Karisma Kapoor Birthday: ಮದುವೆಗೂ ಮುನ್ನ ಅಭಿಷೇಕ್ ಬಚ್ಚನ್ ಜೊತೆ ಕರಿಷ್ಮಾ ನಿಶ್ಚಿತಾರ್ಥ ಮುರಿದುಬೀಳಲು ಕಾರಣವೇನು?

ಕರಿಷ್ಮಾ ಜೀವನದ ಹಲವು ಅಧ್ಯಾಯಗಳಲ್ಲಿ, ಅಭಿಷೇಕ್ ಬಚ್ಚನ್ ಜೊತೆಗಿನ ಪ್ರೇಮ ಸಂಬಂಧ ಬಾಲಿವುಡ್‌ನ ಹೆಚ್ಚು ಚರ್ಚಿಸಲ್ಪಟ್ಟ ಲವ್ ಸ್ಟೋರಿಗಳಲ್ಲಿ ಒಂದಾಗಿದೆ.
Karisma Kapoor with  Abhishek Bachchan
ಅಮಿತಾಬ್ ಬಚ್ಚನ್ ಕುಟುಂಬದೊಂದಿಗೆ ಕರಿಷ್ಮಾ ಕಪೂರ್
Updated on

ಬಾಲಿವುಡ್ ಖ್ಯಾತ ನಟಿ ಕರಿಷ್ಮಾ ಕಪೂರ್ ಇಂದು 52ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ನೆಚ್ಚಿನ ನಟಿಯ ಜೀವನ ಹಾಗೂ ಪ್ರಯಾಣವನ್ನು ಅಭಿಮಾನಿಗಳು ನೆನಪಿಸಿಕೊಳ್ಳುತ್ತಿದ್ದಾರೆ. ಕಪೂರ್ ಕುಟುಂಬದಿಂದ ನಟನೆಯಲ್ಲಿ ಯಶಸ್ವಿ ವೃತ್ತಿಜೀವನ ರೂಪಿಸಿಕೊಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕರಿಷ್ಮಾ,ಬ್ಲಾಕ್ ಬಸ್ಟರ್ ಹಿಟ್ ಮತ್ತು ಮರೆಯಲಾಗದ ಅಭಿನಯದೊಂದಿಗೆ 1990ರ ದಶಕವನ್ನು ಆಳಿದರು.

ವೃತ್ತಿ ರಂಗದಲ್ಲಿನ ಸಾಧನೆಯಿಂದ ಮಿಂಚಿದ್ದಂತೆ ಅವರ ವೈಯಕ್ತಿಕ ಜೀವನವೂ ಅಷ್ಟೇ ಗಮನ ಸೆಳೆದಿತ್ತು. ಕರಿಷ್ಮಾ ಜೀವನದ ಹಲವು ಅಧ್ಯಾಯಗಳಲ್ಲಿ, ಅಭಿಷೇಕ್ ಬಚ್ಚನ್ ಜೊತೆಗಿನ ಪ್ರೇಮ ಸಂಬಂಧ ಬಾಲಿವುಡ್‌ನ ಹೆಚ್ಚು ಚರ್ಚಿಸಲ್ಪಟ್ಟ ಲವ್ ಸ್ಟೋರಿಗಳಲ್ಲಿ ಒಂದಾಗಿದೆ. ಇಬ್ಬರೂ ಅಪಾರವಾಗಿ ಪ್ರೀತಿಸುತ್ತಿದ್ದರು ಮತ್ತು ನಿಶ್ಚಿತಾರ್ಥ ಕೂಡಾ ಆಗಿತ್ತು. ಮದುವೆ ಕೂಡಾ ಆಗುತ್ತದೆ ಎನ್ನಲಾಗಿತ್ತು. ಆದರೆ ವಿಧಿ ನಿಯಮ ಬೇರೆಯಾಗಿತ್ತು.

ಕರಿಷ್ಮಾ ಕಪೂರ್ ಮತ್ತು ಅಭಿಷೇಕ್ ಬಚ್ಚನ್ ಮೊದಲ ಬಾರಿಗೆ 1997 ರಲ್ಲಿ ಕಪೂರ್ ಕುಟುಂಬಕ್ಕೆ ಸೇರಿದ ಶ್ವೇತಾ ಬಚ್ಚನ್ ಮತ್ತು ನಿಖಿಲ್ ನಂದಾ ಅವರ ವಿವಾಹ ಸಂಭ್ರಮಾಚರಣೆಯಲ್ಲಿ ಭೇಟಿಯಾಗಿದ್ದರು. ಕುಟುಂಬಗಳ ಕೂಟದೊಂದಿಗೆ ಆರಂಭವಾದ ಸ್ನೇಹ, ಕ್ರಮೇಣ ಪ್ರಣಯವಾಗಿ ಅರಳಿತು. ಈ ಜೋಡಿ ಸುಮಾರು ಐದು ವರ್ಷಗಳ ಕಾಲ ಡೇಟಿಂಗ್ ನಲ್ಲಿದ್ದರು ಎನ್ನಲಾಗಿದೆ.

ಆ ಸಮಯದಲ್ಲಿ ಕರಿಷ್ಮಾ ಬಾಲಿವುಡ್‌ನ ಅತಿದೊಡ್ಡ ಸ್ಟಾರ್ ಗಳಲ್ಲಿ ಒಬ್ಬರಾಗಿದ್ದರು, ಆದರೆ ಅಭಿಷೇಕ್ ಇನ್ನೂ ಹಿಂದಿ ಸಿನಿಮಾಕ್ಕೆ ಪಾದಾರ್ಪಣೆ ಮಾಡಿರಲಿಲ್ಲ. ಅವರ ವೃತ್ತಿಜೀವನದ ವಿಭಿನ್ನ ಹಂತಗಳ ಹೊರತಾಗಿಯೂ, ಎರಡೂ ಕುಟುಂಬಗಳು ಈ ಸಂಬಂಧವನ್ನು ಬೆಂಬಲಿಸುತ್ತಿದ್ದವು ಎನ್ನಲಾಗಿದೆ.

2002 ರಲ್ಲಿ ಬಚ್ಚನ್ ಮತ್ತು ಕಪೂರ್ ಕುಟುಂಬಗಳು ಅಭಿಷೇಕ್ ಮತ್ತು ಕರಿಷ್ಮಾ ಅವರ ನಿಶ್ಚಿತಾರ್ಥವನ್ನು ಘೋಷಿಸುವ ಮೂಲಕ ಅಭಿಮಾನಿಗಳನ್ನು ಸಂತೋಷಪಡಿಸಿದವು. ಅಮಿತಾಬ್ ಬಚ್ಚನ್ ಅವರ 60 ನೇ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ, ಜಯಾ ಬಚ್ಚನ್ ಕರಿಷ್ಮಾ ಅವರನ್ನು ತಮ್ಮ ಭಾವಿ ಸೊಸೆ ಎಂದು ಬಹಿರಂಗವಾಗಿ ಹೇಳಿದ್ದರು. ಇಂದು, ಬಚ್ಚನ್ ಮತ್ತು ನಂದಾ ಕುಟುಂಬಗಳ ಜೊತೆಗೆ, ಮತ್ತೊಂದು ಕುಟುಂಬ ನಮ್ಮೊಂದಿಗೆ ಸೇರುತ್ತಿದೆ - ಕಪೂರ್ ಕುಟುಂಬ. ರಣಧೀರ್ ಕಪೂರ್, ಬಬಿತಾ ಕಪೂರ್ ಮತ್ತು ನನ್ನ ಭಾವಿ ಸೊಸೆ ಕರಿಷ್ಮಾ ಕಪೂರ್. ಅಭಿಷೇಕ್ ತಮ್ಮ ತಂದೆಯ 60 ನೇ ಹುಟ್ಟುಹಬ್ಬದಂದು ನಮಗೆ ಈ ಸುಂದರವಾದ ಉಡುಗೊರೆಯನ್ನು ನೀಡಿದ್ದಾರೆ ಎಂದು ಹೇಳಿದ್ದರು.

Karisma Kapoor with  Abhishek Bachchan
Property row: ಸಂಜಯ್ ಕಪೂರ್ ಆಸ್ತಿ ವಿವಾದ; ಬಾಲಿವುಡ್ ನಟಿ ಕರಿಷ್ಮಾ ಮಕ್ಕಳಿಗೆ ಬಿಗ್ ರಿಲೀಫ್!

ಬಾಲಿವುಡ್‌ನ ಅತ್ಯಂತ ಶಕ್ತಿಶಾಲಿ ಕುಟುಂಬಗಳು ಒಂದಾಗಲಿವೆ ಎಂಬ ಊಹಾಪೋಹ ಹೆಚ್ಚಾಗಿತ್ತು. ಆದಾಗ್ಯೂ, ನಿಶ್ಚಿತಾರ್ಥವಾದ ಕೇವಲ ನಾಲ್ಕು ತಿಂಗಳ ನಂತರ, ಸಂಬಂಧವು ಅನಿರೀಕ್ಷಿತವಾಗಿ ಕೊನೆಗೊಂಡಿತು. 2000 ರಲ್ಲಿ ಕರೀನಾ ಕಪೂರ್ ಜೊತೆ ಅಭಿಷೇಕ್ ರೆಫ್ಯೂಜಿ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದಾಗ, ಸೆಟ್‌ನಲ್ಲಿ ಅಭಿಷೇಕ್ ಅವರನ್ನು ಜಿಜು" ಎಂದು ಕರೀನಾ ಕರೆಯುತ್ತಿದ್ದರು ಎಂದು ವರದಿಯಾಗಿತ್ತು. ಚಿತ್ರದಲ್ಲಿ ಪ್ರಣಯ ದೃಶ್ಯಗಳನ್ನು ಹಂಚಿಕೊಂಡಿದ್ದರೂ, ಕರೀನಾ ಅಭಿಷೇಕ್ ಅವರನ್ನು ಸಹೋದರನಂತೆ ನೋಡುತ್ತಿದ್ದರು ಎಂದು ವರದಿಗಳು ಹೇಳಿದ್ದವು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com