'ನಾವು ಮುಸ್ಲಿಮರೇ?' 8 ವರ್ಷದ ಮಗ ಪ್ರಶ್ನಿಸಿದಾಗ ನನಗೆ ಉತ್ತರಿಸಲಾಗಲಿಲ್ಲ, ಏಕೆಂದರೆ ಅವರಿಗೆ ಧರ್ಮದ ಬಗ್ಗೆ ಹೇಳಿರಲಿಲ್ಲ; ಜಾವೇದ್ ಅಖ್ತರ್

ಫರ್ಹಾನ್ ಮತ್ತು ಜೋಯಾ ತಮ್ಮ ಸ್ವಂತ ಪ್ರತಿಭೆ ಹಾಗೂ ಸಾಮರ್ಥ್ಯದಿಂದ ಇದನ್ನು ಸಾಧಿಸಿದ್ದಾರೆ, ಅದರಲ್ಲಿ ಅವರ ಪೋಷಕರ ಪಾತ್ರವಿಲ್ಲ, ಹೀಗಾಗಿ ನಾನು ಅವರ ಬಗ್ಗೆ ಹೆಮ್ಮೆ ಪಡುತ್ತೇನೆ ಎಂದಿದ್ದಾರೆ.
ಜಾವೇದ್ ಅಖ್ತರ್
ಜಾವೇದ್ ಅಖ್ತರ್
Updated on

ಹಿರಿಯ ನಟ ಗೀತರಚನೆಕಾರ ಮತ್ತು ಚಿತ್ರಕಥೆಗಾರ ಜಾವೇದ್ ಅಖ್ತರ್ ತಮ್ಮ ಮಕ್ಕಳಾದ ಫರ್ಹಾನ್ ಅಖ್ತರ್ ಮತ್ತು ಜೋಯಾ ಅಖ್ತರ್ ಬಗ್ಗೆ ಸಂದರ್ಶನದವೊಂದರಲ್ಲಿ ಮಾತನಾಡಿದ್ದಾರೆ. ಅವರ ಪಾಲನೆ, ಮೌಲ್ಯಗಳು ಮತ್ತು ವೃತ್ತಿಪರ ಪ್ರಯಾಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಅವರ ಮೊದಲ ಪತ್ನಿಹನಿ ಇರಾನಿ ಅವರಿಂದ ಫರ್ಹಾನ್ ಅಖ್ತರ್ ಮತ್ತು ಜೋಯಾ ಅಖ್ತರ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ಅವರು ತಮ್ಮ ಮಕ್ಕಳ ಬಾಲ್ಯದ ವರ್ಷಗಳಲ್ಲಿ ಅವರ ಪಾಲನೆಯ ಬಗ್ಗೆ ಮಾತನಾಡಿದ್ದಾರೆ ಅದಕ್ಕೆ ಹನಿ ಅವರ ಸಂಪೂರ್ಣ ಕೃತಜ್ಞತೆ ಸಲ್ಲಿಸಿದರು. ಜಾವೇದ್ ಫರ್ಹಾನ್ ಮತ್ತು ಜೋಯಾ ಅವರ ವೃತ್ತಿಪರ ಸಾಧನೆಗಳನ್ನು ಶ್ಲಾಘಿಸಿದ್ದಾರೆ.

ಫರ್ಹಾನ್ ಮತ್ತು ಜೋಯಾ ತಮ್ಮ ಸ್ವಂತ ಪ್ರತಿಭೆ ಹಾಗೂ ಸಾಮರ್ಥ್ಯದಿಂದ ಇದನ್ನು ಸಾಧಿಸಿದ್ದಾರೆ, ಅದರಲ್ಲಿ ಅವರ ಪೋಷಕರ ಪಾತ್ರವಿಲ್ಲ, ಹೀಗಾಗಿ ನಾನು ಅವರ ಬಗ್ಗೆ ಹೆಮ್ಮೆ ಪಡುತ್ತೇನೆ ಎಂದಿದ್ದಾರೆ.

ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅವರ ಯಶಸ್ಸಿನಲ್ಲಿ ನನ್ನ ಕೊಡುಗೆ ಇಲ್ಲ, ಆದರೆ ಅದೇ ಸಮಯದಲ್ಲಿ ಅವರು ಒಳ್ಳೆಯ ಕೆಲಸ ಮತ್ತು ಯೋಗ್ಯ ಕೆಲಸ ಮಾಡುವ ಮೂಲಕ ಯಶಸ್ಸನ್ನು ಸಾಧಿಸಿದ್ದಾರೆ ಎಂಬುದು ನನಗೆ ಹೆಮ್ಮೆ ತರುವ ಸಂಗತಿ. ಅವರು ಯಾವುದೇ ಬೆಲೆ ತೆತ್ತಾದರೂ ಯಶಸ್ಸು, ಹೆಸರು, ಖ್ಯಾತಿ, ಹಣವನ್ನು ಗಳಿಸಲು ಹತಾಶರಾಗಿರಲಿಲ್ಲ. ಅವರಿಗೆ ತಮ್ಮದೇ ಆದ ಘನತೆ ಇದೆ ಮತ್ತು ಅವರ ಘನತೆ ಕೆಲಸದಲ್ಲೂ ಇದೆ. ಅದು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ ಎಂದು ಹೊಗಳಿದ್ದಾರೆ.

ಜಾವೇದ್ ಅಖ್ತರ್
'ಮಿಸ್ಟರ್ 10 ಪರ್ಸೆಂಟ್': ಶೇ 3-4ರಷ್ಟಿರುವ ಹಿಂದೂಗಳನ್ನು ಸಹಿಸಿಕೊಳ್ಳುತ್ತಿದ್ದೇವೆ ಎಂದ ಪಾಕ್ ಅಧ್ಯಕ್ಷನಿಗೆ ಜಾವೇದ್ ಅಖ್ತರ್ ತಿರುಗೇಟು!

ಮಕ್ಕಳನ್ನು ಉತ್ತಮವಾಗಿ ರೂಪಿಸಿದ ಕೀರ್ತಿ ಹನಿ ಇರಾನಿಗೆ ಸಲ್ಲುತ್ತದೆ; ಆಕೆ ಮಕ್ಕಳನ್ನು ಉತ್ತಮವಾಗಿ ಬೆಳೆಸಿದ್ದಾಳೆ. ಹನಿ ಮತ್ತು ನಾನು ಬೇರ್ಪಟ್ಟಾಗ, ಜೋಯಾಗೆ ಬಹುಶಃ 11 ವರ್ಷ ಪರ್ಹಾನ್ ಗೆ 9 ವರ್ಷ. ಫರ್ಹಾನ್ ಮತ್ತು ಜೋಯಾ ಹನಿಯೊಂದಿಗೆ ವಾಸಿಸುತ್ತಿದ್ದರು, ಅವರು ಅವರನ್ನು ರೂಪಿಸುವಲ್ಲಿ ಆಕೆ ದೊಡ್ಡ ಪಾತ್ರವನ್ನು ವಹಿಸಿದ್ದರು.

ಮಕ್ಕಳಿಗೆ ಏನು ಮಾಡಬೇಕು ಮತ್ತು ಏನು ಮಾಡಬಾರದು, ಯಾವ ಸ್ವಾತಂತ್ರ್ಯ ಹೊಂದಿರಬೇಕು ಮತ್ತು ಹೊಂದಿರಬಾರದು ಇತ್ಯಾದಿಗಳನ್ನು ಅರ್ಥಮಾಡಿಕೊಳ್ಳುವಂತೆ ನೋಡಿಕೊಂಡರು. ಅವರು ಯಾವ ಮೌಲ್ಯಗಳು ಮತ್ತು ನೈತಿಕತೆಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಏನನ್ನು ಸ್ವೀಕರಿಸಬಾರದು ಎಂಬುದನ್ನು ಅವರು ಅರ್ಥಮಾಡಿಕೊಳ್ಳುವಂತೆ ಅವರು ಖಚಿತಪಡಿಸಿಕೊಂಡರು. ಆದ್ದರಿಂದ, ಮಕ್ಕಳು ಉತ್ತಮ ಮನುಷ್ಯರಾಗುವಲ್ಲಿ ಹನಿ ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು ಜಾವೇದ್ ಹೇಳಿದರು.

ನಾನು ಇಂದಿಗಿಂತ ಅಂದು ಹೆಚ್ಚು ಓದುತ್ತಿದ್ದೆ, ಅದಕ್ಕಿಂತ ಹೆಚ್ಚು. ನಾನು ಬಹಳಷ್ಟು ಓದುತ್ತಿದ್ದೆ. ಮಕ್ಕಳು ನೀವು ಮಾಡುವುದನ್ನು ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ, ಹೇಗೋ ಈ ಓದುವ ಅಭ್ಯಾಸ ನನಗಿಂತ ಅವರಿಗೆ ಹೆಚ್ಚು ಇದೆ. ಅವರು ನನಗಿಂತ ಹೆಚ್ಚು ಓದುತ್ತಾರೆ ಎಂದು ಹೇಳಲು ನನಗೆ ಮುಜುಗರವಾಗುತ್ತಿದೆ ಎಂದಿದ್ದಾರೆ.

ಸಂದರ್ಶನದ ಸಮಯದಲ್ಲಿ, ಜಾವೇದ್ ಅಖ್ತರ್ ಅವರು ತಮ್ಮ ಮಕ್ಕಳಿಗೆ ಧರ್ಮಗಳನ್ನು ಪರಿಚಯಿಸಲಿಲ್ಲ ಎಂದು ಮಾಹಿತಿ ನೀಡಿದ್ದಾರೆ. ನಾನು ಧಾರ್ಮಿಕ ವ್ಯಕ್ತಿ ಅಲ್ಲ. ಏಕೆಂದರೆ ಆ ಹೊತ್ತಿಗೆ, ಬಹುಶಃ ಬೇರೆ ಮಕ್ಕಳ ತಂದೆಯಂದಿರು ಅವರಿಗೆ ಧರ್ಮದ ಬಗ್ಗೆ ಏನಾದರೂ ಕಲಿಸಿಕೊಡುತ್ತಿದ್ದರು. ಮಕ್ಕಳಿಗೆ 11 ಅಥವಾ 12 ವರ್ಷ ವಯಸ್ಸಿನವರಾಗುವ ಹೊತ್ತಿಗೆ, ನಿಮಗೆ ಒಂದು ಧರ್ಮ ಸಿಗುತ್ತದೆ. ನಾನು ಅವರಿಗೆ ಯಾವುದೇ ಧರ್ಮವನ್ನು ನೀಡಲಿಲ್ಲ. ಫರ್ಹಾನ್ ಬಹುಶಃ ಏಳು ಅಥವಾ ಎಂಟು ವರ್ಷ ವಯಸ್ಸಿನವನಾಗಿರಬಹುದು, ಒಂದು ದಿನ ಅವನು ಶಾಲೆಯಿಂದ ಹಿಂತಿರುಗಿ ಬಂದಗ ತನ್ನ ಬ್ಯಾಗ್ ಅನ್ನು ಅವನ ಹೆಗಲ ಮೇಲೆ ಇಟ್ಟುಕೊಂಡಿದ್ದನು. ನನ್ನ ಬಳಿಗೆ ಓಡಿ ಬಂದು, 'ನಾವು ಮುಸ್ಲಿಮರೇ? ಎಂದು ಕೇಳಿದ. ಹಾಗಾಗಿ, ನಾನು ಅವನಿಗೆ ಹೇಳಿದೆ, 'ಕೇಳು, ನೀನು ಹುಟ್ಟಿದಾಗ, ನೀನು ಯಾವುದಾದರೂ ಒಂದು ನಗರದಲ್ಲಿ ಅಂದರೆ ಪುಣೆ, ಮುಂಬೈ, ಆಗ್ರಾ, ಅಹಮದಾಬಾದ್, ಲಂಡನ್, ನ್ಯೂಯಾರ್ಕ್, ಹೀಗೆ ಎಲ್ಲಿಯಾದರೂ ಜನಿಸುತ್ತೀಯಾ ಹಾಗೆಯೇ ನೀನು ಯಾವುದಾದರೂ ಒಂದು ಸಮುದಾಯದಲ್ಲಿ ಜನಿಸುತ್ತೀಯ, ಆದರೆ ನೀನು ಯಾವ ನಗರದಲ್ಲಿ ಹುಟ್ಟಿದ್ದೀಯ ಅಥವಾ ಯಾವ ಸಮುದಾಯದಲ್ಲಿ ಜನಿಸಿದ್ದೀಯ ಎಂಬುದು ಮುಖ್ಯವಲ್ಲ, ನೀನು ಏನು ಎಂಬುದು ಮುಖ್ಯ ಎಂದು ಹೇಳಿದ್ದಾಗಿ ಸ್ಮರಿಸಿದ್ದಾರೆ. ನನ್ನ ಪ್ರಕಾರ, ಅವರು ಸಂಪೂರ್ಣವಾಗಿ ಧಾರ್ಮಿಕರಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com