ಮಹಿಳೆಯರ ಬಗ್ಗೆ ಅಶ್ಲೀಲ ಸಾಹಿತ್ಯ: ಗನ್ ಪಾಯಿಂಟ್ ನಲ್ಲಿ ಕೊಲ್ತೀವಿ; ಸಿಂಗರ್ ಬಾದ್‌ಶಾಗೆ ಬಿಷ್ಣೋಯ್ ಗ್ಯಾಂಗ್ ಬೆದರಿಕೆ!

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈಗ ಗಾಯಕ-ರ‍್ಯಾಪರ್ ಬಾದ್‌ಶಾ ಅವರ ಹರಿಯಾಣ ಭಾಷೆಯ ಹಾಡು 'ಟಟೀರಿ' ಸುತ್ತಲಿನ ವಿವಾದಕ್ಕೆ ಪ್ರವೇಶಿಸಿದೆ.
Lawrence Bishnoi-Badshah
ಲಾರೆನ್ಸ್ ಬಿಷ್ಣೋಯ್-ಬಾದ್‌ಶಾ
Updated on

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈಗ ಗಾಯಕ-ರ‍್ಯಾಪರ್ ಬಾದ್‌ಶಾ ಅವರ ಹರಿಯಾಣ ಭಾಷೆಯ ಹಾಡು 'ಟಟೀರಿ' ಸುತ್ತಲಿನ ವಿವಾದಕ್ಕೆ ಪ್ರವೇಶಿಸಿದೆ. ಬಾದ್‌ಶಾ ಹಣೆಗೆ ನೇರವಾಗಿ 'ಗುಂಡು ಹಾರಿಸುವುದಾಗಿ' ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬೆದರಿಕೆ ಹಾಕಿದೆ. ಬಾದ್‌ಶಾ ತನ್ನ ತಮ್ಮ ಹಾಡಿನ ಹರಿಯಾಣದ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಗ್ಯಾಂಗ್ ಹೇಳಿಕೊಂಡಿದೆ.

ಇನ್ನು ಪಾಣಿಪತ್‌ನಲ್ಲಿ ನಡೆದ ಗುಂಡಿನ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬಾದ್‌ಶಾಗೆ ಬೆದರಿಕೆ ಪತ್ರವನ್ನು ನೀಡಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿರುವ ಗ್ಯಾಂಗ್‌ಸ್ಟರ್‌ಗಳೆಂದು ಹೇಳಲಾದ ರಣದೀಪ್ ಮಲಿಕ್ ಮತ್ತು ಅನಿಲ್ ಪಂಡಿತ್ ಮಾರ್ಚ್ 14ರ ಶನಿವಾರ ಪಾಣಿಪತ್‌ನ ಅಸ್ಸಂಧ್ ರಸ್ತೆಯಲ್ಲಿರುವ ವೆಸ್ಟರ್ನ್ ಯೂನಿಯನ್ ಕಚೇರಿಯಲ್ಲಿ ನಡೆದ ವಿವೇಚನಾರಹಿತ ಗುಂಡಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಗುಂಡಿನ ದಾಳಿ ಹವಾಲಾ ನಿರ್ವಾಹಕರ ವಿರುದ್ಧದ ಟ್ರೈಲರ್ ಎಂದು ಗ್ಯಾಂಗ್ ಹೇಳಿದೆ.

ಈ ಪೋಸ್ಟ್‌ನ ಕೊನೆಯಲ್ಲಿ ಗಾಯಕ ಬಾದ್‌ಶಾ, ನೀವು ಹರಿಯಾಣದ ಸಂಸ್ಕೃತಿಯನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದೀಯಾ, 2024ರಲ್ಲಿ ನಾವು ನಿಮ್ಮ ಕ್ಲಬ್‌ ಮೇಲೆ ಗುಂಡು ಹಾರಿಸುವ ಮೂಲಕ ಟ್ರೇಲರ್ ಅನ್ನು ನಿಮಗೆ ತೋರಿಸಿದ್ದೇವೆ. ಮುಂದಿನ ಬಾರಿ ನಾವು ನಿಮ್ಮ ಹಣೆಗೆ ನೇರವಾಗಿ ಗುಂಡು ಹಾರಿಸುತ್ತೇವೆ ಎಂದು ಬರೆಯಲಾಗಿದೆ. ಬಾದ್‌ಶಾ ಅವರ ಟಟೀರಿ ಹಾಡು ಮಾರ್ಚ್ 1ರಂದು ಬಿಡುಗಡೆಯಾಯಿತು. ಇನ್ನು ಗಾಯಕ ಕಾನೂನು ತೊಂದರೆಯಲ್ಲಿ ಸಿಲುಕಿದ್ದಾರೆ. ವಿವಾದಕ್ಕಾಗಿ ಬಾದ್‌ಶಾ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರು. ಯಾರನ್ನೂ ನಿಂದಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದರೂ, ವಿಷಯ ಇನ್ನೂ ಬಗೆಹರಿಯಲಿಲ್ಲ.

Lawrence Bishnoi-Badshah
'Tateeree' ಹಾಡಿನಲ್ಲಿ ಅಶ್ಲೀಲ ಸಾಹಿತ್ಯ: ಖ್ಯಾತ ರಾಪರ್ ಬಂಧನಕ್ಕೆ ಪೊಲೀಸರಿಂದ ಹುಡುಕಾಟ!

ಹಾಡಿನ ಸಾಹಿತ್ಯ ಮತ್ತು ದೃಶ್ಯಗಳು ಆಕ್ಷೇಪಾರ್ಹವಾಗಿವೆ ಎಂದು ಆರೋಪಿಸಿ ಹರಿಯಾಣ ಮಹಿಳಾ ಆಯೋಗವು ಆರಂಭದಲ್ಲಿ ಈ ವಿಷಯದಲ್ಲಿ ದೂರು ದಾಖಲಿಸಿತು. ಆದಾಗ್ಯೂ, ವಿವಾದದ ನಂತರ, ಹಾಡನ್ನು ವಿವಿಧ ವೇದಿಕೆಗಳಿಂದ ತೆಗೆದುಹಾಕಲಾಯಿತು. ಗಾಯಕಿ ಸಂತಿ ಶರ್ಮಾ ಸೇರಿದಂತೆ ಅನೇಕ ಕಲಾವಿದರು ಸಹ ಬಾದ್‌ಶಾ ಅವರನ್ನು ಬೆಂಬಲಿಸಿದರು. ಅವರು ಇತ್ತೀಚೆಗೆ ರ‍್ಯಾಪರ್‌ನ ಸಾಹಿತ್ಯವು ಯಾವುದೇ ಮಹಿಳೆ ಅಥವಾ ವ್ಯಕ್ತಿಗಾಗಿ ಅಲ್ಲ, ತನ್ನದೇ ಆದ ಸ್ಪರ್ಧೆಗಾಗಿ ಎಂದು ಪೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com