24 ಗಂಟೆ ಬಿಗಿ ಭದ್ರತೆ ಇದ್ದರೂ ಸಲ್ಮಾನ್ ಖಾನ್‌ಗೆ ಕಾಡುತ್ತಿದೆ ಈ ಭಯ! Y+ ಭದ್ರತೆ ನಡುವೆಯೂ ಭಾಯಿಜಾನ್ ಆತಂಕವೇನು?

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ನಿರಂತರ ಜೀವ ಬೆದರಿಕೆ ಎದುರಿಸುತ್ತಿರುವ ಬಾಲಿವುಡ್ ನಟ ಸಲ್ಮಾನ್ ಖಾನ್, ತಮಗೆ 24 ಗಂಟೆಗಳ ಬಿಗಿ ಭದ್ರತೆ ಇದ್ದರೂ ಸಹ "ಏನಾದರೂ ಕೆಟ್ಟದು ಸಂಭವಿಸಬಹುದು" ಎಂಬ ನಿರಂತರ ಭಯದಿಂದಲ್ಲೇ ಬದುಕುತ್ತಿರುವುದಾಗಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Salman Khan
ಸಲ್ಮಾನ್ ಖಾನ್IANS
Updated on: 

ಹೈದರಾಬಾದ್‌(ತೆಲಂಗಾಣ): ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ನಿರಂತರ ಕೊಲೆ ಬೆದರಿಕೆಗಳನ್ನು ಎದುರಿಸುತ್ತಿರುವ ಬಾಲಿವುಡ್ ನಟ ಸಲ್ಮಾನ್ ಖಾನ್, "ಎಷ್ಟೇ ಬಿಗಿ ಭದ್ರತೆಯ ನಡುವೆಯೂ ಏನಾದರೂ ತಪ್ಪು ಸಂಭವಿಸಬಹುದು ಎಂಬ ಭಯದಲ್ಲಿಯೇ ನಾನು ಬದುಕುತ್ತಿದ್ದೇನೆ" ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ತಮ್ಮ ಮುಂಬರುವ ಸಿನಿಮಾ ಮಾತೃಭೂಮಿ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ವೈಯಕ್ತಿಕ ಭದ್ರತೆ ಮತ್ತು ಆತಂಕದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಸಲ್ಮಾನ್ ಖಾನ್ ಹೇಳಿದ್ದೇನು?

"ನಮ್ಮ ನಿಜ ಜೀವನದಲ್ಲಿ 24 ಗಂಟೆಗಳ ಕಾಲ ಸಂಪೂರ್ಣ ಭದ್ರತೆಯ ನಡುವೆ ಇದ್ದರೂ ಸಹ, ಏನಾದರೂ ಕೆಟ್ಟದ್ದು ಸಂಭವಿಸಬಹುದೇ ಎಂಬ ಭಯ ನಮ್ಮನ್ನು ಕಾಡುತ್ತಲೇ ಇರುತ್ತದೆ. ನಾವು ಯಾವಾಗಲೂ ಆತಂಕದಲ್ಲೇ ಇರುತ್ತೇವೆ" ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಮನೆಯಿಂದ ಯಾರೇ ಹೊರಗೆ ಹೋದರೂ, ಅವರು ಸುರಕ್ಷಿತವಾಗಿ ಮರಳುವವರೆಗೆ ಪೋಷಕರಿಗೆ ಆತಂಕ ಇದ್ದೇ ಇರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Salman Khan
ನಟನೆಯ ಪಾಠ ಮಾಡಲಿರುವ ಸಲ್ಮಾನ್ ಖಾನ್! ಮಕ್ಕಳಿಗಾಗಿ ಹೊಸ ಯೂಟ್ಯೂಬ್ ಚಾನೆಲ್ ಆರಂಭಿಸಿದ ಭಾಯಿಜಾನ್

ಮುಂದುವರೆದು, ತಮ್ಮ ಭದ್ರತಾ ಆತಂಕವನ್ನು ದೇಶದ ಗಡಿ ಕಾಯುವ ಸೈನಿಕರ ಕುಟುಂಬಗಳ ಪರಿಸ್ಥಿತಿಗೆ ಹೋಲಿಸಿದ ಸಲ್ಮಾನ್, "ತಮ್ಮ ಪತಿ, ಸಹೋದರರು ಅಥವಾ ಹೆಣ್ಣುಮಕ್ಕಳು ಗಡಿಯಲ್ಲಿ ಅಪಾಯಕಾರಿ ಸನ್ನಿವೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿದಾಗ, ಆ ಸೈನಿಕರ ಕುಟುಂಬಗಳು ಪ್ರತಿದಿನ ಎಂತಹ ಆತಂಕವನ್ನು ಎದುರಿಸುತ್ತಿರಬಹುದು ಎಂಬುದನ್ನು ಊಹಿಸಿಕೊಳ್ಳಿ" ಎಂದು ಹೇಳಿದ್ದಾರೆ.

ಸಲ್ಮಾನ್ ಖಾನ್‌ಗೆ ಬಿಗಿ ಭದ್ರತೆ ಯಾಕೆ?

ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಸಲ್ಮಾನ್ ಖಾನ್ ಅವರಿಗೆ ಹಲವು ಬಾರಿ ಜೀವ ಬೆದರಿಕೆಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಅವರಿಗೆ 'ವೈ ಪ್ಲಸ್' (Y+) ಶ್ರೇಣಿಯ ಭದ್ರತೆ ಒದಗಿಸಿದ್ದು, ಸದಾ ಶಸ್ತ್ರಸಜ್ಜಿತ ಪೊಲೀಸರು ಮತ್ತು ಖಾಸಗಿ ಅಂಗರಕ್ಷಕರ ಕಣ್ಗಾವಲಿನಲ್ಲಿ ಸಲ್ಮಾನ್ ಓಡಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X