'ಒಳ್ಳೆಯ ವ್ಯಕ್ತಿಯಾಗಿರಬೇಕು, ಅಡುಗೆ ಮಾಡಲು ಬರಬೇಕು': ಸಾಯಿ ಪಲ್ಲವಿಯನ್ನು ಮದುವೆಯಾಗುವ ಯುವಕನಲ್ಲಿರಬೇಕಾದ 5 ಗುಣಗಳು!

ಈ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗವು 2026ರ ನವೆಂಬರ್ 5 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಎರಡನೇ ಭಾಗವು 2027ರ ದೀಪಾವಳಿಯಂದು ಬಿಡುಗಡೆಯಾಗಲು ನಿಗದಿಯಾಗಿದೆ.
Sai Pallavi - Amitabh Bachchan
ಸಾಯಿ ಪಲ್ಲವಿ - ಅಮಿತಾಬ್ ಬಚ್ಚನ್
Updated on: 

ನವೆಂಬರ್ 5 ರಂದು ತಮ್ಮ ನಟನೆಯ ರಾಮಾಯಣ ಚಿತ್ರ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ, ಸಾಯಿ ಪಲ್ಲವಿ ಅವರು ಅಮಿತಾಭ್ ಬಚ್ಚನ್ ಅವರ 'ಕೌನ್ ಬನೇಗಾ ಕರೋಡ್‌ಪತಿ' (KBC) ಸೀಸನ್ 18ರ ದೀಪಾವಳಿ ವಿಶೇಷ ಸಂಚಿಕೆಯಲ್ಲಿ, ತಮ್ಮ ಸಹನಟರಾದ ರಣಬೀರ್ ಕಪೂರ್ ಮತ್ತು ರವಿ ದುಬೆ ಅವರೊಂದಿಗೆ ಕಾಣಿಸಿಕೊಂಡರು. ಈ ಕಾರ್ಯಕ್ರಮದಲ್ಲಿ, ಸಾಯಿ ಪಲ್ಲವಿ ತಮ್ಮ ಜೀವನ ಸಂಗಾತಿಯಲ್ಲಿ ತಾನು ಬಯಸುವ ಗುಣಗಳ ಪಟ್ಟಿಯನ್ನು ಹಂಚಿಕೊಂಡರು.

'ಮೊದಲನೆಯದಾಗಿ, ಅವರು ಒಬ್ಬ ಒಳ್ಳೆಯ ಮನುಷ್ಯರಾಗಿರಬೇಕು. ಅವರು ಅತಿಯಾಗಿ ಸೆಸ್ಫ್ ಸೆಂಟ್ರಿಕ್ ಆಗಿರಬಾರದು. ಬದಲಾಗಿ, ತಮ್ಮ ಬಗ್ಗೆ ತಾವೇ ಆತ್ಮಾವಲೋಕನ ಮಾಡಿಕೊಳ್ಳುವವರಾಗಿರಬೇಕು; ಅಂದರೆ, ತಮ್ಮ ಕಾರ್ಯಗಳ ಬಗ್ಗೆ ಸ್ವತಃ ಪರಿಶೀಲನೆ ನಡೆಸುವವರಾಗಿರಬೇಕು. ಜೀವನದಲ್ಲಿ ತಾನು ಎಲ್ಲಿದ್ದೇನೆ ಎಂಬ ಅರಿವು ಅವರಿಗಿರಬೇಕು. ತಪ್ಪುಗಳು ಯಾರಿಂದಲಾದರೂ ಆಗಬಹುದು, ಆದರೆ ಆ ತಪ್ಪುಗಳನ್ನು ತಿದ್ದಿಕೊಳ್ಳುವ ಗುಣವೂ ಅವರಲ್ಲಿರಬೇಕು. ಬದಲಿಗೆ, ತಮ್ಮ ತಪ್ಪುಗಳಿಗೆ ಬೇರೆಯವರನ್ನು ದೂಷಿಸುವವರಾಗಿರಬಾರದು. ಹೀಗೆ ದೊಡ್ಡ ಪಟ್ಟಿಯೇನೂ ಇಲ್ಲ, ಆದರೆ ಅವರು ಒಬ್ಬ ಒಳ್ಳೆಯ ವ್ಯಕ್ತಿಯಾಗಿರಬೇಕು. ಜೊತೆಗೆ, ಅವರಿಗೆ ಅಡುಗೆ ಮಾಡಲು ತಿಳಿದಿದ್ದರೆ ಇನ್ನೂ ಒಳ್ಳೆಯದು' ಎಂದು ಅಮಿತಾಬ್ ಬಚ್ಚನ್ ಅವರು ತಮ್ಮ ಸಂಗಾತಿಯಲ್ಲಿ ತಾನು ಬಯಸುವ ಗುಣಗಳ ಬಗ್ಗೆ ಕೇಳಿದಾಗ ಸಾಯಿ ಪಲ್ಲವಿ ಉತ್ತರಿಸಿದರು.

ಮತ್ತೊಂದು ಪ್ರೋಮೋದಲ್ಲಿ, 'ರಾಮಾಯಣ'ದಲ್ಲಿ ಸೀತೆಯ ಪಾತ್ರವನ್ನು ನಿರ್ವಹಿಸುವ ಅವಕಾಶ ಸಿಕ್ಕಾಗ ತಮ್ಮ ಮೊದಲ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಅವರು ನೆನಪಿಸಿಕೊಂಡರು. 'ಈ ಬಾರಿ ನಾನು ಹೆಚ್ಚು ತರ್ಕಬದ್ಧವಾಗಿ ಯೋಚಿಸಲು ಬಯಸಲಿಲ್ಲ. ಸಾಮಾನ್ಯವಾಗಿ ನಾನು ಯಾವುದೇ ಪಾತ್ರವನ್ನು ನಿರ್ವಹಿಸುವಾಗ, 'ಆ ಪಾತ್ರಕ್ಕೆ ನಾನೇನು ನೀಡಬಲ್ಲೆ?' ಎಂದು ಯೋಚಿಸುತ್ತೇನೆ. ಆದರೆ, ಸೀತಾ ಮಾತೆಯಂತಹ ಪಾತ್ರವನ್ನು ನಿರ್ವಹಿಸುವಾಗ, 'ಈ ಪಾತ್ರದಿಂದ ನನಗೇನು ಸಿಗಬಹುದು? ಇದರಿಂದ ನಾನೇನು ಜ್ಞಾನವನ್ನು ಪಡೆದುಕೊಳ್ಳಬಹುದು?' ಎಂದು ಯೋಚಿಸಿದ್ದು ಇದೇ ಮೊದಲು. ಹಾಗಾಗಿ, ಈ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಇರಿಸಿಕೊಳ್ಳಲು ನಾನು ಬಯಸಿದೆ. ಬೇರೆ ಯಾವುದರ ಬಗ್ಗೆಯೂ ಹೆಚ್ಚು ಯೋಚಿಸಲು ಹೋಗಲಿಲ್ಲ. ಸೀತಾ ಮಾತೆ ಪ್ರಾರ್ಥಿಸಿಕೊಂಡು, ಈ ಅವಕಾಶವನ್ನು ಒಪ್ಪಿಕೊಂಡೆ' ಎಂದು ಅವರು ತಿಳಿಸಿದರು.

ಈ ಸಂಚಿಕೆಯು ಅಕ್ಟೋಬರ್ 30ರಂದು ಪ್ರಸಾರವಾಗಲಿದೆ.

Sai Pallavi - Amitabh Bachchan
'ರಾಮಾಯಣ'ದಲ್ಲಿ ಸೀತೆ ಪಾತ್ರದ ಬಳಿಕ ಧನುಷ್-ಮಮ್ಮೂಟ್ಟಿ ನಟನೆಯ 'ಓಂ' ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾದ ಸಾಯಿ ಪಲ್ಲವಿ!

'ರಾಮಾಯಣ' ಚಿತ್ರವನ್ನು ₹4,000 ಕೋಟಿ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ.

ಪ್ರಖರ್ ಗುಪ್ತಾ ಅವರೊಂದಿಗೆ ಮಾತನಾಡುತ್ತಾ ನಿರ್ಮಾಪಕ ನಮಿತ್ ಮಲ್ಹೋತ್ರಾ, 'ಆರು-ಏಳು ವರ್ಷಗಳ ಹಿಂದೆ ನಾವು ಇದನ್ನು ಮಾಡಲು ಹೊರಟಾಗ, ನಾನು ಹುಚ್ಚನೆಂದು ಜನರು ಭಾವಿಸಿದ್ದರು; ಏಕೆಂದರೆ ಭಾರತದ ಯಾವುದೇ ಚಿತ್ರವೂ ಈ ಪ್ರಮಾಣದ ವ್ಯಾಪ್ತಿಯಲ್ಲಿ ಇರಲಿಲ್ಲ. ಸರಳವಾಗಿ ಹೇಳುವುದಾದರೆ, ಎರಡೂ ಭಾಗಗಳನ್ನು ಸೇರಿಸಿ ಇದರ ಬಜೆಟ್ ಸುಮಾರು 500 ಮಿಲಿಯನ್ ಡಾಲರ್‌ಗಳಷ್ಟಾಗುತ್ತದೆ, ಅಂದರೆ 4,000 ಕೋಟಿ ರೂಪಾಯಿಗಳಿಗೂ ಹೆಚ್ಚು' ಎಂದರು.

'ಜಾಗತಿಕ ಮಟ್ಟದಲ್ಲಿ ವೀಕ್ಷಿಸಲ್ಪಡಲು ಅರ್ಹವಾದ ಅತ್ಯಂತ ಶ್ರೇಷ್ಠ ಮಹಾಕಾವ್ಯವೊಂದಕ್ಕಾಗಿ ನಾವು ವಿಶ್ವದ ಅತಿದೊಡ್ಡ ಚಿತ್ರವನ್ನು ನಿರ್ಮಿಸುತ್ತಿದ್ದೇವೆ. ಆದರೂ, ಹಾಲಿವುಡ್‌ನ ಕೆಲವು ಬೃಹತ್ ಚಿತ್ರಗಳಿಗಿಂತಲೂ ಹೆಚ್ಚು ದಕ್ಷತೆಯಿಂದ ನಾವು ಇದನ್ನು ಮಾಡುತ್ತಿದ್ದೇವೆ ಎಂದು ನಾನು ನಂಬುತ್ತೇನೆ. ನಾವು ಬೇಜವಾಬ್ದಾರಿಯಿಂದ ವರ್ತಿಸುತ್ತಿಲ್ಲ; ಬದಲಾಗಿ, ನಾವು ಮಹತ್ವಾಕಾಂಕ್ಷೆಯನ್ನು ಹೊಂದಿದ್ದೇವೆ, ಆದರೆ ವಾಸ್ತವದ ನೆಲೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದೇವೆ' ಎಂದರು.

ಈ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗವು 2026ರ ದೀಪಾವಳಿಗೂ ಮುನ್ನ, ಅಂದರೆ ನವೆಂಬರ್ 5 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಎರಡನೇ ಭಾಗವು 2027ರ ದೀಪಾವಳಿಯಂದು ಬಿಡುಗಡೆಯಾಗಲು ನಿಗದಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com