

ಮುಂಬೈ: ಬಾಲಿವುಡ್ ನಟ ಶಾಹಿದ್ ಕಪೂರ್, ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಕಾಕ್‌ಟೇಲ್ 2 ಸಿನಿಮಾ ಜೂನ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
2012 ರಲ್ಲಿ ಬಿಡುಗಡೆ ಆಗಿ ಬ್ಲಾಕ್‌ಬಸ್ಟರ್ ಆಗಿದ್ದ ‘ಕಾಕ್‌ಟೇಲ್’ ಸಿನಿಮಾದ ಸೀಕ್ವೆಲ್ ಆಗಿರುವ ‘ಕಾಕ್‌ಟೇಲ್ 2 ’ಚಿತ್ರದ ಬಿಡುಗಡೆ ದಿನಾಂಕ ಹಾಗೂ ಟೀಸರ್ ರಿಲೀಸ್ ದಿನಾಂಕಗಳನ್ನು ಇಂದು ಘೋಷಿಸಲಾಗಿದೆ.
ಹೋಮಿ ಅದಜಾನಿಯಾ ನಿರ್ದೇಶನದ ಹಾಗೂ ದಿನೇಶ್ ವಿಜನ್ ಅವರ ‘ಮ್ಯಾಡಾಕ್ ಫಿಲ್ಮ್ಸ್’ ನಿರ್ಮಾಣ ಮಾಡಿರುವ ‘ಕಾಕ್ಟೇಲ್ 2’ ಚಿತ್ರದ ಟೀಸರ್ ಮುಂದಿನ ವಾರ ಬಿಡುಗಡೆಯಾಗಲಿದ್ದು, ಸಿನಿಮಾ ಜೂನ್ 19ರಂದು ವಿಶ್ವದಾದ್ಯಂತ ತೆರೆಕಾಣಲಿದೆ.
2012ರಲ್ಲಿ ತೆರೆಕಂಡ ಅದಜಾನಿಯಾ ಅವರ ಕಾಕ್‌ಟೇಲ್ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ, ಸೈಫ್ ಅಲಿ ಖಾನ್ ಮತ್ತು ಡಿಯಾನಾ ಪೆಂಟಿ ಅಭಿನಯಿಸಿದ್ದರು.
ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಮಾಡಿತ್ತು. 120 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು.
Advertisement