ಲೀವರ್ ಕ್ಯಾನ್ಸರ್ ಗೆ 'ವೆಲ್ ಕಮ್' ಖ್ಯಾತಿಯ ಹಿರಿಯ ಬಾಲಿವುಡ್ ನಟ ಮುಷ್ತಾಕ್ ಖಾನ್ ಬಲಿ!

ಅವರಿಗೆ 75 ವರ್ಷ ವಯಸ್ಸಾಗಿತ್ತು. ಲಿವರ್ ಕ್ಯಾನ್ಸರ್ (ಯಕೃತ್ತಿನ ಕ್ಯಾನ್ಸರ್) ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಸುಮಾರು ಎರಡು ವಾರಗಳ ಹಿಂದೆ ಮುಂಬೈನ ಉಪನಗರದಲ್ಲಿರುವ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
Veteran actor Mushtaq Khan
ಮುಷ್ತಾಕ್ ಖಾನ್
Updated on: 

ಮುಂಬೈ: 'ವೆಲ್ ಕಮ್, 'ಗದರ್' ಮತ್ತು 'ಹಮ್ ಹೈ ರಾಹಿ ಪ್ಯಾರ್ ಕೆ' ಮುಂತಾದ ಹಿಟ್ ಚಿತ್ರಗಳು ಸೇರಿದಂತೆ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪೋಷಕ ಪಾತ್ರಗಳ ಮೂಲಕ ಹೆಸರುವಾಸಿಯಾಗಿದ್ದ ನಟ ಮುಷ್ತಾಕ್ ಖಾನ್ ಗುರುವಾರ ನಿಧನ ಹೊಂದಿದ್ದಾರೆ.

ಅವರಿಗೆ 75 ವರ್ಷ ವಯಸ್ಸಾಗಿತ್ತು. ಲಿವರ್ ಕ್ಯಾನ್ಸರ್ (ಯಕೃತ್ತಿನ ಕ್ಯಾನ್ಸರ್) ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಸುಮಾರು ಎರಡು ವಾರಗಳ ಹಿಂದೆ ಮುಂಬೈನ ಉಪನಗರದಲ್ಲಿರುವ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಸಂಜೆ 7 ಗಂಟೆ ಸುಮಾರಿಗೆ ನಿಧನರಾದರು ಎಂದು ಅವರ ಪುತ್ರ ಮೊಹ್ಸಿನ್ ತಿಳಿಸಿದ್ದಾರೆ.

ಹೊಟ್ಟೆ ನೋವಿನ ಸಮಸ್ಯೆ ಇದ್ದಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ದೆವು, ಅಲ್ಲಿ ಅವರಿಗೆ ಕ್ಯಾನ್ಸರ್ ಇರುವುದನ್ನು ವೈದ್ಯರು ಪತ್ತೆಹಚ್ಚಿದರು. ಕಳೆದ ಕೆಲವು ದಿನಗಳಲ್ಲಿ ಅವರ ಆರೋಗ್ಯ ಹದಗೆಟ್ಟಿತ್ತು ಎಂದು ಅವರ ಪುತ್ರ ಮೊಹ್ಸಿನ್ ಸುದ್ದಿಸಂಸ್ಥೆ ಪಿಟಿಐಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಐದು ದಶಕಗಳ ವೃತ್ತಿಜೀವನದಲ್ಲಿ, ಖಾನ್ 500ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ತಮ್ಮ ಪೋಷಕ ಪಾತ್ರಗಳ ಮೂಲಕ ಹೆಚ್ಚಿನ ಜನಪ್ರಿಯತೆ ಹೊಂದಿದ್ದರು. ಅವರ ಪ್ರಮುಖ ಹಿಟ್ ಸಿನಿಮಾಗಳಲ್ಲಿ 'ಆಶಿಕಿ', 'ದಿಲ್ ಹೈ ಕಿ ಮಂತಾ ನಹೀನ್', 'ಸಾಥಿ', 'ಸಡಕ್', 'ಜುನೂನ್', 'ಗುನಾಹ್', 'ಸರ್', 'ಗದರ್', 'ವೆಲ್ಕಮ್' ಮತ್ತು 'ಗದರ್ 2' ಮುಂತಾದವು ಸೇರಿವೆ.

ನವೆಂಬರ್ 2024ರಲ್ಲಿ ಮುಷ್ತಾಕ್ ಖಾನ್ ಅಪಹರಣಕ್ಕೊಳಗಾಗಿ ಸುದ್ದಿಯಲ್ಲಿದ್ದರು. ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ನೆಪದಲ್ಲಿ ಅವರನ್ನು ಉತ್ತರ ಪ್ರದೇಶಕ್ಕೆ ಕರೆಸಿಕೊಂಡು ನವೆಂಬರ್ 20 ರಂದು ದೆಹಲಿಯಿಂದ ಬಿಜ್ನೋರ್ ಗೆ ಕರೆದೊಯ್ದು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು.

Veteran actor Mushtaq Khan
Watch | ಕನ್ನಡ ನಟ, ನಿರ್ಮಾಪಕ ದಿಲೀಪ್ ರಾಜ್ ನಿಧನ

ಕಿಡಿಗೇಡಿಗಳು ಅವರಿಂದ2.20 ಲಕ್ಷ ರೂ. ಕಸಿದುಕೊಂಡಿದ್ದರು. ಆದರೆ ಮುಷ್ತಾಕ್ ಅವರು ಮರು ದಿನವೇ ಅವರ ಬಂಧನದಿಂದ ತಪ್ಪಿಸಿಕೊಂಡು ಬಂದಿದ್ದರು. ಖಾನ್ ಅವರು ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ. ನಾಳೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com