

ನಟಿ ಪ್ರಿಯಾಂಕಾ ಚೋಪ್ರಾ ಮಗಳ ಮುದ್ದಾದ ಕ್ಷಣಗಳ ಫೋಟೋ ಮತ್ತು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಮಾಲ್ತಿ ಮೇರಿ ತನ್ನ ಧ್ವನಿಯಲ್ಲಿ ಗಾಯತ್ರಿ ಮಂತ್ರ ಪಠಿಸಿರುವ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳ ಮನಗೆದ್ದಿದೆ.
ಗುರುವಾರ (ನವೆಂಬರ್ 19) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಿಯಾಂಕಾ ಚೋಪ್ರಾ ಅವರು ರಜಾದಿನಗಳ ಹಾಗೂ ಶೂಟಿಂಗ್ ಸೆಟ್‌ನ ಸುಂದರ ಕ್ಷಣಗಳ ಫೋಟೋ ಹಾಗೂ ವಿಡಿಯೋ ಹಂಚಿಕೊಂಡಿದ್ದಾರೆ.
ಮನೆಯಲ್ಲಿರುವ ಪುಟ್ಟ ದೇವರ ಕೋಣೆಯ ಮುಂದೆ ಪ್ರಿಯಾಂಕಾ ಅವರು ತಮ್ಮ ಮಗಳನ್ನು ಮಡಿಲಲ್ಲಿ ಕೂರಿಸಿಕೊಂಡಿದ್ದು, ಮಾಲ್ತಿ ತನ್ನ ಮುದ್ದಾದ ಬ್ರಿಟಿಷ್ ಶೈಲಿಯ ಧ್ವನಿಯಲ್ಲಿ ಗಾಯತ್ರಿ ಮಂತ್ರವನ್ನು ಪಠಿಸಿದ್ದಾಳೆ.
ಮಗಳ ಸುಮಧುರ ಧ್ವನಿಯನ್ನು ಕೇಳಿ ಸ್ವತಃ ಪ್ರಿಯಾಂಕಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡಿರುವ ಪ್ರಿಯಾಂಕಾ, ‘ಇತ್ತೀಚಿನ ದಿನಗಳು… ಕೆಲಸದ ಒತ್ತಡದ ನಡುವೆಯೂ ಒಂದು ಸುಂದರ ತಾಣದಲ್ಲಿ’ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ.