ಹಿಂದಿ ಸಿನಿಮಾಗಳಲ್ಲಿ ನಟಿಸಬೇಕೆಂಬ ಬಯಕೆ ಸಹಜವಾಗಿಯೇ ಕೂಡಿಬಂತು: ಕೀರ್ತಿ ಸುರೇಶ್

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಾನು ಒಂದಲ್ಲ ಒಂದು ಹಂತದಲ್ಲಿ ಹಿಂದಿ ಚಿತ್ರರಂಗ ಪ್ರವೇಶಿಸಲು ಬಯಸಿದ್ದೆ. ಹಾಗೆಯೇ ಅದು ಅಂತಿಮವಾಗಿ ಆಗಿದೆ ಎಂದು ತಿಳಿಸಿದರು.
Keerthy Suresh
ಕೀರ್ತಿ ಸುರೇಶ್
Updated on: 

ಹಿಂದಿ ಸಿನಿಮಾಗಳಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿದ್ದೆನಾದರೂ ಅದು ಸಹಜವಾಗಿ ಕೂಡಿಬರಬೇಕು ಎಂದು ಬಯಸಿದ್ದಾಗಿ ದಕ್ಷಿಣ ಭಾರತದ ಚಿತ್ರರಂಗದ ಅತ್ಯಂತ ಪ್ರಭಾವಶಾಲಿ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಾನು ಒಂದಲ್ಲ ಒಂದು ಹಂತದಲ್ಲಿ ಹಿಂದಿ ಚಿತ್ರರಂಗ ಪ್ರವೇಶಿಸಲು ಬಯಸಿದ್ದೆ. ಹಾಗೆಯೇ ಅದು ಅಂತಿಮವಾಗಿ ಆಗಿದೆ ಎಂದು ತಿಳಿಸಿದರು. 'ಅಕ್ಕ' (Akka) ಅವರ ಈ ಪಯಣದ ಆರಂಭವಾಗಿದ್ದು, ನಂತರ 'ಬೇಬಿ ಜಾನ್' (Baby John) ಚಿತ್ರ ಬಂದಿದೆ. ಇದಲ್ಲದೆ, ರಾಜ್‌ಕುಮಾರ್ ರಾವ್ ಅವರೊಂದಿಗೆ 'ರಫ್ತಾರ್' (Raftaar) ಎಂಬ ಚಿತ್ರವನ್ನೂ ಮಾಡಿದ್ದು, ಅದು ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ತಮಿಳು ಚಲನಚಿತ್ರ 'ಸಾನಿ ಕಾಯಿಧಮ್' ನಲ್ಲಿನ ಅವರ ಅಭಿನಯವನ್ನು ನೋಡಿ, 'ಅಕ್ಕ' ಚಿತ್ರದ ನಿರ್ದೇಶಕ ಧರ್ಮರಾಜ್ ಶೆಟ್ಟಿ ಅವರು ಈ ಪಿರಿಯಡ್ ಕ್ರೈಮ್ ಥ್ರಿಲ್ಲರ್ ಸರಣಿಗಾಗಿ (series) ಅವರನ್ನು ಸಂಪರ್ಕಿಸಿದರು ಎಂಬುದನ್ನು ಅವರು ರಿವೀಲ್ ಮಾಡಿದರು. ಕೀರ್ತಿ ಸುರೇಶ್ ಪ್ರಸ್ತುತ ತಮ್ಮ ಹಿಂದಿ ಒಟಿಟಿ (OTT) ಸರಣಿ 'ಅಕ್ಕ'ದ ಬಿಡುಗಡೆಗಾಗಿ ಕಾಯುತ್ತಿದ್ದು, ಇದು ಅಕ್ಟೋಬರ್ 30 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ.

ಕೀರ್ತಿ ಸುರೇಶ್ ಮತ್ತು ರಾಧಿಕಾ ಆಪ್ಟೆ ಮುಖ್ಯ ಭೂಮಿಕೆಯಲ್ಲಿರುವ ಈ ಸರಣಿಯು, 1980ರ ದಶಕದ 'ಪೆರ್ನುರು' (Pernuru) ಎಂಬ ಕಾಲ್ಪನಿಕ ಸಾಮ್ರಾಜ್ಯದ ಹಿನ್ನೆಲೆಯನ್ನು ಹೊಂದಿದ್ದು, ಇದರಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ.

ಈ ಕಥೆಯು ಭವಾನಿ (ಕೀರ್ತಿ ಸುರೇಶ್) ಮತ್ತು ರುದ್ರ (ರಾಧಿಕಾ ಆಪ್ಟೆ) ಎಂಬ ಇಬ್ಬರು ಬಲಶಾಲಿ ಮಹಿಳೆಯರ ಸುತ್ತ ಸುತ್ತುತ್ತದೆ. ಇವರ ಭಿನ್ನ ದೃಷ್ಟಿಕೋನಗಳು ಮತ್ತು ಪರಸ್ಪರ ವೈಮನಸ್ಸುಗಳು ಆ ಸಾಮ್ರಾಜ್ಯದ ಅಧಿಕಾರ ಸಮೀಕರಣಗಳನ್ನು ರೂಪಿಸುತ್ತವೆ.

ತಮ್ಮ ವೃತ್ತಿಜೀವನವನ್ನು ಒಂದು ಓಟದ ಸ್ಪರ್ಧೆಯಂತೆ ಅಥವಾ ಹೆಚ್ಚು ಹೆಚ್ಚು ಚಿತ್ರಗಳನ್ನು ಮಾಡಲೇಬೇಕಾದ ಅನಿವಾರ್ಯತೆಯಂತೆ ತಾನು ನೋಡುವುದಿಲ್ಲ. ಹಿಂದಿ ಚಿತ್ರರಂಗದತ್ತ ತಾನು ಧಾವಿಸಿ ಹೋಗಿರಲಿಲ್ಲ, ಬದಲಾಗಿ ಅದು ಕಾಲಕ್ರಮೇಣ ಸಹಜವಾಗಿಯೇ ಕೂಡಿಬಂದಿತು ಎಂದು ಅವರು ವಿವರಿಸಿದರು.

Keerthy Suresh
ನಾನು ಬಾಲಿವುಡ್ ಪದಾರ್ಪಣೆ ಮಾಡಲು ಸಮಂತಾ ರುತ್ ಪ್ರಭು ಕಾರಣ: ನಟಿ ಕೀರ್ತಿ ಸುರೇಶ್

'ಅಕ್ಕ' ಸರಣಿಯನ್ನು ವೈಆರ್‌ಎಫ್ ಎಂಟರ್‌ಟೈನ್‌ಮೆಂಟ್ (YRF Entertainment) ನಿರ್ಮಿಸಿದೆ. ಇದರಲ್ಲಿ ತನ್ವಿ ಆಜ್ಮಿ, ಮಹೇಶ್ ಮಂಜ್ರೇಕರ್, ಅಂಶುಮಾನ್ ಪುಷ್ಕರ್ ಮತ್ತು ಮೋನಿಕಾ ಪನ್ವಾರ್ ಸೇರಿದಂತೆ ಪ್ರತಿಭಾವಂತ ಕಲಾವಿದರ ದಂಡೇ ಇದೆ. ಕೀರ್ತಿ ಸುರೇಶ್ ಅವರು 'ಗೀತಾಂಜಲಿ', 'ಇದು ಎನ್ನ ಮಾಯಂ', 'ಸಾನಿ ಕಾಯಿಧಮ್' ಮತ್ತು 'ದಸರಾ' ಮುಂತಾದ ಚಿತ್ರಗಳ ಮೂಲಕ ವ್ಯಾಪಕ ಮೆಚ್ಚುಗೆ ಹಾಗೂ ಕಮರ್ಷಿಯಲ್ ಯಶಸ್ಸನ್ನು ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com