋರಾ ಫತೇಹಿ ಸೇರಿ ಹಲವರ ಹೆಸರು ಬಹಿರಂಗ

ಚಿತ್ರ ತಯಾರಕರು ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಟೀಸರ್ ಬಿಡುಗಡೆ ಮಾಡದಿದ್ದರೂ, ವಿಡಿಯೋಗಳು ಈಗಾಗಲೇ ಆನ್‌ಲೈನ್‌ನಲ್ಲಿ ವೈರಲ್ ಆಗಿವೆ. ಶ್ರದ್ಧಾ ಕಪೂರ್ ಅವರ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com