ರಾಣಿ ಮುಖರ್ಜಿಗೆ ಮಾತೃ ವಿಯೋಗ: ತಾಯಿ ಕೃಷ್ಣಾ ಮುಖರ್ಜಿ ನಿಧನ; ಖಾಸಗಿತನ ಗೌರವಿಸುವಂತೆ ಬಾಲಿವುಡ್​​ ನಟಿ ಮನವಿ!

"ಅತ್ಯಂತ ದುಃಖದೊಂದಿಗೆ ನಾವು ಈ ವಿಷಯವನ್ನು ಹಂಚಿಕೊಳ್ಳುತ್ತಿದ್ದೇವೆ; ರಾಣಿ ಮುಖರ್ಜಿ ಅವರ ತಾಯಿ ಶ್ರೀಮತಿ ಕೃಷ್ಣಾ ಮುಖರ್ಜಿ (75) ಅವರು ಇಂದು ಮಧ್ಯಾಹ್ನ ನಿಧನರಾದರು" ಎಂದು ನಿರ್ಮಾಣ ಸಂಸ್ಥೆ 'ಯಶ್ ರಾಜ್ ಫಿಲ್ಮ್ಸ್' ಪ್ರಕಟಣೆಯಲ್ಲಿ ತಿಳಿಸಿದೆ.
Actor Rani Mukerji's mother Krishna Mukerji dies at 75
ರಾಣಿ ಮುಖರ್ಜಿ - ಕೃಷ್ಣಾ ಮುಖರ್ಜಿ
Updated on

ಮುಂಬೈ: ಬಾಲಿವುಡ್ ಖ್ಯಾತ ನಟಿ ರಾಣಿ ಮುಖರ್ಜಿ ಅವರ ತಾಯಿ ಹಾಗೂ ಹಿನ್ನಲೆ ಗಾಯಕಿಯಾಗಿದ್ದ ಕೃಷ್ಣಾ ಮುಖರ್ಜಿ ಅವರು ಮಂಗಳವಾರ ಮಧ್ಯಾಹ್ನ ತಮ್ಮ 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

"ಅತ್ಯಂತ ದುಃಖದೊಂದಿಗೆ ನಾವು ಈ ವಿಷಯವನ್ನು ಹಂಚಿಕೊಳ್ಳುತ್ತಿದ್ದೇವೆ; ರಾಣಿ ಮುಖರ್ಜಿ ಅವರ ತಾಯಿ ಶ್ರೀಮತಿ ಕೃಷ್ಣಾ ಮುಖರ್ಜಿ (75) ಅವರು ಇಂದು ಮಧ್ಯಾಹ್ನ ನಿಧನರಾದರು" ಎಂದು ನಿರ್ಮಾಣ ಸಂಸ್ಥೆ 'ಯಶ್ ರಾಜ್ ಫಿಲ್ಮ್ಸ್' ಪ್ರಕಟಣೆಯಲ್ಲಿ ತಿಳಿಸಿದೆ.

ಆದರೆ, ರಾಣಿ ಮುಖರ್ಜಿ ತಾಯಿಯ ಸಾವಿಗೆ ಕಾರಣವನ್ನು ಬಹಿರಂಗಪಡಿಸಿಲ್ಲ ಮತ್ತು ಕುಟುಂಬದ ಖಾಸಗಿತನವನ್ನು ಗೌರವಿಸುವಂತೆ ಕೋರಲಾಗಿದೆ.

Actor Rani Mukerji's mother Krishna Mukerji dies at 75
Video: ಪತ್ನಿ, ಮಗಳೊಂದಿಗೆ ಲಾಲ್‌ಬಾಗ್ಚಾ ರಾಜನ ದರ್ಶನ ಪಡೆದ ಶಾರುಖ್ ಖಾನ್; ಗಣೇಶನಿಗೆ ಭಕ್ತಿಯಿಂದ ಕೈಮುಗಿದ ಕಿಂಗ್ ಖಾನ್!

"ನಿಮ್ಮ ಪ್ರೀತಿ, ಪ್ರಾರ್ಥನೆ ಮತ್ತು ಬೆಂಬಲಕ್ಕಾಗಿ ಕುಟುಂಬವು ಆಳವಾದ ಕೃತಜ್ಞತೆಯನ್ನು ಸಲ್ಲಿಸುತ್ತದೆ ಹಾಗೂ ಈ ತೀವ್ರ ದುಃಖದ ಸಮಯದಲ್ಲಿ ದಯವಿಟ್ಟು ಖಾಸಗಿತನಕ್ಕೆ ಗೌರವ ನೀಡಿ" ಎಂದು ಮನವಿ ಮಾಡಿದೆ.

ಕೃಷ್ಣಾ ಮುಖರ್ಜಿ ಅವರು ಹಿನ್ನೆಲೆ ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದರು; ಅವರು 'ಹೈವಾನ್' (1977) ಮತ್ತು 'ತೀಸ್ರಿ ಆಂಖ್' (1982) ನಂತಹ ಚಲನಚಿತ್ರಗಳ ಹಾಡುಗಳಿಗೆ ಧ್ವನಿ ನೀಡಿದ್ದರು.

ಬಂಗಾಳಿ ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಕೊಂಡಿದ್ದ ಕೃಷ್ಣಾ ಮುಖರ್ಜಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರೆಂದು ತಿಳಿದು ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com